Wednesday, December 4, 2024

Latest Posts

ವಿದ್ಯಾರ್ಥಿಗಳು ಈ 4 ವಿಚಾರಗಳನ್ನ ತಿಳಿಯಲೇಬೇಕು ಎನ್ನುತ್ತಾನೆ ಶ್ರೀಕೃಷ್ಣ..

- Advertisement -

ಶ್ರೀಕೃಷ್ಣ ಭಗವದ್ಗೀತೆಯ ಮೂಲಕ ಅರ್ಜುನನರಿಗೆ ಗುರೋಪದೇಶ ಕೊಟ್ಟಿದ್ದನು. ಅದರಲ್ಲಿ ಹಲವು ವಿಷಯಗಳನ್ನು ಹೇಳಿದ್ದನು. ಅದೇ ರೀತಿ ವಿದ್ಯಾರ್ಥಿಗಳು ಕೂಡ ಕೆಲ ವಿಷಯಗಳನ್ನ ತಿಳಿದುಕೊಳ್ಳಲೇಬೇಕು. ಹಾಗೆ ತಿಳಿದುಕೊಂಡರೆ ಮಾತ್ರ, ಅವರ ಜೀವನ ಅತ್ಯುತ್ತಮವಾಗಿರುತ್ತದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾವ 4 ವಿಷಯಗಳನ್ನು ತಿಳಿದುಕೊಳ್ಳಬೇಕು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಿಷಯ, ಧ್ಯಾನವೆಂಬುದು ವಿದ್ಯಾರ್ಥಿ ಜೀವನದಲ್ಲಿ ಅತೀ ಮುಖ್ಯವಾದ ಅಂಶ. ವಿದ್ಯಾರ್ಥಿಗೆ ಓದಿದ್ದು ನೆನಪಿರಬೇಕು. ವಿದ್ಯಾಭ್ಯಾಸದಲ್ಲಿ ಏಕಾಗೃತೆ ಇರಬೇಕು ಅಂದ್ರೆ, ಧ್ಯಾನ ಮಾಡುವುದು ಅತೀ ಅವಶ್ಯಕ. ಯಾರು ಪ್ರತಿದಿನ ಧ್ಯಾನ ಮಾಡಿದ ಬಳಿಕ ಅಭ್ಯಾಸ ಶುರು ಮಾಡುತ್ತಾರೋ, ಅಂಥವರಿಗೆ ಓದಿದ್ದೆಲ್ಲ ಸರಿಯಾಗಿ ನೆನಪಿರುತ್ತದೆ. ಮತ್ತು ಪರೀಕ್ಷೆಯ ಸಮಯದಲ್ಲಿ ಕಂಗಾಲಾಗುವ ಸಾಧ್ಯತೆ ಇರುವುದಿಲ್ಲ.

ಎರಡನೇಯ ವಿಷಯ, ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ಕೆಲವರಿಗೆ ತಾನು ಪರೀಕ್ಷೆಯಲ್ಲಿ ಪಾಸಾಗಬಲ್ಲೆನಾ..? ನನಗೆ ಬೇಕಾದ ಕೆಲಸ ಸಿಗುತ್ತದಾ..? ಇಲ್ಲವಾ..? ಈ ರೀತಿ ಡೌಟ್‌ನಲ್ಲೇ ಇರುತ್ತಾರೆ. ಆದ್ರೆ ವಿದ್ಯಾರ್ಥಿಯಾದವನಿಗೆ ಹಠವಿರಬೇಕು. ತಾನು ಅತೀ ಹೆಚ್ಚು ಅಂಕ ಗಳಿಸಿ ಪಾಸ್ ಆಗೇ ಆಗುತ್ತೇನೆ. ಆ ಕೆಲಸ ಗಿಟ್ಟಿಸಿಕೊಳ್ಳುತ್ತೇನೆ. ಅದಕ್ಕಾಗಿ ಕಷ್ಟಪಟ್ಟು, ಏಕಾಗೃತೆಯಿಂದ ಓದುತ್ತೇನೆ ಎಂಬ ನಂಬಿಕೆ ಇಟ್ಟುಕೊಂಡಿ ಓದಿ. ಆಗ ಯಶಸ್ಸು ನಿಮ್ಮದಾಗುತ್ತದೆ.

