Monday, September 9, 2024

Latest Posts

ಕಾಂಗ್ರೆಸ್ ಶಾಸಕರ ದರ್ಪ- ಸರ್ಕಾರಿ ಅಧಿಕಾರಿ ಮೇಲೆ ಕೆಸರು ಸುರಿದು ಕಟ್ಟಿಹಾಕಿದ ಎಂಎಲ್ಎ..!

- Advertisement -

ಮಹಾರಾಷ್ಟ್ರ: ಸರ್ಕಾರಿ ಅಧಿಕಾರಿ ಮೇಲೆ ಕಾಂಗ್ರೆಸ್ ಶಾಸಕ ಕೆಸರು ಹಾಗೂ ಮಣ್ಣೆರಚಿರೋ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಶಾಸಕ ನಿತೇಶ್ ರಾಣೆ ದರ್ಪಕ್ಕೆ ಹೆದರಿ ಕೈಕಟ್ಟಿ ನಿಂತ ಸರ್ಕಾರಿ ಇಂಜಿನಿಯರ್

ಇಲ್ಲಿನ ಕಂಕಾವಲಿ ಬಳಿ ಈ ಘಟನೆ ನಡೆದಿದ್ದು. ಮಹಾರಾಷ್ಟ್ರ ಮಾಜಿ ಸಿಎಂ ನಾರಾಯಣ್ ರಾಣೆ ಪುತ್ರ ಕಾಂಗ್ರೆಸ್ ಶಾಸಕ ನಿತೇಶ್ ರಾಣೆ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಮೇಲೆ ದರ್ಪ ತೋರಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಂಡಿ ಮುಚ್ಚುವ ಕಾಮಗಾರಿ ವೀಕ್ಷಣೆ ವೇಳೆ ಈ ಘಟನೆ ನಡೆದಿದೆ. ಶಾಸಕ ನಿತೇಶ್ ರಾಣೆ ರಸ್ತೆಯ ಗುಂಡಿ ಬಗ್ಗೆ ಮಾತನಾಡುತ್ತಿದ್ದ ವೇಳೆ ಕುಪಿತಗೊಂಡು ತನ್ನ ಬೆಂಬಲಿಗರ ಜೊತೆ ಸೇರಿ ಸರ್ಕಾರಿ ಇಂಜಿನಿಯರ್ ಮೈ ಮೇಲೆ ಬಕೆಟ್ ನಲ್ಲಿ ಮಣ್ಣು ಮತ್ತು ಕೆಸರನ್ನು ಸುರಿದಿದ್ದಾರೆ. ಇದು ಸಾಲದೂ ಎನ್ನುವಂತೆ ಅಧಿಕಾರಿಯನ್ನು ಬ್ರಿಡ್ಜ್ ಗೆ ಕಟ್ಟಿ ಶಾಸಕ ನಿತೇಶ್ ದರ್ಪ ತೋರಿದ್ದಾರೆ.

ಅಧಿಕಾರಿಗೆ ನಿಂದಿಸುತ್ತಿರುವ ಶಾಸಕ ನಿತೇಶ್ ರಾಣೆ

ಸಾಲದ್ದಕ್ಕೆತಾವು ಮಾಡಿದ್ದೇ ಸರಿ ಅಂತ ತಮ್ಮ ಈ ಕೃತ್ಯದ ವಿಡಿಯೋವನ್ನು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

https://m.facebook.com/story.php?story_fbid=1857481644397650&id=471924039620091

ರೈತರಿಗೆ ಬಂಪರ್ ಆಫರ್ ನೀಡ್ತಾರಾ ಪ್ರಧಾನಿ ಮೋದಿ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=j5HgnA6AU2A
- Advertisement -

Latest Posts

Don't Miss