Saturday, July 5, 2025

Latest Posts

‘ತ್ವಚೆಗೆ ಅಗತ್ಯಕ್ಕಿಂತ ಹೆಚ್ಚು ಬಿಸಿಲು ತಾಕಿದ್ರೆ ತ್ವಚೆಯ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು’

- Advertisement -

ಮೊದಲೆರಡು ಭಾಗದಲ್ಲಿ ನಟಿ, ನಿರೂಪಕಿ ಕಾವ್ಯಾ ಶಾ ಕೊಟ್ಟ ಬ್ಯೂಟಿ ಟಿಪ್ಸ್‌ ಬಗ್ಗೆ ನಿಮಗೆ ಮಾಹಿತಿ ನೀಡಿದ್ದೆವು. ಇಂದು ಅದರ ಮುಂದುವರಿದ ಭಾಗವಾಗಿ, ಅವರು ಕೊಟ್ಟಿರುವ ಇನ್ನಷ್ಟು ಬ್ಯೂಟಿ ಟಿಪ್ಸ್‌ ಬಗ್ಗೆ ಮಾಹಿತಿ ನೀಡಲಿದ್ದೇವೆ.

ತ್ವಚೆಯ ಆರೋಗ್ಯ ಕಾಪಾಡಿಕೊಳ್ಳಲು ನೀವು ಚಿಕ್ಕ ಚಿಕ್ಕ ವಿಷಯಗಳನ್ನ ಕೂಡ ಗಮನದಲ್ಲಿಡಬೇಕಾಗುತ್ತದೆ. ಬಿಸಿನಲ್ಲಿ ಹೆಚ್ಚು ನಿಂತರೆ, ನಮಗೆ ತ್ವಚೆಯ ಕ್ಯಾನ್ಸರ್ ಬರುವ ಸಾಧ್ಯತೆ ಇರುತ್ತದೆ. ಈ ಕಾರಣಕ್ಕೆ ಹೆಚ್ಚು ಬಿಸಿನಲ್ಲಿ ನಿಲ್ಲಬೇಡಿ. ಅದರ ಬದಲು ನೆರಳಿನಲ್ಲಿ ನಿಂತು ಮಾತಾಡಿ. ಹೀಗೆ ಮಾಡುವುದರಿಂದ ನೀವು ನಿಮ್ಮ ತ್ವಚೆಯ ಆರೋಗ್ಯ ಕಾಪಾಡಿಕೊಳ್ಳುವುದರ ಜೊತೆಗೆ ಮಾರಕ ರೋಗದಿಂದ ದೂರವಿರಲು ಸಾಧ್ಯವಾಗುತ್ತದೆ.

ಒಂದು ಟೊಮೆಟೋ ಪ್ಯೂರಿ ತಯಾರಿಸಿಕೊಳ್ಳಿ. ನಂತರ ಈ ಪೇಸ್ಟ್‌ಗೆ ಸ್ವಲ್ಪ ನಿಂಬೆ ರಸ, ಜೇನುತುಪ್ಪ, ಕಡಲೆ ಹಿಟ್ಟು ಮತ್ತು ಹೆಸರು ಕಾಳಿನ ಹಿಟ್ಟನ್ನ ಮಿಕ್ಸ್ ಮಾಡಿ.  ಈ ಪೇಸ್ಟ್‌ನ್ನ ನೀವು ನಿಮ್ಮ ಮುಖಕ್ಕೆ ಅಥವಾ ನಿಮ್ಮ ಕೈ ಕಾಲುಗಳಿಗೆ, ಅಥವಾ ಇಡೀ ದೇಹಕ್ಕೆ ಹಚ್ಚಿಕೊಂಡರೂ ಉತ್ತಮ. ಹೀಗೆ ಹಚ್ಚಿಕೊಂಡು ಅದು ಒಣಗಿದ ಬಳಿಕ, ಸ್ನಾನ ಮಾಡಿ. ಆದ್ರೆ ಒಂದು ಮಾತು ನೆನಪಿರಲಿ, ಸ್ನಾನ ಮಾಡುವಾಗ ಮತ್ತೆ ಸೋಪ್ ಬಳಸಬೇಡಿ. ಇದು ತ್ವಚೆಗೆ ಉತ್ತಮವಲ್ಲ. ಈ ಪೇಸ್ಟ್ ವಾರಕ್ಕೊಮ್ಮೆ ಅಥವಾ ಎರಡು ಸಲ ಬಳಸಿದ್ರೂ ಸಾಕು. ಹೀಗೆ ಮಾಡುವುದರಿಂದ ನೀವು ಉತ್ತಮ ರಿಸಲ್ಟ್ ಕಂಡುಕೊಳ್ಳಬಹುದು ಅಂತಾರೆ ಕಾವ್ಯಾ.

ಇನ್ನು ಪ್ರತಿದಿನ ಚೆನ್ನಾಗಿ ನೀರು ಕುಡಿಯಿರಿ, ಕರ್ಬೂಜ, ಕಲ್ಲಂಗಡಿ, ದ್ರಾಕ್ಷಿ, ಹೀಗೆ ರಸಭರಿತವಾದ ಹಣ್ಣನ್ನ ಹೆಚ್ಚು ತಿನ್ನಿ ಅಂತಾ ಕಾವ್ಯಾ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ. ಮುಂದಿನ ಭಾಗದಲ್ಲಿ ಕೂದಲಿಗೆ ಸಂಬಂಧಿಸಿದಂತೆ, ಕಾವ್ಯಾ ಕೊಟ್ಟಿರುವ ಟಿಪ್ಸ್ ಏನು ಅಂತಾ ನೋಡೋಣ.

- Advertisement -

Latest Posts

Don't Miss