Tuesday, October 22, 2024

Latest Posts

ಓಟ್ಸ್ ಈ ರೀತಿ ತಿಂದರೆ ಆರೋಗ್ಯಕ್ಕೂ ಒಳ್ಳೆಯದು, ರುಚಿಕರವೂ ಹೌದು..

- Advertisement -

ಡಯಟ್ ಮಾಡುವವರು ಹೆಚ್ಚು ಓಟ್ಸ್ ಸೇವನೆ ಮಾಡುತ್ತಾರೆ. ಓಟ್ಸ್‌ಗೆ ಫ್ರೂಟ್ಸ್, ಹಾಲು, ಜೇನುತುಪ್ಪ ಇವೆಲ್ಲ ಸೇರಿಸಿ ತಿನ್ನುತ್ತಾರೆ. ಅಥವಾ ಉಪ್ಪಿಟ್ಟು, ಖಿಚಡಿ, ದೋಸೆ ಮಾಡಿಕೊಂಡು ತಿನ್ನುತ್ತಾರೆ. ಆದ್ರೆ ಡಯಟ್ ಮಾಡಬೇಕು ಎಂದು ಬಯಸಿದ್ರೂ ಕೂಡ, ಇದನ್ನೆಲ್ಲ ಮಾಡಿಕೊಂಡು ತಿನ್ನುವಷ್ಟು ಟೈಮ್ ಕೂಡ ಇರುವುದಿಲ್ಲ. ಹಾಗಾಗಿ ನಾವು ಓವರ್ ನೈಟ್ ಓಟ್ಸ್ ಮಾಡಿಟ್ಟು, ಬೆಳಿಗ್ಗೆ ಎದ್ದು ತಿನ್ನಬಹುದಾದ ಓಟ್ಸ್ ರೆಸಿಪಿ ಬಗ್ಗೆ ಹೇಳಲಿದ್ದೇವೆ. ನೀವು ರಾತ್ರಿ ಮಲಗುವಾಗಲೇ ಇದನ್ನ 5 ನಿಮಿಷದಲ್ಲಿ ರೆಡಿ ಮಾಡಿ ಇರಿಸಿ, ಮರುದಿನ ಬೆಳಿಗ್ಗೆ ಇದನ್ನೇ ತಿಂದು ಆಫೀಸಿಗೆ ಹೊರಡಬಹುದು.

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಓಟ್ಸ್, 1 ಸ್ಪೂನ್ ಚೀಯಾ ಸೀಡ್ಸ್, 1 ಕಪ್ ಕಾಯಿಸಿ, ಆರಿಸಿದ ಹಾಲು, ಒಂದು ಸಣ್ಣಗೆ ಹೆಚ್ಚಿದ ಬಾಳೆಹಣ್ಣು, 1 ಸ್ಪೂನ್ ಪೀನಟ್‌ ಬಟರ್ ಇವಿಷ್ಟು ಒಂದು ಜಾರ್ ಓಟ್ಸ್ ಮಾಡೋಕ್ಕೆ. ಇನ್ನೊಂದು ರೀತಿಯ ಓಟ್ಸ್ ಮಾಡೋಕ್ಕೆ, ಅರ್ಧ ಕಪ್ ಓಟ್ಸ್, 1 ಸ್ಪೂನ್ ಚೀಯಾ ಸೀಡ್ಸ್, ಅರ್ಧ ಕಪ್ ಯೋಗರ್ಟ್, ಒಂದೂವರೆ ಸ್ಪೂನ್ ಹನಿ, ಕಾಲು ಕಪ್ ತುರಿದ ತೆಂಗಿನಕಾಯಿ, ನಿಮಗೆ ಇಷ್ಟವಾದ ಫ್ರೂಟ್ಸ್ ಮತ್ತು ಡ್ರೈಫ್ರೂಟ್ಸ್.

ಮಾಡುವ ವಿಧಾನ: ಒಂದು ಜಾರ್‌ನಲ್ಲಿ ಓಟ್ಸ್, ಚೀಯಾ ಸೀಡ್ಸ್, ಹಾಲು, ಬಾಳೆಹಣ್ಣು, ಪೀನಟ್ ಬಟರ್ ಇವಿಷ್ಟನ್ನ ಹಾಕಿ ಮಿಕ್ಸ್ ಮಾಡಿ ಫ್ರಿಜ್‌ನಲ್ಲಿರಿಸಿ. ಮರುದಿನ ಬೆಳಿಗ್ಗೆ ಇದನ್ನ ಫ್ರಿಜ್‌ನಿಂದ ಹೊರಗೆ ತೆಗೆದಿಟ್ಟು ಅರ್ಧಗಂಟೆ ಬಳಿಕ ನಿಮಗಿಷ್ಟವಾದ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನ ಸೇರಿಸಿ ಸವಿಯಿರಿ.

ಇನ್ನೊಂದು ರೀತಿಯ ಓಟ್ಸ್ ಮಾಡಲು, ಇದೇ ರೀತಿ ಜಾರ್ ತೆಗೆದುಕೊಂಡು ಅದಕ್ಕೆ ಓಟ್ಸ್, ಚೀಯಾ ಸೀಡ್ಸ್, ಯೋಗರ್ಟ್, ಜೇನುತುಪ್ಪ, ತೆಂಗಿನ ತುರಿ ಇವಿಷ್ಟನ್ನು ಮಿಕ್ಸ್ ಮಾಡಿ ಫ್ರಿಜ್‌ನಲ್ಲಿರಿಸಿ. ಮರುದಿನ ಬೆಳಿಗ್ಗೆ ಇದನ್ನ ಫ್ರಿಜ್‌ನಿಂದ ಹೊರಗೆ ತೆಗೆದಿಟ್ಟು ಅರ್ಧಗಂಟೆ ಬಳಿಕ ನಿಮಗಿಷ್ಟವಾದ ಡ್ರೈಫ್ರೂಟ್ಸ್ ಮತ್ತು ಹಣ್ಣುಗಳನ್ನ ಸೇರಿಸಿ ಸವಿಯಿರಿ.

ಕೂದಲನ್ನ ಆರೋಗ್ಯಕರವಾಗಿ ಇರಿಸಿಕೊಳ್ಳುವುದು ಹೇಗೆ..?

ಪೂರಿ, ಚಪಾತಿಗೆ ಮ್ಯಾಚ್ ಆಗುವ ಬಟಾಣಿ ಕರಿ ರೆಸಿಪಿ

- Advertisement -

Latest Posts

Don't Miss