Spiritual: ಬಟ್ಟೆ ಧರಿಸುವುದು ನಮಗೆಲ್ಲ ಸಾಮಾನ್ಯ ಎಂದೆನಿಸಬಹುದು. ಮಾನ ಮುಚ್ಚಿಕೊಳ್ಳಲು ಬಟ್ಟೆ ಧರಿಸುವುದು ಅನ್ನೋ ಮಾತು ನಿಜ. ಆದರೆ ನಾವು ಧರಿಸುವ ಬಟ್ಟೆ, ನಮ್ಮ ಮಾನಸಿಕ ನೆಮ್ಮದಿ, ಆರ್ಥಿಕ ಸ್ಥಿತಿಯನ್ನು ಉತ್ತಮವಾಗಿ ಇರಿಸಲು ಮತ್ತು ಉತ್ತಮವಲ್ಲದಿರಲು ಕಾರಣವಾಗುತ್ತದೆ. ಹಾಗಾಗಿ ನಾವು ಇಂದು ಎಂಥ ಬಟ್ಟೆಗಳನ್ನು ಧರಿಸಬಾರದು ಅಂತಾ ಹೇಳಲಿದ್ದೇವೆ.
ಹರಿದ ಬಟ್ಟೆ. ಸಾಮಾನ್ಯವಾಗಿ ಹಲವರು ಮನೆಯಲ್ಲಿ ಹರಿದ ಬಟ್ಟೆಯನ್ನು ಧರಿಸುತ್ತಾರೆ. ಆದರೆ ಯಾರು ಹರಿದ ಬಟ್ಟೆಯನ್ನು ಧರಿಸುತ್ತಾರೋ, ಅಂಥವರ ಭಾಗ್ಯವೂ ಕೆಟ್ಟದಾಗಿ ಮಾರ್ಪಾಡಾಗುತ್ತದೆ. ಮಾನಸಿಕ ನೆಮ್ಮದಿ, ಎಷ್ಟು ದುಡಿದರೂ ದುಡ್ಡು ನಿಲ್ಲದಿರುವುದು. ಹೀಗೆ ಬರೀ ದುರಾದೃಷ್ಟವೇ ಅವರ ಪಾಲಾಗುತ್ತದೆ. ಲಕ್ಷ್ಮೀ ದೇವಿಯ ಅವಕೃಪೆಗೆ ಪಾತ್ರರಾಗುತ್ತಾರೆ. ಅದರಲೂ ಗಂಡಸರು ಹರಿದ ಜೇಬಿರುವ ಬಟ್ಟೆಯನ್ನು ಎಂದಿಗೂ ಧರಿಸಬಾರದು.
ಸುಟ್ಟ ಬಟ್ಟೆ: ಸುಟ್ಟ ಬಟ್ಟೆ ಧರಿಸುವುದು ಅಮಂಗಳಕರವೆಂದು ಹೇಳಲಾಗುತ್ತದೆ. ಇಂಥ ಬಟ್ಟೆ ಧರಿಸಿದರೆ, ಮನೆಯಲ್ಲಿ ನೆಮ್ಮದಿ ಇರುವುದಿಲ್ಲ. ಮನೆಜನರೊಂದಿಗೆ ಪದೇ ಪದೇ ಜಗಳವಾಗುತ್ತದೆ. ಅಂಥವರ ಜೀವನದಲ್ಲಿ ಹೆಚ್ಚು ಅಶುಭ ಘಟನೆಗಳು, ಗೊತ್ತಿಲ್ಲದೇ ತಪ್ಪು ನಡೆಯುವುದೆಲ್ಲ ಆಗುತ್ತದೆ.
ಬಣ್ಣ ತಾಗಿದ ಬಟ್ಟೆ. ಹೋಳಿ ಹಬ್ಬದಂದು, ಅಥವಾ ಯಾವುದಾದರೂ ಸಮಯದಲ್ಲಿ ನಿಮ್ಮ ಬಟ್ಟೆಗೆ ಕಲೆಯಾದರೆ, ಆ ಬಟ್ಟೆಯನ್ನು ಪುನಃ ಧರಿಸಬಾರದು. ಅದು ಸ್ವಚ್ಛವಾಗಿ ಕಾಣುವುದಿಲ್ಲ. ಮತ್ತು ಸ್ವಚ್ಛವಾಗಿರದ ಬಟ್ಟೆ ನೀವು ಧರಿಸದಾಗ, ಲಕ್ಷ್ಮೀದೇವಿಯ ಅವಕೃಪೆಗೆ ಪಾತ್ರರಾಗುತ್ತೀರಿ.
ಋತುಮತಿಯಾದ ಬಟ್ಟೆ. ಹೆಣ್ಣು ಮಕ್ಕಳು ಮೊಟ್ಟ ಮೊದಲ ಬಾರಿ ಯಾವ ವಸ್ತ್ರ ಧರಿಸಿ, ಮುಟ್ಟಾಗುತ್ತಾರೋ, ಅಂಥ ಬಟ್ಟೆಯನ್ನು ಅವರು ಮತ್ತೆ ಧರಿಸಬಾರದು. ಹಿಂದೂ ಧರ್ಮದ ಪ್ರಕಾರ, ಅಂಥ ಬಟ್ಟೆನ್ನು ಮೈಲಿಗೆಯ ಬಟ್ಟೆ ಎಂದು ಪರಿಗಣಿಸಲಾಗುತ್ತದೆ. ಅದನ್ನು ಮತ್ತೆ ಧರಿಸಿದರೆ, ಹಲವು ರೋಗ ರುಜಿನಗಳಿಗೆ ತುತ್ತಾಗಬೇಕಾಗುತ್ತದೆ.
ಪತಿ ಆರೋಗ್ಯವಾಗಿ, ಆರ್ಥಿಕವಾಗಿ ಉತ್ತಮನಾಗಿರಬೇಕು ಅಂದ್ರೆ ಪತ್ನಿ ಈ ಕೆಲಸ ಮಾಡಬೇಕು..
ಮುಟ್ಟಲು ಹೇಸಿಗೆ ಪಡುತ್ತಿದ್ದ ಹಣ್ಣಿಗೆ(ತರಕಾರಿ) ಈಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ.. ಯಾವುದು ಆ ಹಣ್ಣು..?