Sunday, December 1, 2024

Latest Posts

Spiritual: ಶಿವನನ್ನೂ ಬಿಟ್ಟಿಲ್ಲ ಶನಿಯ ಪ್ರಕೋಪ: ಶಿವನಿಗೆ ಸಪ್ತಮಶನಿ ಕಾಟ ಹೇಗಿತ್ತು ಗೊತ್ತಾ..?

- Advertisement -

Spiritual: ಶಿವ ಎಂದರೆ, ಸಕಲವೂ ಎನ್ನಲಾಗುತ್ತದೆ. ಕೆಲ ಪುರಾಣದ ಪ್ರಕಾರ, ಶಿವನಿಂದಲೇ ಈ ಲೋಕ ಉದ್ಭವಿಸಿದ್ದು ಎನ್ನಲಾಗಿದೆ. ಅಂಥ ಶಿವನಿಗೂ ಶನಿ ಕಾಟ ಕೊಟ್ಟಿದ್ದ. ಹುಟ್ಟಿದ ಪ್ರತೀ ಮನುಷ್ಯನಿಗೂ ಸಾಡೇಸಾಥಿ ಕಾಟ ಇರುವಂತೆ, ಶಿವನಿಗೂ ಸಾಡೇ ಸಾಥಿ ಕಾಟವಿತ್ತು. ಹಾಗಾದ್ರೆ ಶಿವ ಶನಿಯ ಕಾಟವನ್ನು ಹೇಗೆ ಎದುರಿಸಿದ ಅಂತಾ ತಿಳಿಯೋಣ ಬನ್ನಿ..

ಸದಾಧ್ಯಾನ ಮಗ್ನನಾಗಿದ್ದ ಶಿವನ ಬಳಿ ಶನಿ ಬರುತ್ತಿರುತ್ತಾನೆ. ಈ ವಿಷಯ ತಿಳಿದ ನಾರದರು, ಶನಿ ಶಿವನ ಬಳಿ ತಲುಪುವ ಮುನ್ನವೇ, ತಾನು ಶಿವನ ಬಳಿ ಬಂದು, ಶಿವನನ್ನು ಧ್ಯಾನದಿಂದ ಎಬ್ಬಿಸಿ, ನೋಡಿ ಶನಿಯ ದೃಷ್ಟಿ ನಿಮ್ಮ ಮೇಲೆ ಬಿದ್ದಿದೆ. ಶನಿ ನಿಮ್ಮ ಬಳಿಯೇ ಬರುತ್ತಿದ್ದಾನೆ ಎನ್ನುತ್ತಾರೆ.

ನಾರದರ ಮಾತು ಕೇಳಿದ ಶಿವ, ಶನಿ ದೇವ ನನ್ನ ಮೇಲೆ ದೃಷ್ಟಿ ಹಾಕಿದ್ದಾನೆಯೇ..? ನಾನು ಈಗಲೇ ಅವನಿಗೆ ಸಿಗದ ಹಾಗೆ ಬಚ್ಚಿಟ್ಟುಕೊಳ್ಳುತ್ತೇನೆ ಎಂದು, ಗಂಗಾ ನದಿಯಲ್ಲಿ ಮುಳುಗಿ, ಏಳೂವರೆ ವರ್ಷ ಕಳೆಯುತ್ತಾನೆ. ಏಳೂವರೆ ವರ್ಷ ಕಳೆದು ಶಿವ ಶನಿಯಲ್ಲಿ ಬಂದು ಹೇಳುತ್ತಾನೆ. ನೋಡು ನೀನು ನನ್ನ ಮೇಲೆ ದೃಷ್ಟಿ ಹಾಕಿದ್ದೆಯಲ್ಲ. ನಾನು ಗಂಗೆಯಲ್ಲಿ ಕುಳಿತು, ನಿನ್ನ ದೃಷ್ಟಿಯಿಂದ ತಪ್ಪಿಸಿಕೊಂಡೆ ಎನ್ನುತ್ತಾನೆ.

ಆಗ ಶನಿದೇವ ಕೈ ಮುಗಿದು, ಸ್ವಾಮಿ ನೀವು ಏಳೂವರೆ ವರ್ಷ, ನಿಮ್ಮ ಉಸಿರನ್ನು ಬಿಗಿ ಹಿಡಿದು, ಚಳಿ, ಗಾಳಿ, ಮಳೆಗೆ ಕಷ್ಟಪಟ್ಟು ಗಂಗೆಯಲ್ಲಿ ಮುಳುಗಿ ಕುಳಿತುಕೊಂಡಿದ್ದೇ, ನಿಮಗೆ ನಾ ಕೊಟ್ಟ ಕಾಟವಾಗಿತ್ತು ಎನ್ನುತ್ತಾನೆ. ಶಿವನಿಗೆ ಶನಿಯ ಮಾತು ಕೇಳಿ, ಶನಿ ಯಾರನ್ನೂ ಬಿಡುವವನಲ್ಲ ಎಂಬ ಸತ್ಯ ಅರಿವಾಗಿತ್ತು.

- Advertisement -

Latest Posts

Don't Miss