Thursday, November 21, 2024

Latest Posts

Summer Special: ಬೇಸಿಗೆಯಲ್ಲಿ ಎಂಥ ಆಹಾರ ತಿನ್ನಬೇಕು..?

- Advertisement -

ಬೇಸಿಗೆ ಬಂತಂದ್ರೆ ಸಾಕು, ಪದೇ ಪದೇ ಬಾಯಾರಿಕೆಯಾಗೋದು, ಸುಮ್ಮನೆ ಕುಳಿತರೂ ಬೆವರೋದರ ಜೊತೆಗೆ, ಹಲವು ಆರೋಗ್ಯ ಸಮಸ್ಯೆಯೂ ಕಾಣಿಸಿಕೊಳ್ಳತ್ತೆ. ಅದೇ ರೀತಿ, ಅಜೀರ್ಣ ಸಮಸ್ಯೆ, ತ್ವಚೆಯ ಸಮಸ್ಯೆ ಸೇರಿ ಇನ್ನೂ ಹಲವು ಸಮಸ್ಯೆಗಳನ್ನ ಬೇಸಿಗೆ ಕಾಲದಲ್ಲಿ ಎದುರಿಸಬೇಕಾಗುತ್ತದೆ. ಅಲ್ಲದೇ ಮಕ್ಕಳ ಬೆಳವಣಿಯಾಗೋದು ಕೂಡ ಬೇಸಿಗೆ ಕಾಲದಲ್ಲಿ.

ಆದ್ರೆ ಮಕ್ಕಳಾಗಲಿ, ದೊಡ್ಡವರಾಗಲಿ ಉತ್ತಮ ಆಹಾರಕ್ಕಿಂತ, ನೀರು ಕುಡಿಯುವುದೇ ಹೆಚ್ಚು.  ಹಾಗಾಗಿ ಬೇಸಿಗೆಯಲ್ಲಿ ನೀರು ಕುಡಿಯುವುದರ ಜೊತೆಗೆ, ಒಳ್ಳೆಯ ಆಹಾರವನ್ನೂ ತಿನ್ನಬೇಕು ಅಂತಾ ಹೇಳಲಾಗತ್ತೆ. ಹಾಗಾದ್ರೆ ಬೇಸಿಗೆಯಲ್ಲಿ ಎಂಥ ಆಹಾರ ತಿನ್ನಬೇಕು. ನಮ್ಮ ಫುಡ್ ಚಾರ್ಟ್ ಹೇಗಿರಬೇಕು ಅನ್ನೋ ಬಗ್ಗೆ ತಿಳಿಯೋಣ.

ಬೇಸಿಗೆಯಲ್ಲಿ ದೇಹಕ್ಕೆ ತಂಪು ನೀಡುವ ಆಹಾರ ಸೇವಿಸಬೇಕು ಅನ್ನೋದು ಎಲ್ಲರಿಗೂ ಗೊತ್ತು. ಆದ್ರೆ ಏನೇನು ತಿನ್ನಬೇಕು ಅನ್ನೋದು ಮಾತ್ರ ಹಲವರಿಗೆ ಗೊತ್ತಿರುವುದಿಲ್ಲ. ಹಾಗಂತ ಬೇಸಿಗೆಯಲ್ಲಿ ಬರೀ ತಂಪಿನ ಪದಾರ್ಥ ತಿಂದ್ರೆ, ನಿಮ್ಮ ಆರೋಗ್ಯದಲ್ಲಿ ಏರುಪೇರಾಗತ್ತೆ. ಜೀರ್ಣಕ್ರಿಯೆ ಸಮಸ್ಯೆ ಉದ್ಭವಿಸುವ ಸಾಧ್ಯತೆ ಇರುತ್ತದೆ.

ಹಾಗಾಗಿ ಬೇಸಿಗೆಯಲ್ಲಿ 70 ಪರ್ಸೆಂಟ್ ತಂಪಿನ ಆಹಾರ ತಿಂದ್ರೆ, 25 ಪರ್ಸೆಂಟ್ ಉಷ್ಣ ಆಹಾರ ಸೇವಿಸಬೇಕು. ಮತ್ತು 5 ಪರ್ಸೆಂಟ್ ಉಳಿದ ಆಹಾರ ಸೇವಿಸಬೇಕು. ಯಾಕಂದ್ರೆ ಬರೀ ಆರೋಗ್ಯಕರ ತಿಂಡಿ ತಿನ್ನೋದ್ರಿಂದಲೂ ನಮ್ಮ ಆರೋಗ್ಯ ಹಾಳಾಗುತ್ತದೆ. ಹಾಗಾಗಿ ಲಿಮಿಟ್‌ನಲ್ಲಿ ನಾವು ಜಂಕ್ ಫುಡ್ ತಿನ್ನಬಹುದು.

ಎಳನೀರು, ಸೌತೇಕಾಯಿ, ಕಲ್ಲಂಗಡಿ ಹಣ್ಣು, ಕರ್ಬೂಜ ಹಣ್ಣು, ಹಾಲು, ಮೊಸರು, ನಿಂಬೆ ಜ್ಯೂಸ್ ಹೀಗೆ ದೇಹಕ್ಕೆ ತಂಪು ನೀಡುವ ಆಹಾರ ಸೇವನೆ ಮಾಡಬೇಕು. ಜೊತೆಗೆ ಈ ಸೀಸನ್‌ನಲ್ಲಿ ಸಿಗುವ ಸೀಸನಲ್ ಫ್ರೂಟ್ಸ್ ತಿನ್ನೋದು ಮಾತ್ರ ಮರಿಲೇಬೇಡಿ. ಯಾಕಂದ್ರೆ ನಿಮ್ಮ ಆರೋಗ್ಯವನ್ನ ಉತ್ತಮವಾಗಿರಿಸುವಲ್ಲಿ ಸಹಾಯ ಮಾಡೋದು ಈ ಹಣ್ಣುಗಳು. ಹಾಗಾಗಿ ಮಾವಿನ ಹಣ್ಣು ಮತ್ತು ಹಲಸಿನ ಹಣ್ಣನ್ನ ಕೂಡ ತಿನ್ನಬೇಕು.

ಇನ್ನು ತಂಪಾದ ಆಹಾರ ಸೇವಿಸಬೇಕು ಅಂತಾ ಐಸ್‌ಕ್ರೀಮ್, ಕೋಲ್ಡ್ ಡ್ರಿಂಕ್ಸ್ ಕುಡಿಯಬಾರದು. ಯಾಕಂದ್ರೆ ಇವು ಫ್ರಿಜ್‌ನಲ್ಲಿ ಇರಿಸಿದ ಕಾರಣ ಕೋಲ್ಡ್ ಆಗಿರತ್ತೆ ವಿನಃ, ಇದು ದೇಹಕ್ಕೆ ತಂಪು ನೀಡೋ ಆಹಾರವಲ್ಲ. ಇಂಥ ಆಹಾರವನ್ನ ಹೆಚ್ಚಾಗಿ ತಿನ್ನುವುದರಿಂದ, ನೆಗಡಿ, ಕೆಮ್ಮು ಬರುವ, ಗಂಟಲ ನೋವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ದೇಹಕ್ಕೆ ತಂಪು ಮತ್ತು ಉಷ್ಣ ಸಮ ಪ್ರಮಾಣದಲ್ಲಿ ನೀಡುವ ಆಹಾರವನ್ನ ತಿನ್ನಿ.

- Advertisement -

Latest Posts

Don't Miss