Wednesday, February 25, 2026

karnatakatv live

ವಿಶ್ವಾಸಮತ ಯಾಚನೆ ಮುಂದೂಡಲು ಮನವಿ- ಕೊನೇ ಕ್ಷಣದಲ್ಲಿ ದೋಸ್ತಿ ಗೇಮ್ ಪ್ಲ್ಯಾನ್…!

ಬೆಂಗಳೂರು: ಸರ್ಕಾರದ ಅಳಿವು ಉಳಿವು ನಿರ್ಧಾರ ಮಾಡುವ ಇಂದಿನ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ದೋಸ್ತಿ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗ್ಗೆಯಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕಾದು ಕುಳಿತ ಬಿಜೆಪಿಗೆ ಇದೀಗ ದೋಸ್ತಿ ಶಾಕ್ ನೀಡಲು ತಂತ್ರ ಹೆಣೆದಿದೆ. ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾ ಲೋಪದ ಬಗ್ಗೆ ಇಂದು ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ....

ವಿಪ್ ವಿಚಾರವಾಗಿ ಬಿಎಸ್ವೈ ಗೊಂದಲ- ಡಿಕೆಶಿ ಕೆಂಡಾಮಂಡಲ- ತಬ್ಬಿಬ್ಬಾದ ಯಡಿಯೂರಪ್ಪ..!

ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತ ಸುಪ್ರೀಂಕೋರ್ಟ್ ಆದೇಶದ ಕ್ರಿಯಾಲೋಪದ ಬಗ್ಗೆ ಸದನದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಕ್ರಿಯಾಲೋಪ ವಿಚಾರವಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಶಾಸಕರಿಗೆ ಜಾರಿಮಾಡಲಾಗಿರುವ ವಿಪ್ ಕುರಿತು ಗೊಂದಲದ ಹೇಳಿಕೆ ನೀಡಿ ಬೆಸ್ತು ಬಿದ್ದ ಪ್ರಸಂಗ ನಡೆಯಿತು. ಸದನದಲ್ಲಿ ವಿಶ್ವಾಸಮತಯಾಚನೆ ಕುರಿತಾಗಿ ಮೈತ್ರಿ ಪಕ್ಷ...

ಬೆಂಗಳೂರಿನಲ್ಲಿ ಕಾಣಿಸಿಕೊಂಡ ಎದೆನೋವಿಗೆ ಮುಂಬೈನಲ್ಲಿ ಚಿಕಿತ್ಸೆ ಪಡೆದ ಕೈ ಶಾಸಕ ಶ್ರೀಮಂತ್ ಪಾಟೀಲ್..!

ಬೆಂಗಳೂರು: ನಿನ್ನೆ ರಾತ್ರಿವರೆಗೂ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ದಿಢೀರನೆ ಮುಂಬೈ ಸೇರಿದ್ದಾರೆ. ಶ್ರೀಮಂತ್ ಪಾಟೀಲ್ ರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದಿನ ವಿಶ್ವಾಸಮತಕ್ಕೆ ಹಾಜರಾಗಲಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಮುಂಬೈನಲ್ಲಿ...

ನಂಬರ್ ಗೇಮ್ ನಿಂದ ಹೊರಗುಳಿದ ಶಾಸಕರ್ಯಾರು…?

ಬೆಂಗಳೂರು: ಇಂದಿನ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಗೈರಾಗಿದ್ದಾರೆ. ಈ ಮೂಲಕ ತಾವು ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರ ಬದಲಿಸಲ್ಲ ಅನ್ನೋ ಮಾತಿಗೆ ಬದ್ಧರಾಗಿದ್ದಾರೆ. ಆದ್ರೆ ಕೊನೆ ಕ್ಷಣದಲ್ಲಿ ಅತೃಪ್ತರು ಮನಸ್ಸು ಬದಲಿಸಿ ಬರುತ್ತಾರೇನೋ ಎಂಬ ವಿಶ್ವಾಸದಲ್ಲಿದ್ದ ದೋಸ್ತಿಗಳಿಗೆ ನಿರಾಶೆಯಾಗಿದೆ. ಇದೀಗ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆಯಾಗುತ್ತಿದ್ದು, ಇನ್ನೇನು ಕೆಲವೇ...

