ಇದರ ಮೊದಲ ಭಾಗದಲ್ಲಿ ನಾವು ಜಿಪುಣ ಶ್ರೀಮಂತ ಬಡವನಿಗೆ ತುಪ್ಪ, ಉಪ್ಪು ಮತ್ತು ಜೋನುತುಪ್ಪವನ್ನು ಭಿಕ್ಷೆಯಾಗಿ ನೀಡಿದ್ದರ ಬಗ್ಗೆ ಹೇಳಿದ್ದೆವು. ಈಗ ಅದರ ಮುಂದುವರಿದ ಭಾಗದಲ್ಲಿ, ಬಡವ ಆ ದಾನವನ್ನು ಯಾಕೆ ಸಪರೇಟ್ ಆಗಿ ಎತ್ತಿಟ್ಟ..? ಅದನ್ನೇನು ಮಾಡುತ್ತಾನೆಂದು ತಿಳಿಯೋಣ..
ಮನುಷ್ಯನ ಅವನತಿಗೆ ಈ 3 ಸಂಗತಿಗಳೇ ಕಾರಣ.. ಭಾಗ 1
ಜಿಪುಣ ಶ್ರೀಮಂತನ ನೌಕರ ದಾನವನ್ನು ಏನು ಮಾಡುತ್ತಾನೆಂದು ನೋಡಲು ಬಂದ. ಬಡವ ಶ್ರೀಮಂತ ಜಿಪುಣ ಕೊಟ್ಟ ದಾನದಲ್ಲಿ ಉಪ್ಪು, ತುಪ್ಪ ಮತ್ತು ಜೇನುತುಪ್ಪವನ್ನು ಪಾಲು ಮಾಡಿ ತಾನು ತಯಾರಿಸಿದ ಅಡುಗೆಗೆ ಹಾಕಿದ. ಇದನ್ನು ಕಂಡ ನೌಕರ ಶ್ರೀಮಂತನಿಗೆ ವಿಷಯ ತಿಳಿಸಿದ. ಆದರೂ ಶ್ರೀಮಂತನಿಗೆ ಅನುಮಾನ ಹಾಗೇ ಇತ್ತು. ಅವನು ಮರುದಿನ ಬೆಳಿಗ್ಗೆ ಚಾಕುವನ್ನು ಹಿಡಿದುಕೊಂಡು, ಬಡವನ ಮನೆಗೆ ಭೋಜನಕ್ಕೆ ಹೋದ.
ಅಲೇಲನಾದರೂ ಬಡವ ಎಲ್ಲರೆದುರು ತನ್ನನ್ನು ಅವಮಾನಿಸಿದರೆ, ಅವನನ್ನು ಕೊಲ್ಲಬೇಕೆಂದು ನಿರ್ಧರಿಸಿದ್ದ. ಹಾಗಾಗಿಯೇ ಚಾಕು ಹಿಡಿದು ಹೋಗಿದ್ದ. ಆದ್ರೆ ಅಲ್ಲಿ ಹೋದಾಗ, ಬಡವ ಬುದ್ಧನ ಬಳಿ ಈ ರೀತಿಯಾಗಿ ಹೇಳುವುದನ್ನು ಕೇಳಿಸಿಕೊಂಡ. ಈ ಭೋಜನವನ್ನು ನಾನು ನಗರದ ನಿವಾಸಿಗಳು ಕೊಟ್ಟ ದಾನದಿಂದ ತಯಾರು ಮಾಡಿದ್ದೇನೆ. ಹೆಚ್ಚೋ ಕಡಿಮೆಯೋ, ಆಧರೆ ಎಲ್ಲರೂ ಪೂರ್ಣ ಉದಾರತೆ ಮತ್ತು ಶ್ರದ್ಧೆಯಿಂದ ದಾನ ನೀಡಿದ್ದಾರೆ. ಎಲ್ಲರ ದಾನದ ಮೌಲ್ಯ ಸಮಾನವಾಗಿದೆ ಎನ್ನುತ್ತಾನೆ.
ಈ ಕಥೆ ಕೇಳಿದ್ರೆ ನೀವು ಪದೇ ಪದೇ ಅನುಮಾನಿಸುವುದನ್ನ ಬಿಟ್ಟು ಬಿಡುವಿರಿ.. ಭಾಗ 1
ಇದನ್ನು ಕೇಳಿದ ಜಿಪುಣ ಶ್ರೀಮಂತನಿಗೆ ನಾಚಿಕೆಯಾಗುತ್ತದೆ. ತಾನು ಎಷ್ಟು ತುಚ್ಛವಾಗಿ ಯೋಚಿಸಿದೆ. ಬಡವನ ಕೊಲೆ ಮಾಡಲು ಯೋಚಿಸಿದ್ದೆ ಎಂದು ನೊಂದುಕೊಳ್ಳುತ್ತಾನೆ. ಅಲ್ಲದೇ ಎಲ್ಲರೆದುರು ಬಡವನ ಬಳಿ ತಾನು ತಪ್ಪು ತಿಳಿದಿದ್ದೆ ಎಂದು ಹೇಳಿ, ಕ್ಷಮೆಯಾಚಿಸುತ್ತಾನೆ. ಆಗ ಬುದ್ಧ ಹೇಳುತ್ತಾನೆ, ನೀವು ದೊಡ್ಡ ದೊಡ್ಡ ದಾನ ಧರ್ಮ ಮಾಡಿಯೇ ಪುಣ್ಯ ಗಳಿಸಬೇಕೆಂದಿಲ್ಲ. ಬದಲಾಗಿ ಸಣ್ಣ ಪುಟ್ಟ ದಾನ ಧರ್ಮವೂ ನಿಮ್ಮನ್ನು ಕಾಪಾಡುತ್ತದೆ ಎಂದು ಹೇಳುತ್ತಾರೆ.