Saturday, July 27, 2024

Latest Posts

ಮಮತಾ ಬ್ಯಾನರ್ಜಿ ಸರ್ಕಾರದಲ್ಲಿ ಮುಸ್ಲಿಂರಿಗೇ ಹೆಚ್ಚು ಮೀಸಲಾತಿ ಕೊಡಲಾಗುತ್ತಿದೆ: ಯತ್ನಾಳ್ ಆರೋಪ

- Advertisement -

Political News: ಬಿಜೆಪಿ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಮತಾ ಸರ್ಕಾರವಿರುವಾಗ, ಯಾವ ರೀತಿ ಮೀಸಲಾತಿ ಹಂಚಲಾಗುತ್ತಿದೆ ಮತ್ತು ಆ ಮೀಸಲಾತಿಯಿಂದ ಪೊಲೀಸ್ ಇಲಾಖೆ ಮೇಲೆ ಎಂಥ ಪರಿಣಾಮ ಬೀರಿದೆ ಎಂದು ಯತ್ನಾಳ್ ಹೇಳಿದ್ದಾರೆ.

2011 ರಲ್ಲಿ ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಸರ್ಕಾರ ರಚನೆಯಾದಾಗ 71 ಜಾತಿಗಳಿಗೆ ಒ.ಬಿ.ಸಿ ಮೀಸಲು ನೀಡಿತು. ಅದರಲ್ಲಿ 64 ಮುಸಲ್ಮಾನರಿಗೆ ಹೋಯಿತು. ಕೇವಲ 7 ಮುಸ್ಲಿಮೇತರರಿಗೆ ಒ.ಬಿ.ಸಿ ಮೀಸಲು ಸಿಕ್ಕಿತು. ಈ ಮೀಸಲಿನಿಂದ ಅತಿ ಹೆಚ್ಚು ಪೊಲೀಸ್ ಹುದ್ದೆಗಳು ಮುಸಲ್ಮಾನರ ಪಾಲಾಯಿತು. ಪೊಲೀಸ್ ಇಲಾಖೆಯಲ್ಲಿ ಅವರದ್ದೇ ಈಗ ಕಾರುಬಾರು. ನಿಷ್ಪಕ್ಷವಾಗಿ, ಜಾತಿ, ಮತ ಬೇಧವಿಲ್ಲದೆ ದುಡಿಯಬೇಕಾದ ಪೊಲೀಸರು ಪಶ್ಚಿಮ ಬಂಗಾಳದಲ್ಲಿ ಏನು ಮಾಡುತ್ತಿದ್ದಾರೆ ಎಂದು ನಿಮಗೆ ಗೊತ್ತೇ ಇದೆ. ಪಶ್ಚಿಮ ಬಂಗಾಳದಲ್ಲಿ ಯಾವುದೇ ಗಲಾಟೆ ಇಲ್ಲದೆ ಚುನಾವಣೆ ನಡೆದದ್ದು ಅಲ್ಲಿ ಸಿ.ಆರ್.ಪಿ.ಎಫ್. ನಿಯೋಜನೆಯಿಂದಲೇ ಹೊರತು ಸ್ಥಳೀಯ ಪೊಲೀಸರಿಂದಲ್ಲ ಎಂದು ಯತ್ನಾಳ್ ಟ್ವೀಟ್ ಮಾಡಿದ್ದಾರೆ.

ಮೇಲ್ಮನೆ ಚುನಾವಣೆ: ಜವರಾಯಿಗೌಡರ ಪರ ಜೆಡಿಎಸ್ ವರಿಷ್ಠರ ಒಲವು..?

ನಟಿ ಆಲಿಯಾ ಭಟ್‌ ವಿರುದ್ಧ ರೊಚ್ಚಿಗೆದ್ದ ನೆಟ್ಟಿಗರು: ಭಾರತ ಬಿಟ್ಟು ತೊಲಗು ಎಂದು ಆಕ್ರೋಶ

ಮಗುವಿನ ಲಿಂಗ ಪತ್ತೆಯ ಖುಷಿಗೆ ಪಾರ್ಟಿ ಆಚರಿಸಿದ ಯೂಟ್ಯೂಬರ್‌ಗೆ ಆರೋಗ್ಯ ಇಲಾಖೆಯಿಂದ ನೊಟೀಸ್

- Advertisement -

Latest Posts

Don't Miss