Sunday, April 13, 2025

Latest Posts

ಉಸಿರು ನಿಂತ ಮಗುವಿಗೆ ಮರು ಜೀವ..! ಅಚ್ಚರಿಗೆ ಸಾಕ್ಷಿಯಾದ ವೈದ್ಯಲೋಕ..!

- Advertisement -

Special News:

Feb:24: ವಿಸ್ಮಯಕ್ಕೆ ಚಮತ್ಕಾರವೆಂಬಂತೆ ಬೆಳೆಯುತ್ತಿರೋದು ವೈದ್ಯಲೋಕ. ಆರೋಗ್ಯ ಕಾಪಾಡೊ ವೈದ್ಯ ಇಲ್ಲಿ ಮಗುವಿಗೆ ಮರು ಜೀವವನ್ನೇ ನೀಡಿದ್ದಾರೆ. ಕೆನಡಾದ ನೈರುತ್ಯ ಒಂಟಾರಿಯೋದ ಪೆಟ್ರೋಲಿಯದಲ್ಲಿ ವಿಸ್ಮಯಕಾರಿ  ಘಟನೆ  ನಡೆದಿದೆ.

ವೇಲಾನ್ ಸೌಂಡರ್ಸ್ ಎಂಬ 20 ತಿಂಗಳ ಮಗುವೊಂದು ಡೇ ಕೇರ್ ನಲ್ಲಿ ಆಟವಾಡುತ್ತಾ ಸ್ವಿಮ್ಮಿಂಗ್ ಫೂಲ್ ಗೆ ಬಿದ್ದಿದ್ದಾನೆ. ಐದು ನಿಮಿಷ ಕಾಲ ಮಗು ನೀರೊಳಗೇ ಇದ್ದುದರಿಂದ ನೀರು ತುಂಬಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಆಸ್ಪತ್ರೆಯಲ್ಲಿ ಸೂಕ್ತ ವೈದ್ಯರಿಲ್ಲದಿದ್ದರೂ ಇದ್ದವರೇ ಸೇರಿ ಮಗುವಿನ ಚಿಕಿತ್ಸೆಯಲ್ಲಿ ತೊಡಗಿದ್ದರು. ಆ ವೇಳೆಗಾಗಲೇ ಮಗುವಿಮ ಹೃದಯ ಬಡಿತವೂ ಸ್ತಬ್ದವಾಗಿದ್ದನ್ನು ಗಮನಿಸಿ ವೈದ್ಯರು ಆತನಿಗೆ ಸಿಪಿಆರ್ ನೀಡಿದ್ದಾರೆ. ಇನ್ನು ಚಿಕಿತ್ಸಾನಿರತ ವೈದ್ಯರಿಗೆ ಲಂಡನ್ ನ ತಜ್ಞರ ತಂಡವೊಂದು ಮಾರ್ಗದರ್ಶನ ನೀಡುತ್ತಿತ್ತು. ಮೂರು ಗಂಟೆ ಕಳೆದ ಬಳಿಕ ಮಗು ಉಸಿರಾಟ‌ ಆರಂಭಿಸಿದೆ. ಫೆಬ್ರವರಿ 6ರಂದು ಈತ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾನೆ. ಸಿಪಿಆರ್ ಕೊಟ್ಟ ಪರಿಣಾಮ ಆತನನ್ನು ಬದುಕಿಸಲು ಸಾಧ್ಯವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ.

ಕೃಷಿಯಲ್ಲಿ ಹೊಸ ಆವಿಷ್ಕಾರ ನೀಲಿ ಬಣ್ಣದ ಗೋದಿ ಉತ್ಪಾದನೆ

ಇಲ್ಲಿರುವ ಅಂಗಡಿಗೆ ಮಾಲೀಕರು ನೀವೇ , ಗ್ರಾಹಕರು ನೀವೇ

ಕೇಬಲ್ ಟಿವಿ ಉದ್ಯಮಿಗಳ ಕೈ ತಪ್ಪಲಿದ್ದಾರೆ ಗ್ರಾಹಕರು…!

 

- Advertisement -

Latest Posts

Don't Miss