- Advertisement -
Sandalwood News: ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್‌ಕುಮಾರ್ ಮತ್ತು ಅವರ ಪತ್ನಿ ಗೀತಾ ಶಿವರಾಜ್‌ಕುಮಾರ್ ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ. ಇವರೊಂದಿಗೆ ಇವರ ಕುಟುಂಬಸ್ಥರು ಮತ್ತು ಸ್ನೇಹಿತರು ಕೂಡ ತಿರುಪತಿ ಬಾಲಾಜಿ ದರ್ಶನ ಮಾಡಿದ್ದಾರೆ.
ಶಿವರಾಜ್‌ಕುಮಾರ್ ತಮ್ಮ ಸಿನಿಮಾ ಶೂಟಿಂಗ್ ಎಲ್ಲ ಮುಗಿಸಿದ್ದು, ಕೆಲವು ಸಿನಿಮಾ ಶೂಟಿಂಗ್ ಪೋಸ್ಟ್‌ಪೋನ್ ಮಾಡಿಕೊಂಡಿದ್ದಾರೆ. ಇದಕ್ಕೆ ಕಾರಣ, ಅವರಿಗೆ ಅನಾರೋಗ್ಯ ಸಮಸ್ಯೆ ಇದ್ದು, ಅದರ ಚಿಕಿತ್ಸೆ ಪಡೆಯಲು ಅವರು ಅಮೆರಿಕಕ್ಕೆ ತೆರಳಬೇಕಿದೆ. ಅದಕ್ಕೂ ಮುನ್ನ ತಿರುಪತಿಗೆ ಹೋಗಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
ಶಿವಣ್ಣ ನಟನೆಯ ಭೈರತಿ ರಣಗಲ್ ಸಿನಿಮಾ ಇತ್ತೀಚೆಗೆ ರಿಲೀಸ್ ಆಗಿದ್ದು, ಸಖತ್ ರೆಸ್ಪಾನ್ಸ್ ಪಡೆದಿದೆ. ಬಾಾಕ್ಸಾಫೀಸ್‌ನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ.
- Advertisement -