Tuesday, April 22, 2025

Latest Posts

ಶ್ರೀನಿವಾಸ ಗುರೂಜಿಯವರಿಂದ ವೃಶ್ಚಿಕ ರಾಶಿಯವರ 2025ರ ವರ್ಷ ಭವಿಷ್ಯ

- Advertisement -

Horoscope: ಖ್ಯಾತ ಜ್ಯೋತಿಷಿಗಳಾದ ಶ್ರೀನಿವಾಸ ಗುರೂಜಿಯವರು ವೃಶ್ಚಿಕ ರಾಶಿಯವರ 2025ನೇ ವರ್ಷ ಯಾವ ರೀತಿ ಇರಲಿದೆ ಎಂದು ವಿವರಿಸಿದ್ದಾರೆ.

ವೃಶ್ಚಿಕ ರಾಶಿ ಅಂದ್ರೆ ನಮಗೆ ಹಲವು ಗಣ್ಯ ವ್ಯಕ್ತಿಗಳು ಕಾಣ ಸಿಗುತ್ತಾರೆ. ವೃಶ್ಚಿಕ ರಾಶಿಯವರಿಗೆ ಇದು ಮಾರಕವಾಗುವಂಥ ವರ್ಷ. ನೀವು ಮಿತ್ರರು ಅಂದುಕೊಂಡವರೇ ನಿಮಗೆ ಶತ್ರುಗಳಾಗುತ್ತಾರೆ. ನೀವು ನಂಬಿದವರೇ, ನಿಮ್ಮ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡುತ್ತಾರೆ.

ನೀವು ಇನ್ನೊಬ್ಬರಿಗೆ ಎಷ್ಟೇ ಒಳ್ಳೆಯದು ಬಯಸಿದರು, ಸಹಾಯ ಮಾಡಿದರೂ, ಆ ಸಹಕಾರವನ್ನು ಅವರು ಖಂಡಿತವಾಗಿಯೂ ನೆನೆಸಿಕೊಳ್ಳುವುದಿಲ್ಲ. ಹಾಾಗಾಗಿ ವೃಶ್ಚಿಕ ರಾಶಿಯವರು ಜಾಗೃತೆ ವಹಿಸಬೇಕು. ಇನ್ನೊಂದು ಮುಖ್ಯ ವಿಷಯವೆಂದರೆ, ನೀವು ಕೆಲಸ ಮಾಡುವ ಸ್ಥಳದಲ್ಲಿ ಏನೇ ಕಷ್ಟ ಬಂದರೂ, ಅದಕ್ಕೆ ತಲೆಗೊಡದೇ, ಕೆಲಸ ಮಾಡಿಕೊಂಡು ಹೋಗಿ. ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡಿ.

ಏಕೆಂದರೆ ಕೆಲಸ ಬದಲಾಯಿಸಬೇಕು ಅಂದ್ರೆ ನಿಮಗೆ ಬೇಗ ಕೆಲಸ ಸಿಗುವುದಿಲ್ಲ. ಸುಮಾರು ದಿನಗಳ ಕಾಲ ಅಲಿಯಬೇಕಾಗುತ್ತದೆ. ಇನ್ನು ಯಾರಾದರೂ ನಿಮ್ಮೆದುರು ಕೊಂಕು ಮಾತನಾಡಿದರೂ, ನಿಮ್ಮ ಬಗ್ಗೆ ಕೆಟ್ಟದ್ದು ಮಾತನಾಡಿದರೂ ಅದಕ್ಕೆ ಉತ್ತರಿಸಲು ಹೋಗಬೇಡಿ. ಸಮಯ ಬಂದಾಗ, ಅವರಿಗೆ ದೇವರೇ ಉತ್ತರಿಸುತ್ತಾನೆಂದು ಸುಮ್ಮನಿದ್ದು ಬಿಡಿ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬೇಡಿ.

ನೀವು ಇಷ್ಟು ದಿನ ಹೇಗೆ ಧರ್ಮವನ್ನು ಬಿಟ್ಟು ನಡೆಯದೇ, ಅಧರ್ಮದ ಹಾಾದಿ ತುಳಿಯದೇ, ನ್ಯಾಯಯುತವಾಗಿದ್ದೀರೋ, ಅದೇ ರೀತಿ ನಿಮ್ಮ ಜೀವನವನ್ನು ಮುಂದುವರಿಸಿ. ದೇವರನ್ನು ಧ್ಯಾನಿಸಿ, ಹಿರಿಯರಿಗೆ ಗೌರವಿಸಿ.

ಗೂರುಜಿ ಜೊತೆ ಮಾತನಾಡಲು ಈ ನಂಬರನ್ನು ಸಂಪರ್ಕಿಸಿ: 9535033324

- Advertisement -

Latest Posts

Don't Miss