Recipe: ಸಂಜೆಯಾದ್ರೆ ಏನಾದರೂ ಚಾಟ್ಸ್ ತಿನ್ನಬೇಕು ಅನ್ನೋ ಮನಸ್ಸಾಗತ್ತೆ. ಪ್ರತಿದಿನ ಹೊರಗಡೆ ತಿಂಡಿ ತಿಂದ್ರೆ, ಆರೋಗ್ಯವೂ ಹಾಳಾಗತ್ತೆ. ಹಾಗಾಗಿ ನಾವಿಂದು ಸಂಜೆ ನೀವೇ ನಿಮ್ಮ ಮನೆಯಲ್ಲಿ ಮಾಡಿ ತಿನ್ನಬಹುದಾದ ಪಾಪ್ಡಿ ಚಾಟ್ ರೆಸಿಪಿ ಹೇಳಲಿದ್ದೇವೆ.
ಪಾಪ್ಡಿ ಚಾಟ್ ತಯಾರಿಸಲು ಪಾಪ್ಡಿ ಅವಶ್ಯಕತೆ ಇದೆ. ಹಾಗಾಗಿ ನೀವು ಮಾರುಕಟ್ಟೆಯಲ್ಲಿ ಸಿಗುವ ಪಾಪ್ಡಿ ಬಳಸಿ, ಅಥವಾ ಮನೆಯಲ್ಲೇ ಪಾಪ್ಡಿ ತಯಾರಿಸಿ ಬಳಸಿ. ಇದಕ್ಕಾಗಿ 1 ಕಪ್ ಗೋಧಿ ಹಿಟ್ಟು, ಕಾಲು ಕಪ್ ರವೆ, ಕೊಂಚ ವೋಮ, 4 ಸ್ಪೂನ್ ಬಿಸಿ ಮಾಡಿದ ತುಪ್ಪ, ಉಪ್ಪು ಮತ್ತು ನೀರು ಹಾಕಿ, ಚಪಾತಿ ಹಿಟ್ಟಿನ ಹದಕ್ಕೆ ಕಲಿಸಿ. ಅರ್ಧ ಗಂಟೆ ಬಳಿಕ ಚಿಕ್ಕ ಚಿಕ್ಕ ಪೂರಿ ತಯಾರಿಸಿ, ಅದಕ್ಕೆ ಫೋರ್ಕ್‌ನಿಂದ ಚುಚ್ಚಿ. ಬಳಿಕ ಎಣ್ಣೆಯಲ್ಲಿ ಕರಿದರೆ, ಪಾಪ್ಡಿ ರೆಡಿ.
ಈಗ ಪ್ಲೇಟ್ ಮೇಲೆ ಪಾಪ್ಡಿ ಇಟ್ಟು, ಅದರ ಮೇಲೆ 1 ಬೇಯಿಸಿ, ಮ್ಯಾಶ್ ಮಾಡಿದ ಆಲೂಗಡ್ಡೆ, ಸಣ್ಣಗೆ ಹೆಚ್ಚಿದ 1 ಈರುಳ್ಳಿ, 1 ಟೊಮೆಟೋ, ಕೊಂಚ ಕೊತ್ತೊಂಬರಿ ಸೊಪ್ಪು, ಕಾಂಗ್ರೆಸ್ ಕಡಲೆ, ಚಾಟ್ ಮಸಾಲೆ, ಸೇವ್, ಚಿಟಿಕೆ ಉಪ್ಪು, ಖಾರದ ಪುಡಿ ಹಾಕಿ, ಅವಶ್ಯಕೆತ ಇದ್ದಲ್ಲಿ, ಮೊಸರಿಗೆ ಕೊಂಚ ಸಕ್ಕರೆ ಸೇರಿಸಿ, ಇದರೊಂದಿಗೆ ಮಿಕ್ಸ್ ಮಾಡಿ ತಿನ್ನಬಹುದು.
ಈ ಅಂಗಡಿಗೆ ಬಂದ್ರೆ ಕೆಜಿ ಲೆಕ್ಕದಲ್ಲಿ ಕಡಿಮೆ ಬೆಲೆಗೆ ಬಟ್ಟೆ ತೆಗೆದುಕೊಳ್ಳಬಹುದು..
ಪುಟ್ಟ ಮಕ್ಕಳಿಗೆ ಬಿಕ್ಕಳಿಕೆ ಬರಲು ಕಾರಣವೇನು..? ಇದೊಂದು ಸಮಸ್ಯೆನಾ..?