Spiritual: ಮನುಷ್ಯನಲ್ಲಿರುವ ಕೆಲ ಗುಣಗಳು, ಅವನನ್ನು ಉದ್ಧಾರವಾಗಲು ಬಿಡುವುದಿಲ್ಲ. ಈ ಬಗ್ಗೆ ಭಗವದ್ಗೀತೆಯಲ್ಲಿ ಹೇಳಲಾಗಿದೆ. ಭಗವದ್ಗೀತೆಯ ಪ್ರಕಾರ, ಮನುಷ್ಯನಲ್ಲಿರುವ 3 ಗುಣಗಳೇ ಅವನ ಅವನತಿಗೆ ಕಾರಣವಾಗುತ್ತದೆ. ಹಾಗಾದ್ರೆ ಆ ಕಾರಣಗಳು ಯಾವುದು ಅಂತಾ ತಿಳಿಯೋಣ ಬನ್ನಿ..
ದುರಾಸೆ. ಮನುಷ್ಯನಿಗೆ ಆಸೆ ಇರಬೇಕು ಅನ್ನುವುದು ನಿಜ. ಆದರೆ ದುರಾಸೆ ಇರಬಾರದು. ಮನುಷ್ಯನಿಗಿರುವ ದುರಾಸೆಯೇ, ಅವನ ಜೀವನ ಹಾಳು ಮಾಡುತ್ತದೆ. ಅಡ್ಡದಾರಿ ಹಿಡಿಯುವಂತೆ ಮಾಡುತ್ತದೆ. ಈ ಭೂಮಿ ಮೇಲಿನ ಪ್ರತೀ ಜೀವಿಯೂ ಒಂದಲ್ಲ ಒಂದು ದಿನ ಸಾಯಲೇಬೇಕು. ಇದನ್ನು ಅರಿತು ಉತ್ತಮ ಕಾರ್ಯಗಳನ್ನು ಮಾಡುತ್ತ ಬದುಕುವ ಮನುಷ್ಯ, ಪರಿಪೂರ್ಣ ಜೀವನ ನಡೆಸುತ್ತಾನೆ.
ಅಹಂಕಾರ. ಮನುಷ್ಯನ ಪರಮ ಶತ್ರುವೇ ಅವನಲ್ಲಿರುವ ಅಹಂಕಾರ. ಯಾರಲ್ಲಿ ಅಹಂಕಾರ ತುಂಬಿರುತ್ತದೆಯೋ, ಅವರಿಗೆ ಹೆಚ್ಚು ಕೋಪ ಬರುತ್ತದೆ. ಆ ಅಹಂಕಾರದಿಂದ ಬರುವ ಕೋಪವೇ ಅವರ ಜೀವನವನ್ನ ಹಾಳು ಮಾಡುತ್ತದೆ. ಇಡೀ ಜೀವನ ನೀವು ಮೌನಿಯಾಗಿದ್ದು, ಒಂದು ಕ್ಷಣದಲ್ಲಿ ನಿಮಗೆ ಬರುವ ಅಹಂಕಾರವೇ, ನಿಮ್ಮ ಜೀವನವನ್ನು ನರಕ ಮಾಡುತ್ತದೆ. ಹಾಗಾಗಿ ಜೀವನದಲ್ಲೆಂದೂ ಅಹಂಕಾರ ಮಾಡಬೇಡಿ. ಈ ಅಹಂಕಾರದಿಂದಲೇ, ಇದಿನ ಕಾಲದಲ್ಲಿ ಸಂಬಂಧಗಳು ಮುರಿದು ಹೋಗುತ್ತಿದೆ.
ಮನಸ್ಸಿನ ನಿಯಂತ್ರಣ. ಯಾರು ತಮ್ಮ ಜೀವಮಾನವಿಡೀ ಮನಸ್ಸನ್ನು ನಿಯಂತ್ರಿಸುತ್ತಾರೋ, ಅವರು ಇಡೀ ಜೀವನವೇ ಗೆದ್ದಂತೆ. ಉದಾಹರಣೆಗೆ ಕುಡಿಯುವ ಚಟ, ತಿನ್ನುವ ಚಟ, ಹೆಣ್ಣಿನ ಚಟ, ಕಾಮದ ಚಟ, ಇವೆಲ್ಲದವುಗಳಿಂದ ಮನಸ್ಸನ್ನು ನಿಯಂತ್ರಿಸಿ ಜೀವಿಸುವವರು ಜೀವನವನ್ನೇ ಗೆಲ್ಲುತ್ತಾರೆ. ಇಂಥ ಚಟಗಳಿಂದಲೇ ನಾವು ಬದುಕಿದ್ದಾಗಲೇ ನರಕ ಕಾಣಬೇಕಾಗುತ್ತದೆ.