ಮೂರನೇಯ ವಿಷಯ, ಬದಲಾವಣೆ ಜಗದ ನಿಯಮ. ಈ ವಿಷಯವನ್ನು ಮುಖ್ಯವಾಗಿ ವಿದ್ಯಾರ್ಥಿಗಳು ನೆನಪಿನಲ್ಲಿರಿಸಿಕೊಳ್ಳಬೇಕು. ಅದರಲ್ಲೂ ಅನುತ್ತೀರ್ಣರಾದ ವಿದ್ಯಾರ್ಥಿಗಳು. ಯಾಕಂದ್ರೆ ವಿದ್ಯಾಭ್ಯಾಸವೇ ಜೀವನ, ಪರೀಕ್ಷೆಯಲ್ಲಿ ನಪಾಸ್ ಆದರೆ ಮರ್ಯಾದೆ ಹೋದಂತೆ ಅಂದುಕೊಳ್ಳಬೇಡಿ. ನಿಮಗೆ ಇನ್ನೊಂದು ಅವಕಾಶ ಸಿಕ್ಕಿರುತ್ತದೆ. ಆ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ. ಇಲ್ಲವಾದಲ್ಲಿ, ನಿಮ್ಮಲ್ಲಿರುವ ಟ್ಯಾಲೆಂಟ್ ಬಳಸಿ, ಜೀವನ ಮಾಡಿ. ಎಷ್ಟೋ ಜನ ಶಾಲೆಯ ಪರೀಕ್ಷೆಯಲ್ಲಿ ಫೇಲ್ ಆದವರು, ಜೀವನದ ಪರೀಕ್ಷೆಯಲ್ಲಿ ರ್ಯಾಂಕ್ ಪಡೆದಿದ್ದಾರೆ. ಜೀವನಕ್ಕಿಂತ ದೊಡ್ಡ ಪರೀಕ್ಷೆ ಇನ್ನೊಂದಿಲ್ಲ ಎನ್ನುವುದನ್ನ ಅರಿತುಕೊಳ್ಳಿ. ಬದಲಾವಣೆ ಜಗದ ನಿಯಮವೆಂದು ಮುಂದೆ ಸಾಗಿ.

ನಾಲ್ಕನೇಯ ವಿಷಯ, ಕನಸು ಕಾಣುವುದು ಕೂಡ ಮುಖ್ಯ. ಮನುಷ್ಯ ಬದುಕಿರುವುದೇ ಕನಸ್ಸಿನ ಮೇಲೆ. ಯಾರು ಕನಸ್ಸು ಕಾಣದೇ, ಗುರಿ ಇಲ್ಲದೇ, ಜೀವನ ಮಾಡುತ್ತಾರೋ, ಅಂಥವರು, ಇದ್ದೂ ಸತ್ತಂತೆ. ಹಾಗಾಗಿ ನಿಮ್ಮ ಜೀವವಿರುವವರೆಗೂ ಕನಸು ಕಾಣುತ್ತಲೇ ಜೀವನ ಸಾಗಿಸಿ. ಜೊತೆಗೆ ಆ ಕನಸನ್ನ ನನಸು ಮಾಡುವ ಪ್ರಯತ್ನ ನಡೆಯುತ್ತಿರಲಿ.

ನಿಮ್ಮ ಮನೆಯ ಮಹಿಳೆಯರು ಇಂಥ ಕೆಲಸವನ್ನ ಮಾಡಿದರೆ ಈಗಲೇ ತಡೆಯಿರಿ..

ಅಪ್ಪಿ ತಪ್ಪಿಯೂ ನಿಮ್ಮ ಮಗುವಿಗೆ ಇಂಥ ಹೆಸರುಗಳನ್ನು ಇಡಬೇಡಿ..

ಚಾಣಕ್ಯರ ಪ್ರಕಾರ ನಿಮ್ಮಲ್ಲಿ ಈ 5 ಗುಣಗಳಿದ್ದರೆ ನೀವೇ ಬುದ್ಧಿವಂತರು..

- Advertisement -

Latest Posts

Don't Miss