Friday, November 21, 2025

Latest Posts

ಮುಖ್ಯ ದ್ವಾರ, ಹೊಸ್ತಿಲ ಬಳಿ ಎಂದಿಗೂ ಇಂಥ ತಪ್ಪು ಮಾಡಬೇಡಿ..

- Advertisement -

Spiritual Story: ಮನೆಯ ಮುಖ್ಯದ್ವಾರ ಅಥವಾ ಹೊಸ್ತಿಲು ಬರೀ ಮನೆಯ ಒಂದು ಭಾಗ ಅಥವಾ ಜಾಗವಾಗಿರುವುದಿಲ್ಲ. ಇದು ಲಕ್ಷ್ಮೀ ದೇವಿ ಮನೆಯನ್ನು ಪ್ರವೇಶಿಸುವ ಪವಿತ್ರ ಸ್ಥಳವಾಗಿರುತ್ತದೆ. ಹಾಗಾಗಿ ಮನೆಯ ಮುಖ್ಯದ್ವಾರದಲ್ಲಿ ಮತ್ತು ಹೊಸ್ತಿಲ ಮೇಲೆ ನಿಲ್ಲಬಾರದು ಅಂತಾ ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಲಕ್ಷ್ಮೀ ದೇವಿ ಮನೆಗೆ ಪ್ರವೇಶಿಸಲು ಅಡ್ಡಿಯಾಗಿ, ಮನೆಯಲ್ಲಿ ದರಿದ್ರ ಉಂಟಾಗುತ್ತದೆ ಅಂತಾ ಹಿರಿಯರು ಹೇಳುತ್ತಾರೆ. ಹಾಗಾದ್ರೆ ನಾವು ಮುಖ್ಯ ದ್ವಾರ ಮತ್ತು ಹೊಸ್ತಿಲ ಬಳಿ ಎಂಥ ತಪ್ಪು ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು ಹೊಸ್ತಿಲ ಮೇಲೆ ಕುಳಿತುಕೊಳ್ಳಬಾರದು, ನಿಲ್ಲಬಾರದು. ಈ ಮೊದಲೇ ಹೇಳಿದಂತೆ ಲಕ್ಷ್ಮೀ ಬರುವ ಜಾಗವಾದ ಹೊಸ್ತಿಲ ಮೇಲೆ ಕೂರಬಾರದು ಮತ್ತು ನಿಲ್ಲಬಾರದು. ಕೆಲವು ಹೆಂಗಸರಿಗೆ ಸಂಜೆಯಾಗುತ್ತಿದ್ದಂತೆ, ಮನೆಯ ಮುಖ್ಯದ್ವಾರದ ಬಳಿ ಕುಳಿತು, ಹರಟೆ ಹೊಡೆಯುವ ಚಟವಿರುತ್ತದೆ. ಅಂಥ ಮನೆಯಲ್ಲಿ ಎಂದಿಗೂ ಸಂಪತ್ತು ಬರಲು ಸಾಧ್ಯವಿಲ್ಲ. ಅಂಥವರೆಂದೂ ಉದ್ಧಾರವಾಗಲು ಸಾಧ್ಯವಿಲ್ಲ.

ಎರಡನೇಯ ತಪ್ಪು. ಹೊಸ್ತಿಲನ್ನು ಎಂದಿಗೂ ಖಾಲಿ ಬಿಡಬಾರದು. ಹೊಸ್ತಿಲು ಮನೆಯ ಪವಿತ್ರ ಜಾಗ. ಹಾಗಾಗಿ ಪ್ರತಿದಿನ ಮುತ್ತೈದೆ ಆ ಹೊಸ್ತಿಲನ್ನು ಒರೆಸಿ, ರಂಗೋಲಿ ಬಿಡಿಸಿ, ಅದಕ್ಕೆ ಅರಿಶಿನ ಕುಂಕುಮ ಹಚ್ಚಿ, ಹೂವಿಟ್ಟು, ನೀರನ್ನು ನೈವೇದ್ಯ ಮಾಡಿ, ನಮಸ್ಕರಿಸಬೇಕು. ಮತ್ತು ಅದೇ ನೀರನ್ನು ತುಳಸಿ ದೇವಿಗೆ ಅರ್ಪಿಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ.

ಮೂರನೇಯ ತಪ್ಪು, ಮುಖ್ಯದ್ವಾರದ ಬಳಿ ಚಪ್ಪಲಿಗಳನ್ನು ಬಿಡಬಾರದು. ಕೆಲವರು ಮನೆಯ ಮುಂದೆಯೇ ಚಪ್ಪಲಿ, ಬೂಟು ಬಿಡುತ್ತಾರೆ,. ಹೀಗೆ ಮಾಡುವುದರಿಂದ ನೀವೇ ನಿಮ್ಮ ಮನೆಗೆ ಲಕ್ಷ್ಮೀ ಬರುವುದನ್ನು ತಪ್ಪಿಸುತ್ತಿದ್ದೀರಿ ಎಂದರ್ಥ. ಅಂಥ ಮನೆಯಲ್ಲಿ ಸದಾ ನಕಾರಾತ್ಮಕತೆ ಇರುತ್ತದೆ. ಹಾಗಾಗಿ ಮನೆಯ ಮುಂದೆ ಚಪ್ಪಲಿಗಳನ್ನು ಬಿಡಬೇಡಿ. ಚಪ್ಪಲಿ ಇಡಲೆಂದೇ ಪಕ್ಕದಲ್ಲಿ ಒಂದು ಜಾಗ ಮಾಡಿ, ಅಲ್ಲಿ ಚಪ್ಪಲಿ ಇರಿಸಿ.

ಲಕ್ಷ್ಮೀ ವಾರವಾದ ಶುಕ್ರವಾರದ ದಿನ ಇಂಥ ಕೆಲಸಗಳನ್ನು ಎಂದಿಗೂ ಮಾಡಬೇಡಿ

ಮಲಗುವ ಮುನ್ನ ಈ ಕೆಲಸಗಳನ್ನು ತಪ್ಪದೇ ಮಾಡಿ, ಜೀವನದಲ್ಲಿ ಉದ್ಧಾರವಾಗುತ್ತೀರಿ..

ಈ 4 ವಿಚಾರಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಅಂತಾರೆ ಚಾಣಕ್ಯರು..

- Advertisement -

Latest Posts

Don't Miss