Saturday, July 27, 2024

Latest Posts

ಮಾಡೆಲ್ಗಳ 8 ಹಿಡನ್ ಬ್ಯೂಟಿ ಸಿಕ್ರೇಟ್ಸ್ ಇದೇ ನೋಡಿ..- ಭಾಗ 2

- Advertisement -

ಮೊದಲ ಭಾಗದಲ್ಲಿ ಮಾಡೆಲ್‌ಗಳು ಬಳಸುವ 4 ಬ್ಯೂಟಿ ಸಿಕ್ರೇಟ್ಸ್ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗವಾಗಿ, ಮತ್ತಷ್ಟು ಮಾಹಿತಿಯನ್ನ ತಿಳಿಸಲಿದ್ದೇವೆ.

ಐದನೇಯ ಸಿಕ್ರೇಟ್  ಮಾಡೆಲ್‌ಗಳು ತಮ್ಮ ದೇಹವನ್ನು ಹೈಡ್ರೇಟೆಡ್ ಆಗಿ ಇಟ್ಟಿರುತ್ತಾರೆ. ಅದಕ್ಕಾಗಿ ಹೆಚ್ಚು ನೀರು ಕುಡಿಯುತ್ತಾರೆ. ಹಣ್ಣು, ಜ್ಯೂಸ್‌ಗಳನ್ನು ಹೆಚ್ಚಾಗಿ ತಿನ್ನುತ್ತಾರೆ. ಅವರು ತಿನ್ನುವ ಆಹಾರ ಲೈಟ್ ಆಗಿರುತ್ತದೆ. ಹಾಗಾಗಿ ಕೊಂಚ ಕೊಂಚ ನೀರು ಕುಡಿಯುತ್ತಿರುವುದರಿಂದ ನಿಮ್ಮ ದೇಹ ಹೈಡ್ರೇಟೆಡ್ ಇರುತ್ತದೆ.

ಚಳಿಗಾಲಕ್ಕೆ ತಿನ್ನಬಹುದಾದ ಆರೋಗ್ಯಕರ ಸ್ವೀಟ್ ಶೇಂಗಾ ಚಿಕ್ಕಿ

ಆರನೇಯ ಸಿಕ್ರೇಟ್ ಮಾಡಲ್‌ಗಳು ಸರಿಯಾಗಿ ಮೇಕಪ್ ರಿಮೂವ್ ಮಾಡುವುದು. ಮಾಡೆಲ್‌ಗಳು ಚೆಂದಗಾಣಿಸುವುದು, ಮೇಕಪ್ ಹಾಕುವುದು ಎಷ್ಟು ಮುಖ್ಯವೋ, ವರ್ಕೌಟ್ ಮಾಡುವುದು ಕೂಡ ಅಷ್ಟೇ ಮುಖ್ಯ. ಅವರು ವರ್ಕೌಟ್ ಮಾಡುವ ಮುನ್ನ, ಸರಿಯಾಗಿ ಮೇಕಪ್ ರಿಮೂವ್ ಮಾಡುತ್ತಾರೆ. ಇಲ್ಲವಾದಲ್ಲಿ, ಅದು ಬೆವರೊಂದಿಗೆ ಕೂಡಿ, ಮುಖ ಹಾಳಾಗುತ್ತದೆ.

ಏಳನೇಯ ಸಿಕ್ರೇಟ್ ಮಾಡೆಲ್‌ಗಳು ಪ್ರತೀ ದಿನ ವಿಟಾಮಿನ್ ಡಿ ತೆಗೆದುಕೊಳ್ಳುತ್ತಾರೆ. ವಿಟಾಮಿನ್ ಡಿ ಅಂದ್ರೆ ಸೂರ್ಯನಿಂದ ಬರುವ ಬೆಳಕು. ಬೆಳಿಗ್ಗೆ 7ರಿಂದ 9 ಗಂಟೆಯೊಳಗೆ ಬರುವ ಬಿಸಿಲು ವಿಟಾಮಿನ್ ಒದಗಿಸುತ್ತದೆ. ಹಾಗಾಗಿ ಈ ಸಮಯದಲ್ಲಿ ಬಿಸಿಲಿನಲ್ಲಿ ವರ್ಕೌಟ್ ಮಾಡಿದ್ರೆ, ಅಥವಾ ಬಿಸಿಲಿನಲ್ಲಿ ಕುಳಿತರೆ, ನಿಮಗೆ ವಿಟಾಮಿನ್ ಡಿ ಸಿಗುತ್ತದೆ.

ಚಳಿಗಾಲದಲ್ಲಿ ನಿಮ್ಮ ದೇಹವನ್ನು ಬೆಚ್ಚಗಿಡತ್ತೆ ಈ ಸೂಪ್ಗಳು.. – ಭಾಗ 2

ಎಂಟನೇಯ ಸಿಕ್ರೇಟ್ ಮಾಡೆಲ್‌ಗಳು ಪದೇ ಪದೇ ತಮ್ಮ ಮುಖವನ್ನು ಮುಟ್ಟಿಕೊಳ್ಳುವುದಿಲ್ಲ. ಯಾಕಂದ್ರೆ ಹಾಗೆ ಮಾಡಿದ್ರೆ, ನಿಮ್ಮ ಬೆರಳಲ್ಲಿರುವ ಬ್ಯಾಕ್ಟಿರಿಯಾ, ಎಣ್ಣೆ, ಧೂಳು ಎಲ್ಲವೂ ನಿಮ್ಮ ಮುಖಕ್ಕೆ ತಾಕಿ, ನಿಮ್ಮ ಸ್ಕಿನ್ ಹಾಳಾಗುತ್ತದೆ. ಕೆಲವರಿಗೆ ಮುಖದ ಮೇಲೆ ಗುಳ್ಳೆಗಳಾದಾಗ, ಅದನ್ನ ಪದೇ ಪದೇ ಮುಟ್ಟುವ ಅಭ್ಯಾಸವಿರುತ್ತದೆ. ಹಾಗೆ ಮಾಡುವುದರಿಂದ ಅದು ಮತ್ತಷ್ಟು ಹಾಳಾಗುತ್ತದೆ. ಮತ್ತು ಮುಖದ ಮೇಲೆ ಕಲೆ ಎದ್ದು ಕಾಣುತ್ತದೆ. ಹಾಗಾಗಿ ಪದೇ ಪದೇ ಮುಖವನ್ನು ಮುಟ್ಟಿಕೊಳ್ಳಬಾರದು.

- Advertisement -

Latest Posts

Don't Miss