Shopping: ದಸರಾ ಹಬ್ಬ ಸಮೀಪಿಸುತ್ತಿದೆ. ನವರಾತ್ರಿಯಲ್ಲಿ ಹಲವು ಕಡೆ ಗೊಂಬೆ ಕೂರಿಸಿ, ಪೂಜೆ ಮಾಡಿ, ಪ್ರಾರ್ಥನೆ ಹಾಡಿ, ನೈವೇದ್ಯ ಮಾಡುವ ಪದ್ಧತಿ ಇದೆ. ಅದಕ್ಕಾಗಿ ಹಲವರು ದಸರಾ ಹತ್ತಿರ ಬಂತಂದ್ರೆ ಗೊಂಬೆಗಾಗಿ ಹುಡುಕಾಟ ನಡೆಸುತ್ತಾರೆ. ಹಾಗಾಗಿ ನಾವಿಂದು ಬೆಂಗಳೂರಿನಲ್ಲಿ ಎಲ್ಲಿ ಚೆಂದದ ಗೊಂಬೆಗಳು ಸಿಗುತ್ತದೆ ಎನ್ನುವ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ.
ಬೆಂಗಳೂರಿನ ಮಲ್ಲೇಶ್ವರಂನ ಈಸ್ಟ್ ಪಾರ್ಕ್ ರೋಡ್ ನಲ್ಲಿರುವ ವರ್ಣಾ ಎಕ್ಸಿಬಿಶನ್ ಮತ್ತು ಸೇಲ್ ಎಂಬ ಶಾಪ್‌ನಲ್ಲಿ ದಸರಾ ಗೊಂಬೆಗಳು ಲಭ್ಯವಿದೆ. ಹಳೆಯ ಕಾಲದಲ್ಲಿ ಯಾವ ರೀತಿಯ ಜೀವನ ನಡೆಸುತ್ತಿದ್ದರು ಎಂಬ ಬಗ್ಗೆಯೂ ಗೊಂಬೆಗಳಿದೆ. ವಿವಿಧ ರೀತಿಯ ವಾಹನಗಳು, ದೇವರುಗಳು, ಕಲೆಗಳನ್ನು ತೋರಿಸುವ ಗೊಂಬೆಗಳು ಇಲ್ಲಿ ಸಿಗುತ್ತದೆ.
ಅಲ್ಲದೇ ಪೌರಾಣಿಕ ಕಥೆಗಳನ್ನು ವಿವರಿಸುವ ಗೊಂಬೆಗಳು, ರಾಕ್ಷಸರ ಗೊಂಬೆಗಳು, ಮೈಸೂರು ದಸರಾ ವಿವರಿಸುವ ಗೊಂಬೆಗಳು, ಪಟ್ಟದ ಗೊಂಬೆಗಳು, ವಿಷ್ಣುವಿನ ಎಲ್ಲ ಅವತಾರವನ್ನು ವಿವರಿಸುವ ಗೊಂಬೆಗಳು, ಕೃಷ್ಣ, ಗಣಪತಿ ಗೊಂಬೆಗಳು, ಪ್ರಸಿದ್ಧ ದೇವಸ್ಥಾನಗಳ ಗೊಂಬೆಗಳು ಹೀಗೆ ಎಲ್ಲ ರೀತಿಯ ಗೊಂಬೆಗಳು ಇಲ್ಲಿ ನಿಮಗೆ ಲಭ್ಯವಿದೆ.
ಇಷ್ಟೇ ಅಲ್ಲದೇ, ಹೆಣ್ಣು ಮಕ್ಕಳು ಕುಂಟೆ ಬಿಲ್ಲೆ ಆಡುವ ಗೊಂಬೆ, ಹುಡುಗರು ಹೈ ಜಂಪ್ ಆಡುವ ಗೊಂಬೆ, ಗೋಲಿ ಆಟ ಆಡುವ ಗೊಂಬೆ, ಬಾಂಬೆ ಮಿಠಾಮಿ ಮಾರಾಟಗಾರ ಮತ್ತು ಗ್ರಾಹಕರ ಗೊಂಬೆಗಳು, ಪಾನೀಪುರಿ ಮಾರಾಟಗಾರ ಮತ್ತು ಗ್ರಾಹಕರ ಗೊಂಬೆಗಳು, ಸೇರಿ ಹಲವು ಗೊಂಬೆಗಳು ಇಲ್ಲಿ ಸಿಗುತ್ತದೆ. ಅಲ್ಲದೇ ಗೊಂಬೆ ಕೂರಿಸುವುದಕ್ಕೆ ಬೇಕಾಗಿರುವ ಸ್ಟ್ಯಾಂಡ್ ಕೂಡ ನಿಮಗಿಲ್ಲಿ ಸಿಗುತ್ತದೆ. ಅಕ್ಟೋಬರ್ 25ರವರೆಗೆ ಈ ಸೇಲ್ ನಡೆಯಲಿದ್ದು, ಅಷ್ಟೊರಳಗೆ ಇಲ್ಲಿ ಬಂದು ನೀವು ಗೊಂಬೆಗಳನ್ನು ಖರೀದಿಸಬೇಕು. ಈ ಗೊಂಬೆಗಳು ಹೇಗಿದೆ ಅಂತಾ ನೋಡಬೇಕು ಅಂದ್ರೆ, ನೀವು ಈ ವೀಡಿಯೋವನ್ನ ನೋಡಬೇಕು.

