Sunday, September 8, 2024

Latest Posts

ರಾಜ ಮತ್ತು ಸಾಡೇಸಾಥಿ ಕಥೆ (ಶನಿವಾರ ವೃತ ಕಥೆ)- ಭಾಗ 1

- Advertisement -

Spiritual: ಹಿಂದೂಗಳಲ್ಲಿ ಒಂದು ನಂಬಿಕೆ ಇದೆ. ಅದೇನೆಂದರೆ, ಹುಟ್ಟಿದಾಗಿನಿಂದ ಸಾಯುವವರೆಗೆ ಒಮ್ಮೆಯಾದರೂ ಶನಿ ಮನುಷ್ಯನ ಹೇಗಲೇರೇ ಏರುತ್ತಾನೆ. ಏಕೆಂದರೆ, ಯಾರಿಂದ ತಪ್ಪಿಸಿಕೊಂಡರೂ, ಶನಿದೇವನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಶಿವ, ಕೃಷ್ಣ, ಗಣಪನಂಥ ದೇವಾನುದೇವತೆಗಳೇ ಶನಿಯನ್ನು ಎದುರಿಸಲು ಭಯ ಪಡುತ್ತಿದ್ದರು. ಅಂಥಹುದರಲ್ಲಿ ಸಾಮಾನ್ಯ ಮನುಷ್ಯ ಶನಿಗೆ ಹೆದರದೇ ಇರುತ್ತಾನಾ..? ಇಂದು ನಾವು ಶನಿವಾರ ವೃತ ಕಥೆಯನ್ನು ತಿಳಿಸಲಿದ್ದೇವೆ. ಅದನ್ನು ಓದಿ ಶನಿಯ ಕೃಪೆಗೆ ಪಾತ್ರರಾಗಿ.

ಒಮ್ಮೆ ನವಗ್ರಹದಲ್ಲಿ ಎಲ್ಲರಿಗಿಂತ ಶಕ್ತಿಶಾಲಿ ಗ್ರಹ ಯಾವುದು ಎನ್ನುವ ಚರ್ಚೆ ನಡೆಯಿತು. ಎಲ್ಲರೂ ತಾನೇ ಶಕ್ತಿಯುತನಾದವನು ಎಂದು ಹೇಳುತ್ತಿದ್ದರು. ಬಳಿಕ ಎಲ್ಲರೂ ಇಂದ್ರದೇವನ ಬಳಿ ಹೋಗಿ, ಇಂದ್ರದೇವ ನಮ್ಮಲ್ಲಿ ಅತ್ಯಂತ ಶಕ್ತಿಶಾಲಿ ಗ್ರಹ ಯಾವುದು ಅಂತಾ ನೀವೇ ಹೇಳಿ ಎಂದು ಕೇಳಿದರು. ಇಂದ್ರನಿಗೆ ಏನು ಹೇಳಬೇಕೆಂದು ಗೊತ್ತಾಗದೇ, ಭೂಲೋಕದಲ್ಲಿ ಉಜ್ಜಯಿನಿ ಎಂಬ ಸ್ಥಳವಿದೆ. ಅಲ್ಲಿ ವಿಕ್ರಮಾದಿತ್ಯನೆಂಬ ರಾಜನಿದ್ದಾನೆ. ಅವನು ನ್ಯಾಯ ಕೊಡುವುದರಲ್ಲಿ ನಿಸ್ಸೀಮ. ನೀವು ಅವನ ಬಳಿ ಹೋಗಿ, ಈ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಿ ಎನ್ನುತ್ತಾನೆ. ಅದರಂತೆ ನವಗ್ರಹಗಳು ವಿಕ್ರಮಾದಿತ್ಯನ ಬಳಿ ಹೋಗುತ್ತಾರೆ. ಪ್ರಶ್ನೆ ಕೇಳುತ್ತಾರೆ.