ವಿಧಾನಸಭೆಯಲ್ಲಿಂದು ವಿಶ್ವಾಸಮತ ಯಾಚನೆ- ನಂಬರ್ ಗೇಮ್ ನಲ್ಲಿ ಗೆಲ್ಲೋದ್ಯಾರು..?

ಬೆಂಗಳೂರು: ಇಂದು ಸರ್ಕಾರದ ಅಳಿವು ಉಳಿವಿಗಾಗಿ ನಡೆಯುವ ವಿಶ್ವಾಸಮತಯಾಚನೆಗೆ ದೇಶವೇ ಕಾತುರದಿಂದ ಕಾಯುತ್ತಿದೆ. ಒಂದು ವರ್ಷಗಳ ಕಾಲ ಸರಾಗವಾಗಿ ಆಡಳಿತ ನಡೆಸಿದ್ದ ಮೈತ್ರಿ ಸರ್ಕಾರಕ್ಕೆ ಇಂದು ಪತನಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಬಿಜೆಪಿ ಗೆಲುವು ನಮ್ಮದೇ ಅನ್ನೋ ವಿಶ್ವಾಸದಲ್ಲಿದೆ. ವಿಧಾನಸಭೆಯಲ್ಲಿ ಇವತ್ತು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ -ಜೆಡಿಎಸ್...

‘ನಮ್ಮ ಒಗ್ಗಟ್ಟು ಮುರಿಯಲು ಸಾಧ್ಯವಿಲ್ಲ’- ಡಿಸಿಎಂ ಪರಮೇಶ್ವರ್

ಬೆಂಗಳೂರು: ವಿಶ್ವಾಸಮತ ಯಾಚನೆಗೆ ಇನ್ನು ಕೆಲವೇ ಗಂಟೆ ಬಾಕಿ ಇರುವ ಬೆನ್ನಲ್ಲೇ ದೋಸ್ತಿ ನಾಯಕರಿಗೆ ಕಳವಳ ಎದುರಾಗಿದೆ. ತಮ್ಮ ಭವಿಷ್ಯ ನಿರ್ಧಾರವಾಗಲಿರೋ ನಾಳೆಯ ಬರುವಿಕೆಗಾಗಿ ಮೈತ್ರಿ ನಾಯಕರು ಕಾದು ಕುಳಿತಿದ್ದು, ಸರ್ಕಾರ ಉಳಿಸಿಕೊಳ್ಳೋ ನಿಟ್ಟಿನಲ್ಲಿ ಕೊನೇ ಕ್ಷಣದವರೆಗೂ ಕಸರತ್ತು ನಡೆಸಲಿದ್ದಾರೆ. ಆದ್ರೆ ಮೇಲ್ನೋಟಕ್ಕೆ ಮಾತ್ರ ತಾವು ನಿರಾಳರಾಗಿರುವಂತೆ ದೋಸ್ತಿಗಳು ಕಂಡುಬರುತ್ತಿದ್ದಾರೆ. ತಮ್ಮ ಟ್ವಿಟ್ಟರ್ ನಲ್ಲಿ...

ಕೊನೆಗೂ ರಾಜೀನಾಮೆ ವಾಪಸ್ ಪಡೆಯಲು ನಿರ್ಧರಿಸಿದ ರಾಮಲಿಂಗಾ ರೆಡ್ಡಿ..!

ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಅತೃಪ್ತರ ಪಟ್ಟಿ ಸೇರಿದ್ದ ಕಾಂಗ್ರೆಸ್ ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಕೊನೆಗೂ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆ. ರಾಜೀನಾಮೆ ಹಿಂಪಡೆಯೋ ಕುರಿತಾಗಿ ಪರೋಕ್ಷವಾಗಿ ಸುಳಿವು ನೀಡಿದ್ದ ಬೆಂಗಳೂರಿನ ಬಿಟಿಎಂ ಲೇಔಟ್ ನ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಇದೀಗ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆಯೋದಾಗಿ...

