Saturday, November 23, 2024

Latest Posts

ನಾರ್ತ್ ಶೈಲಿಯ ಬೈಂಗನ್ ಭರ್ತಾ ರೆಸಿಪಿ..

- Advertisement -

ನಾವೆಲ್ಲಾ ಬದನೆಕಾಯಿಯ ಗೊಜ್ಜು ಮಾಡುವ ರೀತಿ, ಉತ್ತರ ಭಾರತೀಯರು ಬೈಂಗನ್ ಭರ್ತಾ ಮಾಡ್ತಾರೆ. ಹಾಗಾದ್ರೆ ಈ ರೆಸಿಪಿ ಮಾಡೋದು ಹೇಗೆ..? ಇದನ್ನು ತಯಾರಿಸೋಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..

ಮನೆಯಲ್ಲೇ ಟೇಸ್ಟಿಯಾಗಿ ನೀವೂ ತಯಾರಿಸಬಹುದು ತವಾ ಪುಲಾವ್..

ಬೇಕಾಗುವ ಸಾಮಗ್ರಿ: ಎರಡು ದೊಡ್ಡ ಬದನೇಕಾಯಿ, ಮೂರು ಹಸಿ ಮೆಣಸು, ಒಂದು ಬೆಳ್ಳುಳ್ಳಿ, 5 ಸ್ಪೂನ್ ಎಣ್ಣೆ, ಎರಡರಿಂದ ಮೂರು ಈರುಳ್ಳಿ, ಸಣ್ಣಗೆ ಕತ್ತರಿಸಿದ ಹಸಿ ಶುಂಠಿ ಚಿಕ್ಕ ತುಂಡು, ಎರಡು ಟೊಮೆಟೊ, ಅರ್ಧ ಕಪ್ ಹಸಿ ಬಟಾಣಿ, 1 ಸ್ಪೂನ್ ಖಾರದ ಪುಡಿ, 1 ಸ್ಪೂನ್ ಧನಿಯಾ ಪುಡಿ, ಚಿಟಿಕೆ ಅರಿಶಿನ, ಕೊಂಚ ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಮೊದಲು ಬದನೆಯನ್ನು ಚೆನ್ನಾಗಿ ತೊಳೆದುಕೊಂಡು ನಾಲ್ಕು ಭಾಗ ಕೊಂಚ ಕತ್ತರಿಸಿ, ಅದರಲ್ಲಿ ಬೆಳ್ಳುಳ್ಳಿ ಎಸಳು ಮತ್ತು ಹಸಿಮೆಣಸಿನಕಾಯಿಯನ್ನು ತುಂಬಿ. ಈಗ ಬದನೆಗೆ ಎಣ್ಣೆ ಸವರಿ, ಸುಡಬೇಕು. ಬದನೆಕಾಯಿ ಸರಿಯಾಗಿ ಸುಟ್ಟ ಬಳಿಕ, ತಣಿಯಲು ಬಿಡಿ. ನಂತರ ಅದರ ಸಿಪ್ಪೆ ತೆಗಿಯಿರಿ, ಬೆಳ್ಳುಳ್ಳಿ ಮತ್ತು ಹಸಿಮೆಣಸು, ಬದನೆಯನ್ನು ಚೆನ್ನಾಗಿ ಮ್ಯಾಶ್ ಮಾಡಿ.

ಜೀವನದ ಬಗ್ಗೆ ಹೆಚ್ಚು ಯೋಚನೆ ಮಾಡೋದನ್ನ ನಿಲ್ಲಿಸೋದು ಹೇಗೆ..?

ಈಗ ಗ್ಯಾಸ್ ಆನ್ ಮಾಡಿ ಪ್ಯಾನ್ ಇರಿಸಿ ಬಿಸಿ ಮಾಡಿ, 4 ಸ್ಪೂನ್ ಎಣ್ಣೆ ಹಾಕಿ, ಶುಂಠಿ ಹುರಿಯಿರಿ. ಮೊದಲು ಈರುಳ್ಳಿ ಹುರಿದುಕೊಂಡು,  ಟೊಮೆಟೋ ಸೇರಿಸಿ ಹುರಿಯಿರಿ. ನಂತರ ಬಟಾಣಿ, ಅರಿಶಿನ, ಖಾರದ ಪುಡಿ, ಧನಿಯಾ ಪುಡಿ, ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. 2 ನಿಮಿಷ ಮಂದ ಉರಿಯಲ್ಲಿ ಇದನ್ನು ಬಾಡಿಸಿ. ನಂತರ ಇದಕ್ಕೆ ಮ್ಯಾಶ್ ಮಾಡಿಕೊಂಡ ಬದನೆಯನ್ನು ಸೇರಿಸಿ, ಚೆನ್ನಾಗಿ ಹುರಿಯಿರಿ. ಕೊನೆಯದಾಗಿ ಕೊತ್ತೊಂಬರಿ ಸೊಪ್ಪು ಸೇರಿಸಿದ್ರೆ, ಬೈಂಗನ್ ಭರ್ತಾ ರೆಡಿ.

- Advertisement -

Latest Posts

Don't Miss