ವಿಕ್ರಮಾದಿತ್ಯ, ಈ ಪ್ರಶ್ನೆಗೆ ನಾನು ತುಂಬಾ ಯೋಚನೆ ಮಾಡಿ, ಉತ್ತರಿಸಬೇಕು. ಇಲ್ಲದಿದ್ದರೆ ಇವರೆಲ್ಲ ಕುಪಿತರಾಗುತ್ತಾರೆ ಎಂದು ಅಂದುಕೊಂಡ. ಬಳಿಕ ನವಗ್ರಹಗಳಿಗೆ ನವ ಸಿಂಹಾಸನವನ್ನು ತಯಾರು ಮಾಡಿಸಿದ. ಇವು ನವ ಲೋಹಗಳಿಂದ ಮಾಡಲಾಗಿತ್ತು. ಚಿನ್ನ, ಬೆಳ್ಳಿ, ತಾಮ್ರ, ಹಿತ್ತಾಳೆ, ಕಬ್ಬಿಣ ಹೀಗೆ 9 ರೀತಿಯ ಲೋಹಗಳನ್ನು ಬಳಸಿ ಸಿಂಹಾಸನ ತಯಾರಿಸಲಾಗಿತ್ತು. ಆ ಸಿಂಹಾಸನದ ಮೇಲೆ ನವಗ್ರಹಗಳಿಗೆ ಕುಳಿತುಕೊಳ್ಳಲು ಹೇಳಲಾಯಿತು. ಎಲ್ಲರೂ ತಮಗೆ ಬೇಕಾದ ಸಿಂಹಾಸನವನ್ನು ಆರಿಸಿ, ಕುಳಿತರು.

ಶನಿದೇವನಿಗೆ ಕಬ್ಬಿಣದ ಸಿಂಹಾಸನ ಸಿಕ್ಕಿತು. ಆಗ ರಾಜ ವಿಕ್ರಮಾದಿತ್ಯ, ನೀವೆ ನಿಮ್ಮ ನಿಮ್ಮ ಸಿಂಹಾಸನವನ್ನು ಆರಿಸಿಕೊಳ್ಳುವುದರ ಮೂಲಕ, ನಿಮ್ಮ ಸ್ಥಾನವನ್ನು ತಿಳಿದುಕೊಂಡಿದ್ದೀರಿ. ಮೊದಲ ಸಿಂಹಾಸನದಲ್ಲಿ ಕುಳಿತವರೇ ಶಕ್ತಿಯುತರು ಎನ್ನುತ್ತಾನೆ. ಹೀಗೆ ಶನಿದೇವನಿಗೆ ಕೊನೆಯ ಸ್ಥಾನ ಸಿಗುತ್ತದೆ.

ಆಗ ಕೋಪಗೊಂಡ ಶನಿದೇವ, ಸಮಯ ಬಂದಾಗ ನಾನು ನಿನ್ನನ್ನು ನೋಡಿಕೊಳ್ಳುತ್ತೇನೆ. ದೇವಾನುದೇವತೆಗಳೇ ನನ್ನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಿಲ್ಲ. ರಾಮ, ರಾವಣರನ್ನೇ ನಾನು ಬಿಡಲಿಲ್ಲ. ಇನ್ನು ನಿನ್ನನ್ನು ಬಿಟ್ಟೆನೇ ಎಂದು ಹೇಳಿ ಹೊರಟು ಹೋಗುತ್ತಾನೆ. ಕೆಲ ವರ್ಷಗಳ ಬಳಿಕ ವಿಕ್ರಮಾದಿತ್ಯನ ಕುಂಡಲಿಯಲ್ಲಿ ಸಾಡೇಸಾಥಿ ಶನಿ ಪ್ರವೇಶವಾಗುವ ಸಂಕೇತ ಸಿಗುತ್ತದೆ. ಹಾಗಾದರೆ ಶನಿ ವಿಕ್ರಮಾದಿತ್ಯನಿಗೆ ಹೇಗೆ ಕಾಟ ಕೊಡುತ್ತಾನೆ ಅನ್ನೋ ಬಗ್ಗೆಯೂ ಕಥೆ ಇದೆ. ಅದನ್ನು ಮುಂದಿನ ಭಾಗದಲ್ಲಿ ತಿಳಿಯೋಣ.

ಇಲ್ಲಿನ ಜನ ತಮ್ಮ ಮಕ್ಕಳನ್ನು ನಾಯಿಯೊಂದಿಗೆ ವಿವಾಹ ಮಾಡಿಸುತ್ತಾರೆ..

ಕಾಳ ಸರ್ಪ ದೋಷವಿದ್ದಲ್ಲಿ, ಯಾವ ಸೂಚನೆ ಇರುತ್ತದೆ..? ಎಂಥ ಘಟನೆಗಳು ನಡೆಯುತ್ತದೆ..?

ದುರ್ಯೋಧನ ಭಾನುಮತಿಯನ್ನು ವಿವಾಹವಾಗಿದ್ದು ಹೇಗೆ..?

- Advertisement -

Latest Posts

Don't Miss