Spiritual Story: ಶುಕ್ರವಾರ ಎಂದರೆ ಲಕ್ಷ್ಮೀಗೆ ಇಷ್ಟವಾಗುವ ದಿನ. ಈ ದಿನ ನಾವು ಲಕ್ಷ್ಮೀ ಪೂಜೆ ಸೇರಿ, ಲಕ್ಷ್ಮೀಗೆ ಇಷ್ಟವಾಗುವ ಕೆಲಸ ಮಾಡಬೇಕು. ಆದರೆ ಈ ದಿನ ನಾವು ಕೆಲ ಕೆಲಸಗಳನ್ನು ಮಾಡಬಾರದು. ಆ ಕೆಲಸಗಳು ಲಕ್ಷ್ಮೀ ದೇವಿಗೆ ವಿರೋಧವಾದದ್ದು. ಹಾಗಾದ್ರೆ ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಯಾವ ಕೆಲಸಗಳನ್ನು ಮಾಡಬಾರದು ಅಂತಾ ತಿಳಿಯೋಣ ಬನ್ನಿ..
ಮನೆಯನ್ನು ಗಲೀಜಾಗಿರಿಸಿಕೊಳ್ಳಬಾರದು. ಸ್ವಚ್ಛ ಗೊಳಿಸಲೇಬೇಕು. ಶುಕ್ರವಾರದ ದಿನ ಮನೆಯಲ್ಲಿ ಕಸ ಗುಡಿಸಿ, ಧೂಳು ಒರೆಸಿ, ನೆಲ ಒರೆಸುವುದರಿಂದ ಮನೆ ಸ್ವಚ್ಛವಾಗಿರುತ್ತದೆ. ಮತ್ತು ಶುಕ್ರವಾರದ ದಿನ ಮನೆ ಸ್ವಚ್ಛವಾಗಿದ್ದರೆ, ಲಕ್ಷ್ಮೀ ಕೃಪೆ ಹೆಚ್ಚಾಗುತ್ತದೆ ಅಂತಾ ಹೇಳಲಾಗಿದೆ. ಹಾಗಿದ್ದರೆ, ನಿಮ್ಮ ಮೇಲೂ ಲಕ್ಷ್ಮೀ ಕೃಪೆ ತೋರಬೇಕು ಅಂದ್ರೆ, ಶುಕ್ರವಾರದ ದಿನ ಮನೆಯನ್ನು ಸ್ವಚ್ಛವಾಗಿರಿಸಿಕೊಳ್ಳಿ.
ಎರಡನೇಯ ತಪ್ಪು, ರಾತ್ರಿ ಅನ್ನದ ಪಾತ್ರೆ ಖಾಲಿ ಮಾಡಬೇಡಿ. ಎಂಜಲು ಬಟ್ಟಲು, ಪಾತ್ರೆಗಳನ್ನು ಹಾಗೆ ಇರಿಸಬೇಡಿ. ಶುಕ್ರವಾರದ ದಿನ ಲಕ್ಷ್ಮೀ ದಿನವಾಗಿರುವುದರಿಂದ ಲಕ್ಷ್ಮೀ ದೇವಿ ಮನೆಗೆ ಬರುತ್ತಾಳೆಂಬ ನಂಬಿಕೆ ಇದೆ. ಹಾಗಾಗಿ ಶುಕ್ರವಾರದ ದಿನ ಅನ್ನದ ಪಾತ್ರೆ ಖಾಲಿ ಮಾಡಿ ಇಡಬಾರದು. ಅಲ್ಲದೇ, ಉಳಿದ ಪಾತ್ರೆಗಳನ್ನು, ಊಟ ಮಾಡಿದ ತಟ್ಟೆಯನ್ನು ತೊಳೆದು ಇಡಬೇಕು ಅಂತಾ ಹೇಳಲಾಗುತ್ತದೆ. ಇಂಥ ಕೆಲಸವನ್ನು ಮಾಡದಿದ್ದಲ್ಲಿ, ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರವಾಗಬೇಕಾಗುತ್ತದೆ.
ಮೂರನೇಯ ತಪ್ಪು, ಶುಕ್ರವಾರದ ರಾತ್ರಿ ಕಸ ಗುಡಿಸಬಾರದು, ಬಟ್ಟೆ ತೊಳೆಯಬಾರದು. ಶುಕ್ರವಾರದ ರಾತ್ರಿಯಂದು ದೀಪ ಹಚ್ಚಿದ ಬಳಿಕ ಯಾವುದೇ ಕಾರಣಕ್ಕೂ ಕಸ ಗುಡಿಸಬಾರದು. ತಲೆ ಬಾಚಿಕೊಳ್ಳಬಾರದು. ಜಗಳವಾಡಬಾರದು. ಬಟ್ಟೆ ಒಗೆಯಬಾರದು. ಈ ಕೆಲಸಗಳನ್ನು ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪಸರಿಸುತ್ತದೆ . ಹಾಗಾಗಿ ಸಂಜೆ ಬಳಿಕ ಇಂಥ ಕೆಲಸ ಮಾಡಲೇಬೇಡಿ.