ಮೊದಲ ಭಾಗದಲ್ಲಿ ನಾವು ಬಡವ ರಾಜನನ್ನು ಕಾಣಲು ಅರಮನೆಗೆ ಬಂದು, 3 ದ್ವಾರಕ್ಕೆ ಹೋಗಿ, ಯಾವ ದ್ವಾರದ ಷರತ್ತನ್ನೂ ಪೂರೈಸಲಾಗದೇ, ನಾಲ್ಕನೇ ದ್ವಾರಕ್ಕೆ ಹೋದ ಕಥೆಯ ಬಗ್ಗೆ ಹೇಳಿದ್ದೆವು. ಈಗ ಮುಂದುವರಿದ ಭಾಗವಾಗಿ, ಬಡವನಿಗೆ 4ನೇ ದ್ವಾರದಲ್ಲಿ ಯಾರು ಸಿಗುತ್ತಾರೆ..? ಯಾವ ಷರತ್ತು ಇಡುತ್ತಾರೆ..? ಮತ್ತು ಮುಂದೇನಾಗುತ್ತದೆ ಅನ್ನೋ ಬಗ್ಗೆ ಹೇಳಲಿದ್ದೇವೆ.
ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1
ಕೊನೆಯ ದ್ವಾರದಲ್ಲಿ ಅವನಿಗೆ ಓರ್ವ ವ್ಯಕ್ತಿ ಸಿಕ್ಕ. ಅವನು ನೀವು ನನ್ನೊಂದಿಗೆ ಜೂಜಾಡಿ ಗೆದ್ದರೆ, ನಾನು ನಿಮಗೆ ರಾಜನ ಬಳಿ ಬಿಡುತ್ತೇನೆ ಎಂದ. ಬೇರೆ ದಾರಿ ಕಾಣದೇ, ಬಡವ ಜೂಜಾಡಲು ಶುರು ಮಾಡಿದ. ಹೀಗೆ ಜೂಜಾಡುತ್ತ, ಸಾಕಷ್ಟು ಹಣ ಗೆದ್ದ. ಈಗ ಅವನಿಗೆ ರಾಜನ ಬಳಿ ಹೋಗುವ ಆಸೆ ಹೊರಟುಹೋಗಿತ್ತು. ಹಾಗಾಗಿ ಗೆದ್ದ ದುಡ್ಡನ್ನು ತೆಗೆದುಕೊಂಡು, ಹೊರಗೆ ಬಂದ.
ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?
ಬಡವನಿಗೆ ತುಂಬ ಹಸಿವಾಗಿತ್ತು. ಆದರೆ ಅಲ್ಲಿ ಯಾವ ಉಪಹಾರ ಗೃಹ ಕಾಣಲಿಲ್ಲ. ಹೇಗೂ ರಾತ್ರಿಯಾಗಿದೆ ಯಾರೂ ನೋಡುವುದಿಲ್ಲವೆಂದು, ಸೈನಿಕ ಬಳಿ ಹೋಗಿ, ಮಾಂಸಾಹಾರ ಸೇವಿಸುತ್ತಾನೆ. ಅವನಿಗೆ ಮದಿರೆ, ಧೂಮಪಾನ ಮಾಡುವ ಮನಸ್ಸಾಗುತ್ತದೆ. ಅರಮನೆಯ ಇನ್ನೊಂದು ದ್ವಾರಕ್ಕೆ ಬಂದು ಮದಿರೆ ಸೇವಿಸುತ್ತಾನೆ. ಆಗ ಅವನಿಗೆ ವೇಷ್ಯೆಯ ನೆನಪಾಗುತ್ತದೆ. ಇಷ್ಟೆಲ್ಲ ತಪ್ಪು ಮಾಡಿಯಾಗಿದೆ. ಇದೊಂದು ತಪ್ಪೇನು ಮಹಾ ಎಂದು ಆಕೆಯ ಬಳಿ ಹೋಗಿ ರಾಸಲೀಲೆಯಲ್ಲಿ ತೊಡಗುತ್ತಾನೆ.
ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..
ಜೂಜಾಡಿ ಗೆದ್ದಿದ್ದ ದುಡ್ಡನ್ನೆಲ್ಲ ಅವಳಿಗೆ ಕೊಡುತ್ತಾನೆ. ಅವಳು ಅವನನ್ನು ಅರಮನೆಯಿಂದ ಓಡಿಸುತ್ತಾಳೆ. ಅವನು ಮತ್ತೆ ಬೇರೆ ಬೇರೆ ದ್ವಾರಗಳಿಗೆ ಹೋಗಿ, ಎಲ್ಲ ಶರತ್ತಿಗೆ ಒಪ್ಪಿಗೆ ಇದೆ ನಾನು ಮದಿರೆ ಸೇವಿಸಿ, ಮಾಂಸ ತಿಂದು, ಜೂಜಾಡುತ್ತೇನೆ. ನನಗೆ ರಾಜನ ಬಳಿ ಬಿಡಿ ಎನ್ನುತ್ತಾನೆ. ಆದರೆ ಅವನೆಷ್ಟೇ ಬೇಡಿಕೊಂಡರು ಯಾರೂ ಅವನನ್ನು ಹತ್ತಿರ ಸೇರಿಸಿಕೊಳ್ಳಲಿಲ್ಲ. ಹೀಗೆ ಒಂದರ ಮೇಲೊಂದು ತಪ್ಪು ಮಾಡಿ, ಕೊನೆಗೆ ಬಿಡಿಗಾಸು ಸಿಗದ ರೀತಿ ಬಡವ ಬಡವನಾಗಿಯೇ ಉಳಿಯುತ್ತಾನೆ.
ಈ ಕಥೆ ಹೇಳಿದ ಬಳಿಕ ಕೃಷ್ಣ, ಅವನು ಮಾಡಿದ ತಪ್ಪಗೆ ಅವನಿಗೆ ಬಡವನಾಗಿಯೇ ಉಳಿಯುವ ಶಿಕ್ಷೆ ಸಿಕ್ಕಿತು. ಹೀಗೆ ನಾವು ಮಾಡಿದ ತಪ್ಪಿಗೆ ನಮಗೆ ತಕ್ಕ ಶಿಕ್ಷೆ ಸಿಕ್ಕೇ ಸಿಗುತ್ತದೆ. ಅದು ದೊಡ್ಡ ತಪ್ಪಾದರೂ ಸರಿ, ಸಣ್ಣ ತಪ್ಪಾದರೂ ಸರಿ ಎನ್ನುತ್ತಾನೆ.