ಈ ಹಿಂದಿನ ಭಾಗದಲ್ಲಿ ನಾವು ಕಾವ್ಯಾ ಶಾ ಟ್ಯಾನ್‌ನಿಂದ ನಿಮ್ಮ ದೇಹವನ್ನು ರಕ್ಷಿಸಿಕೊಳ್ಳಲು ಯಾವ ಟಿಪ್ಸ್ ಕೊಟ್ಟಿದ್ರು ಅಂತಾ ಹೇಳಿದ್ದೆವು. ಇಂದು ಕೂದಲ ಆರೈಕೆ ಹೇಗೆ ಮಾಡಿಕೊಳ್ಳಬೇಕು ಅಂತಾ ಕಾವ್ಯಾ ಹೇಳಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ನಿಂತಲ್ಲೇ ನಿಂತು ಬೆಳಿಯೋ ಗಿಡ ಚೆನ್ನಾಗಿ ಇರ್ಬೇಕು ಅಂದ್ರೆ, ನಾವು ಅದಕ್ಕೆ ನೀರು ಹಾಕ್ಬೇಕು, ಗೊಬ್ಬರ ಹಾಕ್ಬೇಕು, ಅದನ್ನ ಚೆನ್ನಾಗಿ ನೋಡಿಕೊಳ್ಳಬೇಕು. ಇನ್ನು ನಾವು ಈ ಕೂದಲಿನೊಂದಿಗೆ ತಿರುಗಾಡುತ್ತಿರುತ್ತೇವೆ. ಹಾಗಾಗಿ ನಮ್ಮ ಕೂದಲ ಆರೈಕೆ ಇನ್ನೂ ಮುಖ್ಯವಾಗಿದೆ ಅಂತಾರೆ ಕಾವ್ಯಾ. ಕಾವ್ಯಾರ ಪ್ರಕಾರ, ನೈಸ್, ಸಿಲ್ಕಿ, ಸ್ಮೂತ್, ಲಾಂಗ್ ಆ್ಯಂಡ್ ಸ್ಟ್ರಾಂಗ್ ಕೂದಲು ನಿಮ್ಮದಾಗಬೇಕು ಅಂದ್ರೆ ಚೆನ್ನಾಗಿ ನೀರು ಕುಡಿಯಬೇಕು.
ಯಾಕಂದ್ರೆ ದೇಹದಲ್ಲಿ ನೀರಿನ ಅಂಶ ಕಡಿಮೆಯಾದ್ರೆ ಕೂದಲು ಉದುರುವ ಸಾಧ್ಯತೆ ಹೆಚ್ಚು. ಉದಾಹರಣೆಗೆ ನಾವು ಪ್ರತಿದಿನ ಗಿಡಕ್ಕೆ ನೀರು ಹಾಕದಿದ್ರೆ, ಅದು ಹೇಗೆ ಬಾಡಿಹೋಗುತ್ತದೆಯೋ, ಅದೇ ರೀತಿ ನಮ್ಮ ಕೂದಲಿಗೂ ಕೂಡ ಪೋಷಕಾಂಶ ಸಿಗದಿದ್ದರೆ, ಅದು ಕೂಡ ಉದುರಿ ಹೋಗುತ್ತದೆ. ಹಾಗಾಗಿ ಚೆನ್ನಾಗಿ ನೀರು ಕುಡಿಯುವುದರಿಂದ ಮತ್ತು ಉತ್ತಮ ಆಹಾರ ಸೇವಿಸುವುದರಿಂದ ನಮ್ಮ ಕೂದಲಿನ ಆರೋಗ್ಯವನ್ನು ನಾವು ಚೆನ್ನಾಗಿ ಇಟ್ಟುಕೊಳ್ಳಬಹುದು ಅನ್ನೋದು ಕಾವ್ಯಾ ಮಾತು.
ನಮ್ಮ ಕೂದಲು ಗಟ್ಟಿಮುಟ್ಟಾಗಿರಬೇಕು ಅಂದ್ರೆ ಪ್ರತಿದಿನ ಕೊಂಚವಾದ್ರೂ ಪೋಟೀನ್ ಭರಿತವಾದ ಆಹಾರವನ್ನು ಅವನು ತಿನ್ನಲೇಬೇಕು. ಬ್ರೊಕೊಲಿ, ಬಾದಾಮ್, ಬೆಳೆ ಕಾಳುಗಳು, ಪನೀರ್, ಪಾಲಕ್ ಸೊಪ್ಪು, ಕಡಲೆಕಾಯಿ, ಶೇಂಗಾ ಈ ಎಲ್ಲದರಲ್ಲಿ ಕೊಂಚ ಕೊಂಚವಾದ್ರೂ ಪ್ರತಿದಿನ ನಿಮ್ಮ ದೇಹ ಸೇರಬೇಕು. ಆದ್ರೆ ಇದನ್ನ ತಿನ್ನುವಾಗ ಹೆಚ್ಚು ಮಸಾಲೆ, ಉಪ್ಪು, ಖಾರಾ, ಎಣ್ಣೆ, ಬೆಣ್ಣೆ ಬಳಸಬೇಡಿ.
ಗಿಡ ಚೆನ್ನಾಗಿ ಬೆಳೆದಿಲ್ಲ ಅಂದ್ರೆ ನಾವು ಅದರ ಎಲೆಗಳಿಗೆ ನೀರು ಚಿಮುಕಿಸಲು ಆಗಲ್ಲ. ಹಾಗೆ ಮಾಡಿದ್ರೆ ಅದು ಸರಿಯಾಗುವುದಿಲ್ಲ. ಅಂತೆಯೇ ನಮ್ಮ ಕೂದಲು ಆರೋಗ್ಯಕರವಾಗಿರಬೇಕು ಅಂದ್ರೆ ಅದಕ್ಕೆ, ಎಣ್ಣೆ, ಶ್ಯಾಂಪೂ ಎಲ್ಲ ಬಳಸಿ, ಅದನ್ನ ಸರಿ ಮಾಡಲು ಆಗುವುದಿಲ್ಲ ಅನ್ನೋದು ಕಾವ್ಯಾ ಮಾತು. ಹಾಗಾಗಿ ನಾವು ಉತ್ತಮ ಆಹಾರ ಸೇವಿಸಿಯೇ, ನಮ್ಮ ಕೂದಲ ಆರೋಗ್ಯ ಕಾಪಾಡಿಕೊಳ್ಳಬೇಕು ಅಂತಾ ಹೇಳ್ತಾರೆ ಕಾವ್ಯಾ.