ನಾವು ಬಟ್ಟೆ ಧರಿಸವಾಗ ಯಾವ 6 ವಿಷಯವನ್ನು ನೆನಪಿಡಬೇಕು ಅನ್ನೋ ಬಗ್ಗೆ ಮೊದಲ ಭಾಗದಲ್ಲಿ 3 ತಪ್ಪುಗಳ ಬಗ್ಗೆ ತಿಳಿಸಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಈ ಬಗ್ಗೆ ಮತ್ತಷ್ಟು ಮಾಹಿತಿಯನ್ನ ತಿಳಿಯೋಣ..
ಬಟ್ಟೆ ಧರಿಸುವಾಗ ಈ 6 ತಪ್ಪನ್ನು ಎಂದಿಗೂ ಮಾಡಬೇಡಿ.. ಭಾಗ 1
ನಾಲ್ಕನೇಯ ನಿಯಮ, ಸ್ವಚ್ಛವಾದ ಬಟ್ಟೆಯನ್ನ ಧರಿಸಿ. ಇದು ಬರೀ ನಿಯಮವಲ್ಲ, ನಿಮ್ಮ ಅದೃಷ್ಟ ಬದಲಿಸುವ ಅಭ್ಯಾಸ. ಯಾರು ಸ್ವಚ್ಛವಾದ ಶುಭ್ರವಾದ ಬಟ್ಟೆ ಧರಿಸುತ್ತಾರೋ, ಅವರು ಯಾವಾಗಲೂ ಉತ್ತಮವಾಗಿರ್ತಾರೆ. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ಅಲ್ಲದೇ, ನಿಮ್ಮ ಸುತ್ತಮುತ್ತಲಿರುವವರು ನಿಮ್ಮನ್ನು ಇಷ್ಟ ಪಡುತ್ತಾರೆ. ರೋಗ ರುಜಿನಗಳಿಂದ ನೀವು ದೂರವಿರುತ್ತೀರಿ.
ಕನಸಿನಲ್ಲಿ ಗೋವು ಕಾಣಿಸುವುದು ಶುಭವೋ ..? ಅಶುಭವೋ..?
ಐದನೇಯ ನಿಯಮ, ನೀವು ಯಾವ ಕೆಲಸ ಮಾಡುತ್ತಿರೋ ಅದಕ್ಕೆ ತಕ್ಕಂತೆ ಕೆಲಸ ಮಾಡಿ. ನೀವು ಟೀಚರ್ ಆಗಿದ್ದರೆ, ನಿಮ್ಮ ಬಟ್ಟೆ ಡಿಸೆಂಟ್ ಆಗಿರಲಿ. ಕೆಲಸಕ್ಕೆ ಹೋಗುವಾಗ ಮಾಡರ್ನ್ ಬಟ್ಟೆ ನಿಮಗೆ ಸೂಟ್ ಆಗುವುದಿಲ್ಲ. ಹಾಗಾಗಿ ನಿಮ್ಮ ಕೆಲಸಕ್ಕೆ ತಕ್ಕ ಹಾಗೆ ನಿಮ್ಮ ಬಟ್ಟೆ ಇರಲಿ.
ಆರನೇಯ ನಿಯಮ, ಎಲ್ಲಿ ಹೇಗಿರಬೇಕೋ ಅಲ್ಲಿ ಹಾಗಿರಿ. ಯಾವಾಗಲೂ ಒಂದೇ ರೀತಿಯ ಬಟ್ಟೆ ತೊಡಬೇಡಿ. ಮನೆಯಲ್ಲಿದ್ದಾಗ ಸಿಂಪಲ್ ಆಗಿರುವ ಬಟ್ಟೆ, ಶಾಪಿಂಗ್‌ಗೆ ಹೋಗುವಾ ಮಾಡರ್ನ್ ಬಟ್ಟೆ, ಮದುವೆ, ದೇವಸ್ಥಾನಕ್ಕೆ ಹೋಗುವಾಾಗ ಟ್ರೆಡಿಶನಲ್ ಬಟ್ಟೆ, ಅದೇ ರೀತಿ ಪ್ರವಾಸಕ್ಕೆ ಹೋಗುವಾಗ ಅದಕ್ಕೆ ತಕ್ಕ ಹಾಗೆ ಬಟ್ಟೆ ತೊಡಿ.