Sunday, September 8, 2024

Latest Posts

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

- Advertisement -

ಚಳಿಗಾಲದಲ್ಲಿ ಬಿಸಿ ಬಿಸಿ ಆಹಾರವನ್ನು ಸೇವಿಸಬೇಕು. ಇದರಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿ ಇಂದು ನಾವು ಚಳಿಗಾಲದಲ್ಲಿ ಮಾಡಿ, ಸೇವಿಸಬಹುದಾದ ಸೂಪ್‌ಗಳ ರೆಸಿಪಿ ಹೇಳಲಿದ್ದೇವೆ.

ಬೇಕಾಗಿರುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಒಂದು ಪಲಾವ್ ಎಲೆ, 4ರಿಂದ 5 ಕಾಳುಮೆಣಸು, ಚಿಕ್ಕ ತುಂಡು ಶುಂಠಿ ಮತ್ತು ಕೊಂಚ ಬೆಳ್ಳುಳ್ಳಿ, ಚಿಕ್ಕ ತುಂಡು ಈರುಳ್ಳಿ, ಈರುಳ್ಳಿ ಸೊಪ್ಪು, ಚಿಕ್ಕ ಕ್ಯಾರೆಟ್, ಒಂದು ಹಸಿ ಮೆಣಸು, ಕೊಂಚ ಕೊತ್ತಂಬರಿ ಸೊಪ್ಪು, ಚಿಕ್ಕ ತುಂಡು ಫ್ಲವರ್, ಅರ್ಧ ಕ್ಯಾಪ್ಸಿಕಂ, ಕೊಂಚ ಎಲೆಕೋಸು, ಒಂದು ಸ್ಪೂನ್ ಸೋಯಾ ಸಾಸ್, ರುಚಿಗೆ ತಕ್ಕಷ್ಟು ಉಪ್ಪು, ಅಗತ್ಯಕ್ಕೆ ತಕ್ಕಷ್ಟು ನೀರು.

ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ತುಪ್ಪ ಹಾಕಿ ಬಿಸಿ ಮಾಡಿ, ಪಲಾವ್ ಎಲೆ, ಕುಟ್ಟಿ ಪುಡಿ ಮಾಡಿದ ಕಾಳು ಮೆಣಸು, ಹಸಿ ಮೆಣಸು, ಬೆಳ್ಳುಳ್ಳಿ, ಶುಂಠಿ ಹಾಕಿ ಹುರಿದುಕೊಳ್ಳಿ. ನಂತರ ಈರುಳ್ಳಿ, ಈರುಳ್ಳಿ ಸೊಪ್ಪು ಹಾಕಿ ಹುರಿದುಕೊಳ್ಳಿ. ಕ್ಯಾರೆಟ್, ಫ್ಲವರ್, ಹಾಕಿ ಹುರಿದು, ನೀರು, ಕೊತ್ತಂಬರಿ ಸೊಪ್ಪು ಹಾಕಿ ಬೇಯಿಸಿಕೊಳ್ಳಿ. ತರಕಾರಿ ಬೆಂದ ಬಳಿಕ ನೀರನ್ನು ಹಾಕಿ ಬಿಟ್ಟು, ಪಲಾವ್ ಎಲೆ ತೆಗೆದು, ಉಳಿದ ತರಕಾರಿಯನ್ನ ಪೇಸ್ಟ್ ಮಾಡಿಕೊಳ್ಳಿ.

ಈಗ ಪ್ಯಾನ್‌ ಬಿಸಿ ಮಾಡಿ ತುಪ್ಪ ಹಾಕಿ, ಬೆಳ್ಳುಳ್ಳಿ, ಕ್ಯಾಪ್ಸಿಕಂ, ಎಲೆಕೋಸು ಹುರಿದುಕೊಳ್ಳಿ. ಇದಕ್ಕೆ ಮೊದಲೇ ರೆಡಿ ಮಾಡಿಟ್ಟುಕೊಂಡ ಪೇಸ್ಟ್, ತರಕಾರಿ ಬೇಯಿಸಿದ ನೀರು, ಉಪ್ಪು, ಹಾಕಿ ಬೇಯಿಸಿ. ಅಗತ್ಯವಿದ್ದರಷ್ಟೇ ಸೋಯಾ ಸಾಸ್ ಬಳಸಿ. ಈಗ ತರಕಾರಿ ಸೂಪ್ ರೆಡಿ.

ಚಳಿಗಾಲಕ್ಕಾಗಿ ಸಕ್ಕರೆ ಇಲ್ಲದೇ ಆರೋಗ್ಯಕರ, ರುಚಿಕರ ಲಾಡು ತಯಾರಿಸಿ..

ಎರಡನೇಯ ಸೂಪ್ ಕಾರ್ನ್ ಸೂಪ್.

ಬೇಕಾಗಿರುವ ಸಾಮಗ್ರಿ: ಒಂದು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣದಾಗಿ ಕತ್ತರಿಸಿದ ಬೆಳ್ಳುಳ್ಳಿ, ಹಸಿರು ಸೊಪ್ಪಿರುವ ಈರುಳ್ಳಿ, ಅರ್ಧ ಕಪ್ ಬೇಯಿಸಿದ ಕಾರ್ನ್, ಸಣ್ಣಗೆ ಕತ್ತರಿಸಿದ ಒಂದು ಕ್ಯಾರೆಟ್, ಕಾಲು ಕಪ್ ಕ್ಯಾಬೇಜ್, ಒಂದು ಸ್ಪೂನ್ ಪೆಪ್ಪರ್ ಪುಡಿ, ಕೊಂಚ ಶುಂಠಿ- ಹಸಿ ಮೆಣಸಿನ ಪೇಸ್ಟ್, ಅರ್ಧ ಸ್ಪೂನ್ ನಿಂಬೆ ರಸ, ಕೊಂಚ ಸಕ್ಕರೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಒಂದು ಪ್ಯಾನ್ ಬಿಸಿ ಮಾಡಿಕೊಂಡು ಅದಕ್ಕೆ ತುಪ್ಪ ಹಾಕಿ, ಬೆಳ್ಳುಳ್ಳಿ ಹುರಿದುಕೊಳ್ಳಿ. ನಂತರ ಹಸಿರು ಸೊಪ್ಪಿನ ಈರುಳ್ಳಿ, ಕಾರ್ನ್, ಕ್ಯಾರೆಟ್, ಕ್ಯಾಬೇಜ್ ಹಾಕಿ ಚೆನ್ನಾಗಿ ಹುರಿದುಕೊಳ್ಳಿ. ಈಗ ಇದಕ್ಕೆ ಪೆಪ್ಪರ್ ಪುಡಿ, ಶುಂಠಿ- ಹಸಿಮೆಣಸಿನ ಪೇಸ್ಟ್, ನಿಂಬೆ ರಸ, ಉಪ್ಪು, ಸಕ್ಕರೆ, ನೀರು ಹಾಕಿ, ಬೇಯಿಸಿದರೆ, ಕಾರ್ನ್ ಸೂಪ್ ರೆಡಿ.. ಅಗತ್ಯವಿದ್ದಲ್ಲಿ ಕೊಂಚ ಕೊತ್ತೊಂಬರಿ ಸೊಪ್ಪು ಸೇರಿಸಬಹುದು.

- Advertisement -

Latest Posts

Don't Miss