ದೇವಿ ದರ್ಶನ ಮಾಡಿದ ಸಚಿವ ಭೈರತಿ ಬಸವರಾಜು..

ಹಾಸನ: ನಗರಾಭಿವೃದ್ಧಿ ಹಾಗೂ ದಾವಣಗೆರೆ ಮತ್ತು ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಎ. ಬಸವರಾಜು (ಬೈರತಿ) ಅವರು ಅದಿ ದೇವತೆ ಹಾಸನಾಂಬೆ ದೇವಿ ದರ್ಶನವನ್ನು ಪಡೆದು ಪ್ರಾರ್ಥನೆ ಮಾಡಿದರು.

​ ​ನಂತರದಲ್ಲಿ ದರ್ಬಾರ್ ಗಣಪತಿ ಹಾಗೂ ಶ್ರಿ ಸಿದ್ದೇಶ್ವರ ದೇವಾಲಯಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದರು. ಇದಾದ ಬಳಿಕ ಜಿಲ್ಲಾಡಳಿತದಿಂದ ಸನ್ಮಾನವನ್ನು ಸ್ವೀಕರಿಸಿ ಪ್ರಸಾದ ಪಡೆದರು. ನಂತರ ಮಾಧ್ಯಮದೊಂದಿಗೆ ಮಾತನಾಡಿ, ಅದಿ ದೇವತೆ ಹಾಸನಾಂಬೆ ದೇವಿಯು ಎಲ್ಲೆಡೆ ಪ್ರಸಿದ್ಧವಾಗಿ ದರ್ಶನ ಮಾಡಲು ವಿವಿಧ ಭಾಗಗಳಿಂದ ಆಗಮಿಸುತ್ತಾರೆ. ಆ ದೇವರು ಎಲ್ಲಾರಿಗೂ ಆರೋಗ್ಯ, ಆಯಾಸ್ಸು, ಆರ್ಥಿಕವಾಗಿ ಕಾಪಾಡಿ ದೇಶ ಸಂಬೃದ್ಧಿಯಾಗಲೆಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ಹೇಳಿದರು.

​ ​ಇದೆ ವೇಳೆ ಕ್ಷೇತ್ರದ ಶಾಸಕ ಪ್ರೀತಮ್ ಜೆ ಗೌಡ, ಜಿಲ್ಲಾಧಿಕಾರಿ ಅರ್ಚನಾ, ತಹಸೀಲ್ದಾರ್ ನಟೇಶ್ ಇತರರು ಉಪಸ್ಥಿತರಿದ್ದರು.

ದೀಪಾವಳಿಗೆ ತಯಾರಿ ನಡೆಸುತ್ತಿದ್ದ ವೇಳೆ ಇಬ್ಬರು ಫೋಟೋಗ್ರಾಫರ್ ಸಾವು..

About The Author