Sunday, September 8, 2024

Latest Posts

ಬೆಳಗ್ಗಿನ ಜಾವ ವಾಕಿಂಗ್ ಮಾಡೋದನ್ನ ನಿಲ್ಲಿಸಿಬಿಡಿ..

- Advertisement -

ಹಲವರು ಬೆಳಗ್ಗಿನ ಜಾವದ ವಾಕಿಂಗ್ ಮಾಡೋಕ್ಕೆ ಇಷ್ಟಪಡ್ತಾರೆ. ಅದರಿಂದ ಅವರ ಆರೋಗ್ಯದಲ್ಲಿ ಉತ್ತಮ ಚೆಂಜಸ್ ಕೂಡಾ ಕಂಡು ಬಂದಿದೆ. ಆದ್ರೆ ಆಯುರ್ವೇದದ ಪ್ರಕಾರ, ಬೆಳಗ್ಗಿನ ಜಾವದ ವಾಕಿಂಗ್ ಉತ್ತಮವಲ್ಲ ಅಂತಾ ಹೇಳಲಾಗಿದೆ. ಹಾಗಾದ್ರೆ ಯಾಕೆ ಬೆಳಗ್ಗಿನ ಜಾವದ ವಾಕಿಂಗ್ ಮಾಡಬಾರದು ಅಂತಾ ತಿಳಿಯೋಣ ಬನ್ನಿ..

ಆಯುರ್ವೇದದ ಪ್ರಕಾರ, ಬೆಳಿಗ್ಗೆ ತಿಂಡಿಗೂ ಮುನ್ನ ನಾವು ಧ್ಯಾನ ಮಾಡಬೇಕು. ಮಧ್ಯಾಹ್ನ ಊಟವಾದ ಬಳಿಕ ನಿದ್ದೆ ಮಾಡಬೇಕು ಮತ್ತು ರಾತ್ರಿ ಊಟವಾದ ಒಂದು ಗಂಟೆ ಬಳಿಕ ನಿದ್ದೆ ಮಾಡಬೇಕು. ಆ ಒಂದು ಗಂಟೆಯಲ್ಲಿ ನಿಮಗೆ ಎಷ್ಟಾಗತ್ತೋ ಅಷ್ಟು ವಾಕಿಂಗ್ ಮಾಡಬೇಕು. ಯಾಕಂದ್ರೆ ರಾತ್ರಿ ಹೊತ್ತು ತಂಪಾಗಿರತ್ತೆ. ಹಾಗಾಗಿ ದೇಹದಲ್ಲಿ ಬಿಪಿ ಲೆವಲ್ ಕಡಿಮೆ ಇರತ್ತೆ. ಬಿಪಿ ಲೇವಲ್ ಕಡಿಮೆ ಇದ್ದಷ್ಟು ನಾವು ಕೆಲಸ ಹೆಚ್ಚು ಮಾಡಬೇಕಾಗತ್ತೆ. ಹಾಗಾಗಿ ರಾತ್ರಿ ಹೊತ್ತು ಊಟವಾದ ಮೇಲೆ ವಾಕಿಂಗ್ ಮಾಡಬೇಕು.

ಮಧ್ಯಾಹ್ನ ಉಷ್ಣ ಹೆಚ್ಚಿರುತ್ತದೆ. ಹಾಗಾಗಿ ರೆಸ್ಟ್ ಮಾಡಬೇಕು. ಬೆಳಿಗ್ಗೆ ಯಾಕೆ ವಾಕ್ ಮಾಡಬಾರದು ಅಂದ್ರೆ, ನಾವು ರಾತ್ರಿ ಮಲಗಿ ಬೆಳಿಗ್ಗೆ ಎದ್ದಾಗ, ನಮ್ಮ ದೇಹದಲ್ಲಿ ವಾತದ ಪ್ರಕೋಪವಿರುತ್ತದೆ. ವಾತವಿರುವಾಗ ನಾವು ವಾಕಿಂಗ್, ಜಾಗಿಂಗ್ ಮಾಡಿದ್ರೆ, ಆ ವಾತದ ಪ್ರಮಾಣ ಇನ್ನೂ ಹೆಚ್ಚುತ್ತದೆ. ಹಾಗಾಗಿ ಬೆಳಿಗ್ಗೆ ವಾಕಿಂಗ್, ಜಾಗಿಂಗ್, ಹೆವಿ ಎಕ್ಸರ್‌ಸೈಸ್ ಮಾಡಬಾರದು. ಬೇಕಾದರೆ ಧ್ಯಾನ, ಪ್ರಾಣಾಯಾಮ ಮಾಡಬಹುದು.

ನೀವು ಬೆಳಿಗ್ಗೆ ವಾಕಿಂಗ್ ಮಾಡಿದ್ರೆ, ನಿಮಗೆ 80ಕ್ಕೂ ಹೆಚ್ಚು ರೋಗ ಬರುವ ಸಾಧ್ಯತೆ ಇದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾಗಿ ಬೆಳಿಗ್ಗೆ ವಾಕಿಂಗ್ ಬದಲು, ಸಂಜೆ ವಾಕಿಂಗ್ ಮಾಡಿ. ಇಲ್ಲವಾದಲ್ಲಿ ರಾತ್ರಿ ಊಟವಾದ ಬಳಿಕ ವಾಕಿಂಗ್ ಮಾಡಿ. ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ನೀವು ಯೋಗ ಮಾಡುವವರಾಗಿದ್ದಲ್ಲಿ ಈ ಆಹಾರವನ್ನು ಸೇವಿಸಬೇಡಿ..

ನಿಮ್ಮ ಕಿಚನ್ನಲ್ಲಿ ಇರುವ ಈ 3 ವಸ್ತುಗಳನ್ನು ಈಗಲೇ ಹೊರಹಾಕಿ..

ಈ ತಪ್ಪು ಮಾಡದಿದ್ರೆ ನಿಮ್ಮ ಸೌಂದರ್ಯ ಇನ್ನೂ ಚೆಂದವಾಗತ್ತೆ..

- Advertisement -

Latest Posts

Don't Miss