Saturday, April 19, 2025

Latest Posts

ಇದು ಶೀತಲಾ ದೇವಿಯ ಕಥೆ..

- Advertisement -

ನಾವು ನಿಮಗೆ ಪೌರಾಣಿಕ ಕಥೆಗಳಿಗೆ ಸಂಬಂಧಿಸಿದಂತೆ ಹಲವು ವಿಷಯಗಳನ್ನ ತಿಳಿಸಿದ್ದೇವೆ. ಹಲವು ದೇವರ ಕಥೆಗಳನ್ನ ಹೇಳಿದ್ದೇವೆ. ಆದ್ರೆ ಶೀತಲಾ ದೇವಿಯ ಕಥೆಯನ್ನ ಕೇಳಿದವರು ಕಡಿಮೆ ಜನ. ಹಾಗಾಗಿ ನಾವಿಂದು ಶೀತಲಾ ದೇವಿ ಯಾರು..? ಅನ್ನೋ ಬಗ್ಗೆ ಕಥೆಯನ್ನ ಹೇಳಲಿದ್ದೇವೆ..

ಶೀತಲಾದೇವಿಯ ಕೈಯಲ್ಲಿ ಕಸಬರಿಗೆ, ಬೇವಿನ ಎಲೆ, ಕಲಶವಿರುತ್ತದೆ. ಮತ್ತು ಈಕೆಯ ವಾಹನ ಕತ್ತೆಯಾಗಿದೆ. ಯಾಕೆ ಈ ದೇವಿ ಕತ್ತೆಯ ಮೇಲೆ ಕೂರುತ್ತಾಳೆ ಮತ್ತು ಯಾಕೆ ಈಕೆಯ ಕೈಯಲ್ಲಿ ಕಸಬರಿಗೆ ಇದೆ ಎಂಬುದರ ಬಗ್ಗೆ ಒಂದು ಕಥೆ ಇದೆ. ಈಕೆ ಒಮ್ಮೆ ಯಾರು ತನ್ನನ್ನು ಪೂಜಿಸುತ್ತಾರೆ. ಯಾರಿಗೆ ನನ್ನ ಮೇಲೆ ನಂಬಿಕೆ ಇದೆ ಎಂದು ಪರೀಕ್ಷಿಸಲು ಭೂಮಿಗೆ ಬರುತ್ತಾಳೆ. ರಾಜಸ್ತಾನದ ಡೋಂಗ್ರಿ ಎಂಬ ಸ್ಥಳಕ್ಕೆ ಬಂದ ಶೀತಲಾ ದೇವಿಗೆ ಬೇಸರವಾಗುತ್ತದೆ. ಈ ಊರಿನಲ್ಲಿ ನನ್ನ ಒಂದು ದೇವಸ್ಥಾನ ಕೂಡ ಇಲ್ಲ. ಇಲ್ಲಿ ನನ್ನನ್ನು ಪೂಜಿಸುವವರೇ ಇಲ್ಲವೆಂದು ಬೇಸರಪಡುತ್ತಾಳೆ.

ಡೊಳ್ಳು ಹೊಟ್ಟೆ ನೋಡಿ ನಕ್ಕ ಚಂದ್ರನಿಗೆ ಗಣೇಶನಿಂದ ಶಾಪ

ಈ ಊರಿನ ಜನರನ್ನು ಪರೀಕ್ಷಿಸಬೇಕು ಎಂದು ಆಕೆ ಸಾಮಾನ್ಯ ಹೆಂಗಸಿನ ರೂಪದಲ್ಲಿ ಊರು ಸುತ್ತುತ್ತಾಳೆ. ಹೀಗೆ ಹೋಗಬೇಕಾದರೆ, ಓರ್ವ ಹೆಂಗಸು ನಿರ್ಲಕ್ಷ್ಯದಿಂದ, ಅನ್ನ ಬಾಗಿ, ಆ ಗಂಜಿ ತಿಳಿ, ದೇವಿಯ ಮೈ ಮೇಲೆ ಬೀಳಿಸುತ್ತಾಳೆ. ದೇವಿಯ ಮೈಯೆಲ್ಲ ಉರಿಯಲು ಪ್ರಾರಂಭಿಸುತ್ತದೆ. ಆಕೆ ತನ್ನನ್ನು ಕಾಪಾಡಿ ಎಂದು ಬೇಡಿಕೊಂಡರೂ, ಆ ಹೆಂಗಸು ಸೇರಿ, ಊರಿನ ಯಾವ ಜನರೂ ಆಕೆಯ ಸಹಾಯಕ್ಕೆ ಬರಲಿಲ್ಲ.