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ಪ್ರಕರಣಕ್ಕೆ ತಡೆ- ಭಾರತಕ್ಕೆ ರಾಜತಾಂತ್ರಿಕ ಗೆಲುವು- ಪಾಕ್ ಗೆ ತೀವ್ರ ಮುಖಭಂಗ..!

ನೆದರ್ಲೆಂಡ್: ಭಾರತದ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ಅಂತಾರಾಷ್ಟ್ರೀಯ ನ್ಯಾಯಾಲಯ ತಡೆ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಪಾಕ್ ವಿರುದ್ಧ ಭಾರತ ರಾಜತಾಂತ್ರಿಕ ಗೆಲುವು ಸಾಧಿಸಿದೆ. ನೆದರ್ಲೆಂಡ್ ನಲ್ಲಿನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕುಲಭೂಷಣ್ ಜಾಧವ್ ಮರಣದಂಡನೆ ಕುರಿತು ಪಾಕಿಸ್ತಾನ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಅಂತಾರಾಷ್ಟ್ರೀಯ ನ್ಯಾಯಾಲಯದ ಒಟ್ಟು...

ಪಕ್ಷೇತರರಿಗೆ ಕಾಡುತ್ತಿದೆ ಡಿಕೆಶಿ ಭೀತಿ..!

ಬೆಂಗಳೂರು: ಮುಂಬೈನಲ್ಲಿ ಬಿಜೆಪಿ ಮುಖಂಡರ ಸಂಪರ್ಕದಲ್ಲಿರೋ ಪಕ್ಷೇತರ ಶಾಸಕರಿಗೆ ಕೇಸರಿ ನಾಯಕರು ರಕ್ಷಣೆ ನೀಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮುಖಂಡರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ನಾಳೆ ವಿಶ್ವಾಸಮತಕ್ಕೆ ಹಾಜರಾಗಬೇಕಿರುವ ಈ ಇಬ್ಬರೂ ಪಕ್ಷೇತರರನ್ನು ಬೆಂಗಳೂರಿಗೆ ಕರೆತರಲು ಡಿಕೆಶಿ ಮತ್ತು ಸಿದ್ದರಾಮಯ್ಯ ಭೀತಿ ಬಿಜೆಪಿ ನಾಯಕರನ್ನು ಕಾಡುತ್ತಿದೆ. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೊಕ್ಕಿರುವ...

ಸುಪ್ರೀಂಕೋರ್ಟ್ ತೀರ್ಪಿಗೆ ದಿನೇಶ್ ಗುಂಡೂರಾವ್ ಅಸಮಾಧಾನ

ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಟ್ವೀಟ್ ಮಾಡಿರುವ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅತೃಪ್ತ ಶಾಸಕರು ವಿಪ್ ಉಲ್ಲಂಘನೆ ಮಾಡಲು ಸಹಕಾರಿಯಾಗಲೆಂದೇ ಸುಪ್ರೀಂ ಕೋರ್ಟ್ ಆದೇಶ ನೀಡಿದಂತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಬಳಿಕ ಮತ್ತೊಂದು ಟ್ವೀಟ್...
- Advertisement -spot_img

Latest News

Political News: ಉದ್ಯೋಗಾಕಾಂಕ್ಷಿಗಳ ಪ್ರತಿಭಟನೆಗೆ ಕಾರಣ ಬಿಜೆಪಿ: ಸಿಎಂ ಸಿದ್ದರಾಮಯ್ಯ

Political News: ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಪ್ರತಿಭಟನೆ ನಡೆಸುತ್ತಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ರಿಯಾಕ್ಷನ್ ನೀಡಿದ್ದಾರೆ. ಧಾರವಾಡದಲ್ಲಿ ಸರ್ಕಾರಿ ಉದ್ಯೋಗಾಕಾಂಕ್ಷಿಗಳು ನಡೆಸುತ್ತಿರುವ ಪ್ರತಿಭಟನೆಯನ್ನು ನಾನು ಗಂಭೀರವಾಗಿ...
- Advertisement -spot_img