Tuesday, May 14, 2024

Latest Posts

500 ವರ್ಷಗಳ ಬಳಿಕ ಅಯೋಧ್ಯೆಯಲ್ಲಿ ನವಮಿ ಸಂಭ್ರಮ: ಬಾಲರಾಮನಿಗೆ ಸೂರ್ಯ ತಿಲಕ

- Advertisement -

Spiritual News: ಅಯೋಧ್ಯೆಯಲ್ಲಿ 500 ವರ್ಷಗಳ ಬಳಿಕ ಸಂಭ್ರಮದ ರಾಮನವಮಿ ಆಚರಣೆ ಮಾಡಲಾಗುತ್ತಿದೆ. ಇದೇ ವರ್ಷ ಜನವರಿಯಲ್ಲಿ ಉದ್ಘಾಟನೆಗೊಂಡ ರಾಮಮಂದಿರದಲ್ಲಿ ಬಾಲ ರಾಮನ ಪ್ರತಿಷ್ಠಾಪನೆಯಾಗಿದ್ದು, ಇಂದು ರಾಮನವಮಿ ಪ್ರಯುಕ್ತ, ಸೂರ್ಯನ ಹಣೆಗೆ ಸೂರ್ಯ ರಶ್ಮಿಯ ಚುಂಬನವಾಗಿದ್ದು, ಈ ಮೂಲಕ ಸೂರ್ಯ ಶ್ರೀರಾಮನ ಹಣೆಗೆ ತಿಲಕವನ್ನಿರಿಸಿದಂತಿದೆ.

ಇನ್ನು ಈ ಪುಣ್ಯದಿನದಂದು ರಾಮನ ದರ್ಶನಕ್ಕಾಗಿ ದೇಶ ವಿದೇಶಗಳಿಂದ ಲಕ್ಷಾಂತರ ಭಕ್ತಾದಿಗಳು ಅಯೋಧ್ಯೆಗೆ ಆಗಮಿಸಿದ್ದು, ಎಲ್ಲೆಡೆ ಜೈ ಶ್ರೀರಾಮ್ ಎಂಬ ಭಕ್ತಿಯ ನಾದ ಮೊಳಗುತ್ತಿದೆ. ರಾಮಲಲ್ಲಾನಿಗೆ ಬೆಳಿಗ್ಗೆಯಿಂದ  ವಿಶೇಷ ಪೂಜೆ, ಅಭಿಷೇಕ, ನೈವೇದ್ಯವೆಲ್ಲವೂ ನಡೆಯುತ್ತಿದ್ದು, ಕ್ವಿಂಟಲ್‌ಗಟ್ಟಲೇ ಹೂವಿನಿಂದ ರಾಮಮಂದಿರವನ್ನು ಅಲಂಕರಿಸಲಾಗಿದೆ.

 

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

ಬಾಲರಾಮನಿಗೆ 7 ಕೆಜಿ ತೂಕದ ಚಿನ್ನದ ರಾಮಾಯಣ ಪುಸ್ತಕ ಅರ್ಪಿಸಿದ ನಿವೃತ್ತ ಐಎಎಸ್ ಅಧಿಕಾರಿ

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

- Advertisement -

Latest Posts

Don't Miss