ಆದರೆ ಅಲ್ಲೇ ಇದ್ದ ಓರ್ವ ಮಹಿಳೆ, ದೇವಿಯ ಮೈಗೆ ತಣ್ಣಗಿನ ನೀರು ಚೆಲ್ಲಿದಳು. ಇದರಿಂದ ದೇವಿಗೆ ಆರಾಮವೆನ್ನಿಸಿತು. ನಂತರ ಮಹಿಳೆ ದೇವಿಯನ್ನು ತನ್ನ ಮನೆಗೆ ಕರೆದು ಊಟ ಬಡಿಸಿದಳು, ಆಕೆಗೆ ಒಳ್ಳೆಯ ಸೀರೆ ಕೊಟ್ಟಳು. ಆಕೆಯ ತಲೆ ಬಾಚಿ, ಹೂ ಮುಡಿಸಲು ಹೊರಟಳು. ಆದ್ರೆ ಆಕೆಗೆ ಆಶ್ಚರ್ಯವೊಂದು ಕಾದಿತ್ತು. ಮನೆಗೆ ಬಂದ ಹೆಂಗಸಿನ ತಲೆಯ ಹಿಂಬದಿ ಒಂದು ಕಣ್ಣಿತ್ತು. ಇದನ್ನು ಕಂಡುಆ ಮಹಿಳೆ ಹೆದರಿದಳು. ಅದಕ್ಕೆ ಹೆಂಗಸಿನ ರೂಪದಲ್ಲಿದ್ದ ದೇವಿ ಹೇಳಿದಳು. ಮಗಳೇ ಹೆದರಬೇಡ, ನಾನು ಪ್ರೇತವಲ್ಲ. ನಾನೋರ್ವ ದೇವಿ. ಶೀತಲಾ ದೇವಿ. ಈ ಭೂಮಿಯಲ್ಲಿ ನನ್ನನ್ನು ಯಾರು ಪ್ರೀತಿಸುತ್ತಾರೆ ಎಂದು ಪರೀಕ್ಷಿಸಲು ನಾನು ಬಂದಿದ್ದೆ ಎಂದು ಹೇಳುತ್ತಾಳೆ.

ಕಷ್ಟದ ಸಮಯದಲ್ಲಿ ನಾವು ಹೇಗೆ ಬದುಕಬೇಕು..?

ಆಗ ಮಹಿಳೆಗೆ ಖುಷಿಯೊಂದಿಗೆ ದುಃಖವಾಗುತ್ತದೆ. ಯಾಕಂದ್ರೆ ತನ್ನ ಮನೆಯಲ್ಲಿ ದೇವಿಯನ್ನು ಕೂರಿಸಲು ಚೆಂದದ ಪೀಠವಿಲ್ಲವೆಂದು. ಅದಕ್ಕೆ ದೇವಿ ಅವರ ಮನೆಯ ಎದುರಿದ್ದ ಕತ್ತೆಯ ಮೇಲೆಯೇ ವಿರಾಜಮಾನಳಾಗುತ್ತಾಳೆ. ಅಲ್ಲೇ ಇದ್ದ ಕಸಬರಿಗೆ ಮತ್ತು ಕಸ ತೆಗೆಯುವ ವಸ್ತುವನ್ನು ಹಿಡಿದು, ಮನೆಯ ದರಿದ್ರತೆಯನ್ನು ದೂರ ಮಾಡುತ್ತಾಳೆ. ಅಲ್ಲದೇ ಆ ಮಹಿಳೆಗೆ ಏನು ವರ ಬೇಕೆಂದು ಕೇಳುತ್ತಾಳೆ.

ಅದಕ್ಕೆ ಆ ಮಹಿಳೆ, ನೀವು ಈ ಊರಿನಲ್ಲೇ ಇದ್ದು ಬಿಡಿ. ನನ್ನ ಮನೆಯ ದರಿದ್ರ ದೂರ ಮಾಡಿದಂತೆ, ನಿಮ್ಮ ಉಳಿದ ಭಕ್ತರ ದರಿದ್ರವೂ ದೂರ ಮಾಡಿ. ನಿಮ್ಮನ್ನು ಹೋಳಿ ಹುಣ್ಣಿಮೆಯ ಮರುದಿನ ಭಕ್ತಿಯಿಂದ ಪೂಜೆ ಮಾಡಿ, ಭಕ್ಷ್ಯಭೋಜನ, ತಂಪು ಪಾನಿ, ಮತ್ತು ಮೊಸರನ್ನು ನೈವೇದ್ಯವನ್ನಾಗಿ ನೀಡುತ್ತೇವೆ ಎಂದು ಹೇಳುತ್ತಾಳೆ. ಅಂದಿನಿಂದ ಶೀತಲಾದೇವಿ, ರಾಜಸ್ತಾನದ ಡಿಂಗ್ರಿ ಎಂಬ ಸ್ಥಳದಲ್ಲಿ ನೆಲೆಸುತ್ತಾಳೆ.

- Advertisement -

Latest Posts

Don't Miss