ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್ಗಳ ರೆಸಿಪಿ ಹೇಳಲಿದ್ದೇವೆ.
ಈ ಸೂಪ್ ಮಾಡುವ ಮುನ್ನ ನೀರು, ಬೇಯಿಸಿದ ತರಕಾರಿಗಳ ನೀರನ್ನ ಇಟ್ಟುಕೊಂಡರೆ ತುಂಬಾ ಉತ್ತಮ. ಯಾಕಂದ್ರೆ ನೀರಿನಿಂದ ಮಾಡುವ ಸೂಪ್ಗಿಂತ, ತರಕಾರಿ ಬೇಯಿಸಿದ ನೀರಿನಿಂದ ಮಾಡುವ ಸೂಪ್ ಆರೋಗ್ಯಕರ ಮತ್ತು ಟೇಸ್ಟಿಯಾಗಿರತ್ತೆ.
ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ
ಟೋಮೆಟೋ ಸೂಪ್ ಮಾಡಲು ಬೇಕಾಗಿರುವ ಸಾಮಗ್ರಿ:ಒಂದು ಸ್ಪೂನ್ ತುಪ್ಪ ಅಥವಾ ಬೆಣ್ಣೆ, ಎರಡು ಟೊಮೆಟೋ, ಒಂದು ಕ್ಯಾರೆಟ್, ಕೊಂಚ ಕೊತ್ತಬಂರಿ ಸೊಪ್ಪಿನ ದಂಟು, ಕೊಂಚ ಸಣ್ಣಗೆ ಕತ್ತರಿಸಿದ ಶುಂಠಿ ಮತ್ತು ಬೆಳ್ಳುಳ್ಳಿ,
ಮಾಡುವ ವಿಧಾನ: ಒಂದು ಪ್ಯಾನ್ಗೆ ತುಪ್ಪ ಅಥವಾ ಬೆಣ್ಣೆ ಹಾಕಿ, ಅದಕ್ಕೆ ಮೊದಲು ಬೆಳ್ಳುಳ್ಳಿ ಹಾಕಿ ಹುರಿಯಿರಿ ನಂತರ ಶುಂಠಿ ಹಾಕಿ ಹುರಿಯಿರಿ. ಇದಾದ ಬಳಿಕ, ಕೊತ್ತೊಂಬರಿ ಸೊಪ್ಪಿನ ದಂಟು ಹಾಕಿ ಹುರಿಯಿರಿ. ನಂತರ ಕ್ಯಾರೆಟ್ ಟೊಮೆಟೋ ಹಾಕಿ ಚೆನ್ನಾಗಿ ಹುರಿಯಿರಿ. ಇದನ್ನು ಪೇಸ್ಟ್ ಮಾಡಿ. ಈಗ ಒಂದು ಪ್ಯಾನ್ಗೆ ತುಪ್ಪ ಹಾಕಿ, ತರಕಾರಿ ಪೇಸ್ಟ್ ಮತ್ತು ನೀರು ಸೇರಿಸಿ. ಇದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು, ಹಾಕಿ ಬೇಯಿಸಿದ್ರೆ ಸೂಪ್ ರೆಡಿ.
ಚಳಿಗಾಲಕ್ಕಾಗಿ ಸಕ್ಕರೆ ಇಲ್ಲದೇ ಆರೋಗ್ಯಕರ, ರುಚಿಕರ ಲಾಡು ತಯಾರಿಸಿ..
ಎರಡನೇಯ ಸೂಪ್ ಹಾಟ್ ಆ್ಯಂಡ್ ಸೌರ್ ಸೂಪ್.
ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ಬೆಣ್ಣೆ, ಕೊಂಚ ಸಣ್ಣಗೆ ಕತ್ತರಿಸಿದ ಶುಂಠಿ, ಹಸಿ ಮೆಣಸು ಮತ್ತು ಬೆಳ್ಳುಳ್ಳಿ, ಒಂದು ಬೌಲ್ ಸಣ್ಣಗೆ ಕತ್ತರಿಸಿದ ಕ್ಯಾರೆಟ್, ಕ್ಯಾಬೇಜ್, ಸ್ಪ್ರಿಂಗ್ ಆನಿಯನ್, ಮಶ್ರೂಮ್, ಒಂದು ಸ್ಪೂನ್ ಚಿಲ್ಲಿ ಸಾಸ್, ಸೋಯಾ ಸಾಸ್, ಒಂದು ಸ್ಪೂನ್ ಕಾಳು ಮೆಣಸಿನ ಪುಡಿ, ಒಂದು ಸ್ಪೂನ್ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಪ್ಯಾನ್ ಬಿಸಿ ಮಾಡಿ, ಅದಕ್ಕೆ ಬೆಣ್ಣೆ ಹಾಕಿ, ಬೆಳ್ಳುಳ್ಳಿ, ಶುಂಠಿ ಮತ್ತು ಹಸಿ ಮೆಣಸಿನಕಾಯಿ ಹಾಕಿ ಹುರಿಯಿರಿ. ನಂತರ ಕ್ಯಾರೆಟ್, ಕ್ಯಾಬೇಜ್, ಸ್ಪ್ರಿಂಗ್ ಆನಿಯನ್, ಮಮಶ್ರೂಮ್ ಹಾಕಿ ಚೆನ್ನಾಗಿ ಹುರಿಯಿರಿ. ಇದಕ್ಕೆ ನೀರು, ಸೋಯಾ ಸಾಸ್, ಚಿಲ್ಲಿ ಸಾಸ್, ಕಾಳು ಮೆಣಸಿನ ಪುಡಿ, ಉಪ್ಪು ಹಾಕಿ, ಬೇಯಿಸಿ. ಈಗ ಕಾರ್ನ್ ಫ್ಲೋರ್ ಮತ್ತು ನೀರು ಮಿಕ್ಸ್ ಮಾಡಿ, ಅದನ್ನ ಸೂಪ್ಗೆ ಸೇರಿಸಿ, ಕೊಂಚ ಥಿಕ್ ಆಗುವವರೆಗೂ ಬೇಯಿಸಿದರೆ, ಹಾಟ್ ಆ್ಯಂಡ್ ಸೌರ್ ಸೂಪ್ ರೆಡಿ.