Political News: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧ ಕಾಂಗ್ರೆಸ್ 40 ಪರ್ಸೆಂಟ್ ಆರೋಪ ಮಾಡಿ, ಪೋಸ್ಟರ್ ಅಭಿಯಾನ ಮಾಡಿತ್ತು. ಇದೀಗ ಅದೇ ಪೋಸ್ಟರ್ ಅಭಿಯಾನ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಂತಿದೆ.
ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣ ಬೆಳಕಿಗೆ ಬರಲು ಮತ್ತು ಪೆನ್‌ಡ್ರೈವ್‌ನಲ್ಲಿರುವ ಮಹಿಳೆಯರ ವೀಡಿಯೋ ಶೇರ್ ಮಾಡುವಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಕಾರಣವೆಂದು, ಬೆಂಗಳೂರಿನ ಬಸ್‌ಸ್ಟ್ಯಾಂಡ್‌ಗಳಲ್ಲಿ ಫೋಸ್ಟರ್ ಅಂಟಿಸಲಾಗಿದೆ.
ಈ ಬಗ್ಗೆ ಮಾತನಾಡಿದ್ದ ವಕೀಲ ದೇವರಾಜೇಗೌಡ, ಪೆನ್‌ಡ್ರೈವ್ ಹೊರಗೆ ಬರಲು ಡಿಸಿಎಂ ಡಿ.ಕೆ.ಶಿವಕುಮಾರ್ ಮತ್ತು ಮಾಜಿ ಸಚಿವ ಶಿವರಾಮೇಗೌಡ ಕಾರಣವೆಂದು ಆರೋಪಿಸಿದ್ದರು. ಈ ಕಾರಣಕ್ಕೆ ರಾತ್ರೋರಾತ್‌ರಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ವಿರುದ್ಧ ಹಲವೆಡೆ ಪೋಸ್ಟರ್ ಅಂಟಿಸಿ, ಆಕ್ರೋಶ ವ್ಯಕ್‌ತಪಡಿಸಲಾಗಿದೆ.
ರಾಜಕೀಯಕ್ಕಾಗಿ ಫೋಟೋವನ್ನೇ ಮಾರಾಟಕ್ಕಿಟ್ಟ ಲೂಲು ಕುಮಾರ್, ಸಿದ್ದರಾಮಯ್ಯನವರೇ ನೀವು ಎಚ್ಚೆತ್ತುಕೊಳ್ಳದಿದ್ದರೆ, ಮುಂದೊಂದು ದಿನ ಈ ಮಹಾನುಭಾವ ನಿಮ್ಮ ಸಿಡಿಯನ್ನೇ ಹೊರಗೆ ತರಲು ಹಿಂದೆ ಮುಂದೆ ನೋಡುವುದಿಲ್ಲ. ಹುಡುಗಿಯರನ್ನು ಸಪ್ಲೈ ಮಾಡುವ ಪಿಂಪ್, ಹನಿಟ್ರ್ಯಾಪ್ ಮಾಡುವ ಪಿಂಪ್ ಎಂದು ಬರೆದು ಆರೋಪಿಸಲಾಗಿದೆ.
ಕುಮಾರಸ್ವಾಮಿ ಸುದ್ದಿಗೋಷ್ಠಿ: ಸರ್ಕಾರಕ್ಕೆ ಬೇಕಾಗಿರುವುದು ಬರೀ ಪ್ರಚಾರವೆಂದು ಆರೋಪ
Prajwal Pen drive case: ಒಂದು ಸಿದ್ದರಾಮಯ್ಯ ಇನ್ನೊಂದು ಶಿವಕುಮಾರ್ ಇನ್ವಿಸ್ಟಿಗೇಶನ್ ಟೀಂ: ಹೆಚ್ಡಿಕೆ
ನವೀನ್ ಗೌಡ ಮಾತನಾಡಿದ ಆಡಿಯೋ, ಜಮೀರ್ ಜೊತೆಗಿರುವ ಫೋಟೋ ರಿಲೀಸ್ ಮಾಡಿದ ಕುಮಾರಸ್ವಾಮಿ