Recipe: ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ಬೋರ್ ಬಂದ್ರೆ, ಅಂಥವರು ಪರಾಠಾ ಟ್ರೈ ಮಾಡಬಹುದು. ಇದು ರುಚಿ ರುಚಿಯಾಗಿರುತ್ತದೆ. ಮತ್ತು ಇದರೊಂದಿಗೆ ಯಾವ ಪಲ್ಯದ ಅವಶ್ಯಕತೆಯೂ ಇರುವುದಿಲ್ಲ. ಪರಾಠಾಗೆ ಮೊಸರು ಇದ್ದರೆ ಸಾಕು. ಹಾಗಾಗಿ ನಾವಿಂದು ಆಲೂ- ಈರುಳ್ಳಿ ಪರಾಠಾ ತಯಾರಿಸೋದು ಹೇಗೆ ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 2 ಸ್ಪೂನ್ ಎಣ್ಣೆ, ಒಂದು ಸ್ಪೂನ್ ಶುಂಠಿ- ಹಸಿಮೆಣಸಿನ ಪೇಸ್ಟ್, 1 ಸಣ್ಣಗೆ ಹೆಚ್ಚಿದ ಈರುಳ್ಳಿ, 3 ಬೇಯಿಸಿ, ಸ್ಮ್ಯಾಶ್ ಮಾಡಿದ ಆಲೂಗಡ್ಡೆ, ಚಿಟಿಕೆ ಅರಿಶಿನ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ, ಕಾಲು ಸ್ಪೂನ್ ವೋಮ, ಅರ್ಧ ಸ್ಪೂನ್ ಚಾಟ್ ಮಸಾಲೆ, ಉಪ್ಪು, ಕೊತ್ತೊಂಬರಿ ಸೊಪ್ಪು, ಕರಿಬೇವಿನ ಸೊಪ್ಪು, ಚಿಟಿಕೆ ಕಸೂರಿ ಮೇಥಿ, ಇವಿಷ್ಟು ಹೂರಣಕ್ಕೆ ಬೇಕಾದ ಪದಾರ್ಥ. ಮೊದಲು ಪ್ಯಾನ್ ಬಿಸಿ ಮಾಡಿ, ಎಣ್ಣೆ, ಶುಂಠಿ-ಹಸಿಮೆಣಸಿನ ಪೇಸ್ಟ್, ಈರುಳ್ಳಿ ಹಾಕಿ ಹುರಿದು, ಉಳಿದೆಲ್ಲ ಪದಾರ್ಥ ಮಿಕ್ಸ್ ಮಾಡಿದ್ರೆ, ಹೂರಣ ರೆಡಿ.
2 ಕಪ್ ಗೋಧಿ ಹಿಟ್ಟು, ಅರ್ಧ ಕಪ್ ಕಡಲೆಹಿಟ್ಟು, ಚಿಟಿಕೆ ವೋಮ, ಉಪ್ಪು, ತುಪ್ಪ, ನೀರು ಹಾಕಿ ಪರಾಠಾ ಹಿಟ್ಟು ಕಲಿಸಿಕೊಳ್ಳಬೇಕು. ಅರ್ಧ ಗಂಟೆ ಬಳಿಕ, ಹೂರಣವನ್ನು ಹಿಟ್ಟಿಗೆ ತುಂಬಿಸಿ, ಚಪಾತಿಯಂತೆ ಕಾಯಿಸಿದರೆ, ಆಲೂ ಈರುಳ್ಳಿ ಪರಾಟಾ ರೆಡಿ.
ಮನುಷ್ಯನ ದೇಹಕ್ಕೆ ಪ್ರೋಟೀನ್ ಎಷ್ಟು ಅಗತ್ಯ..? ಪ್ರೋಟೀನ್ ಅಂಶ ಹೆಚ್ಚಾದ್ರೆ ಏನಾಗತ್ತೆ..?