ಸ್ಯಾಂಡಲ್‌ವುಡ್‌ನಲ್ಲಿ ಯಶಸ್ವಿ ನಿರ್ದೇಶಕಿ ಎನ್ನಿಸಿಕೊಂಡಿರುವ ಸ್ವಪ್ನ ಕೃಷ್ಣ, ಕರ್ನಾಟಕ ಟಿವಿ ಜೊತೆ ಮಾತನಾಡಿದ್ದಾರೆ. ಸ್ಯಾಂಡಲ್‌ವುಡ್ ಹೀರೋಗಳ ಬಗ್ಗೆ, ತಮ್ಮ ನೆಚ್ಚಿನ ನಟಿ ಯಾರು ಅನ್ನೋ ಬಗ್ಗೆಯೂ ಸ್ವಪ್ನಾ ಹೇಳಿದ್ರು. ಇದೀಗ, ಜೀವನದಲ್ಲಿ ಯಶಸ್ಸು ಗಳಿಸೋಕ್ಕೆ ಸ್ವಪ್ನಾ ಕೃಷ್ಣ, ಟಿಪ್ಸ್ ಕೊಟ್ಟಿದ್ದಾರೆ. ಅದೇನು ಅಂತಾ ತಿಳಿಯೋಣ ಬನ್ನಿ..
ಸ್ವಪ್ನ ಕೃಷ್ಣ ಪ್ರಕಾರ ಮೊದಲನೇಯದ್ದಾಗಿ, ಪ್ರಪಂಚದ ಬಗ್ಗೆ ಚಿಂತಿಸಬೇಡಿ. ಕಾನ್ಫಿಡೆಂಟ್ ಆಗಿರಿ. ನಿಮ್ಮನ್ನು ನೀವು ನಂಬಿ ಅಂತಾ ಹೇಳಿದ್ದಾರೆ. ಯಾಕಂದ್ರೆ ಜೀವನದಲ್ಲಿ ಸಫಲವಾಗಲು ಈ ಮೂರು ಮಾತೇ ಸಾಕು ಅಂತಾರೆ ಸ್ವಪ್ನಾ. ಜನ ಏನಂತಾರೋ ಏನೋ ಅಂತಾ ಯೋಚಿಸಿಕೊಂಡು ಕೂರುವ ಬದಲು, ನಿಮ್ಮ ಕೆಲಸವನ್ನ ನೀವು ಮಾಡುತ್ತಿರಬೇಕು. ಬೇರೆಯವರ ಮಾತುಗಳ ಬಗ್ಗೆ ಚಿಂತಿಸಬಾರದು. ಇನ್ನು ನಿಮ್ಮ ಬಗ್ಗೆ, ನಿಮ್ಮ ಕೆಲಸದ ಬಗ್ಗೆ ನಿಮಗೆ ನಂಬಿಕೆ ಇರಲಿ ಅನ್ನೋದು ಸ್ವಪ್ನಾ ಮಾತು.
ಇನ್ನು ಓರ್ವ ಪತ್ನಿಯನ್ನ ಪತಿ ಹೇಗೆ ಸಪೋರ್ಟ್ ಮಾಡ್ಬೇಕು ಅನ್ನೋ ಬಗ್ಗೆಯೂ ಸ್ವಪ್ನಾ ಹೇಳಿದ್ದಾರೆ. ಗಂಡನಿಗೆ ಕನಸ್ಸುಗಳಿರುವ ರೀತಿ, ಹೆಂಡತಿಗೂ ಕನಸ್ಸಿರುತ್ತದೆ. ತಾನು ತನ್ನ ಕೆಲಸದಲ್ಲಿ ಉನ್ನತಿ ಸಾಧಿಸಬೇಕು ಅಂತಾ ಅವಳು ಪ್ರಯತ್ನಿಸುತ್ತಿರುತ್ತಾಳೆ. ಹಾಗಾಗಿ ಆ ಬಗ್ಗೆ ಅರಿತುಕೊಂಡು ಪತಿ, ಪತ್ನಿಗೆ ಸಾಥ್ ಕೊಡಬೇಕು ಅಂತಾರೆ ಸ್ವಪ್ನಾ.