ನಾವು ನೀರು ಚೆನ್ನಾಗಿ ಕುಡಿದರೆ, ನಮ್ಮ ಆರೋಗ್ಯದ ಜೊತೆ ನಮ್ಮ ಸೌಂದರ್ಯ ಕೂಡ ಉತ್ತಮವಾಗಿರುತ್ತದೆ ಅನ್ನೋದು ಕಾವ್ಯಾ ಶಾ ಮಾತು.. ಅದರಲ್ಲೂ ಬೇಸಿಗೆ ಕಾಲದಲ್ಲಿ ಎಷ್ಟು ಸಾಧ್ಯವೋ ಅಷ್ಟು ನೀರು ಕುಡಿಯಿರಿ ಅಂತಾ ಕಾವ್ಯಾ ಬ್ಯೂಟಿ ಟಿಪ್ಸ್ ಕೊಟ್ಟಿದ್ದಾರೆ.
ನಮಗೆ ಕಾಡುವ ಹಲವು ಆರೋಗ್ಯ ಸಮಸ್ಯೆಗಳಿಗೆ ನಮ್ಮ ದೇಹದಲ್ಲಿ ನೀರಿನ ಕೊರತೆ ಇರುವುದೇ ಕಾರಣ, ಸಂಧಿವಾತ, ಕೈ ಕಾಲು ನೋವು, ತಲೆ ನೋವು, ಹೊಟ್ಟೆ ಸಮಸ್ಯೆ ಇವೆಲ್ಲ ಉದ್ಭವವಾಗುವುದೇ, ನಮ್ಮ ದೇಹದಲ್ಲಿ ನೀರಿನ ಕೊರತೆಯುಂಟಾದಾಗ. ಅಲ್ಲದೇ, ಸಡೆನ್ ಆಗಿ ಏನಾದ್ರೂ ಮಾಡೋಕ್ಕೆ ಹೋದಾಗ, ಕೈ ಕಾಲು ಹಿಡಿಯೋದು, ಸೊಂಟ ಉಳುಕುವ ಸಮಸ್ಯೆಗೂ ದೇಹದಲ್ಲಾಗುವ ನೀರಿನ ಕೊರತೆಯೇ ಕಾರಣ ಅಂತಾರೆ ಕಾವ್ಯಾ.
ಪ್ರತಿಯೊಬ್ಬರು ಹೆಚ್ಚೆಚ್ಚು ನೀರು ಕುಡಿಯುವುದನ್ನ ಕಲಿಯಬೇಕು. ನೀವೇ ಒಂದು ಬಾಟಲ್ ತೆಗೆದುಕೊಂಡು, ಇಂದು ನಾನು ಇದರಲ್ಲಿ ನಾಲ್ಕು ಬಾರಿ ನೀರು ಕುಡಿಯುತ್ತೇನೆಂದು ಟಾರ್ಗೆಟ್ ಮಾಡಿಕೊಳ್ಳಿ. ಕೆಲವೇ ದಿನಗಳಲ್ಲಿ ನೀವು ಚೇಂಜಸ್ ಕಾಣಬಹುದು ಅಂತಾರೆ ಕಾವ್ಯಾ. ಇಷ್ಟೇ ಅಲ್ಲದೇ. ಕಲ್ಲಂಗಡಿ, ಕರ್ಬೂಜ, ಕಿತ್ತಳೆ ಹಣ್ಣು ಹೀಗೆ ನೀರಿನಂಶ ಉಳ್ಳ ಹಣ್ಣು ತರಕಾರಿಯನ್ನ ಹೆಚ್ಚು ಸೇವಿಸಿ. ಪಾನೀಪುರಿ, ಮಸಾಲೆ ಪುರಿ ತಿನ್ನೋಕ್ಕೆ ಟೇಸ್ಟಿಯಾಗಿದ್ರು, ನೀವು ಆರೋಗ್ಯಕರ ಸ್ನ್ಯಾಕ್ಸ್ ತಿನ್ನಿ. ಬೇಯಿಸಿದ ಕಡಲೆ, ಎಳನೀರು, ಕಬ್ಬಿನ ಹಾಲು ಕುಡಿಯಿರಿ. ಆರೋಗ್ಯವಾಗಿರಿ ಅಂತಾ ಕಾವ್ಯಾ ಶಾ ಟಿಪ್ಸ್ ನೀಡಿದ್ದಾರೆ.