Kasaragodu News: ಕೆಲ ಮಕ್ಕಳು ನಾಣ್ಯ, ಇತ್ಯಾದಿ ನುಂಗಿ ಸಾವನ್ನಪ್ಪಿದ ಘಟನೆ ಬಗ್ಗೆ ನೀವು ಕೇಳಿರುತ್ತೀರಿ. ಆದರೆ ಆರೋಗ್ಯಕರವಾದ ಡ್ರೈಫ್ರೂಟ್ಸ್ ತಿನ್ನುವ ವೇಳೆ, ಅದರ ಸಿಪ್ಪೆಯನ್ನೇ ನುಂಗಿ ಬಾಲಕನೋರ್ವ ಸಾವನ್ನಪ್ಪಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.
ಕಾಸರಗೋಡು ಜಿಲ್ಲೆಯ ಕುಂಬಳೆಯ ಭಾಸ್ಕರ್ ನಗರದ ನಿವಾಸಿಯಾಗಿರುವ ಅನ್ವರ್ ಮತ್ತು ಮೆಹರೂಫ್ ದಂಪತಿಯ ಮಗ ಅನಸ್ ಸಾವನ್ನಪ್ಪಿರುವ 2 ವರ್ಷದ...
National News: 10 ರೂಪಾಯಿಗಾಗಿ ನಿವೃತ್ತ ಐಎಎಸ್ ಅಧಿಕಾರಿ ಮೇಲೆ ಕಂಡಕ್ಟರ್ ಹಲ್ಲೆ ನಡೆಸಿದ ಘಟನೆ ರಾಜಸ್ತಾನದ ಜೈಪುರದಲ್ಲಿ ನಡೆದಿದೆ.
ಆರ್.ಎಲ್.ಮೀನ ಎಂಬ ಅಧಿಕಾರಿ ಹಲ್ಲೆಗೆ ಒಳಗಾಗಿದ್ದು, ಇವರು ಆಗ್ರಾ ರಸ್ತೆಯ ಕನೋಟಾ ರಸ್ತೆಯ ಬಳಿ ಇಳಿಯಲು ಟಿಕೇಟ್ ಪಡೆದಿದ್ದರು. ಆದರೆ ನಿಲ್ದಾಣ ಬಂದಿದ್ದು ಅಧಿಕಾರಿಗೂ ಗೊತ್ತಾಗಲಿಲ್ಲ, ಕಂಡಕ್ಟರ್ ಹೇಳಲೂ ಇಲ್ಲ. ಹೀಗಾಗಿ ಮುಂದಿನ ನಿಲ್ದಾಣದಲ್ಲಿ...
Uttara Pradesh news: ಹೆಲ್ಮೆಟ್ ಹಾಕದಿದ್ದರೆ ಏನು ನಷ್ಟ ಅನ್ನೋದನ್ನ ಅಪಘಾತವಾಗಿ, ತೆಲೆಗ ಪೆಟ್ಟು ಬಿದ್ದಿರುವವರಿಗೆ ಚೆನ್ನಾಗಿ ತಿಳಿದಿರುತ್ತದೆ. ಹೆಲ್ಮೆಟ್ ಹಾಕದೇ, ಎಷ್ಟೋ ಜನರ ಜೀವ ಹೋಗಿದೆ. ಹಾಗಾಗಿ ಇಂಥ ಸಾವುಗಳ ಸಂಖ್ಯೆ ಕಡಿಮೆ ಆಗಬೇಕು ಅಂದ್ರೆ, ಕೆಲವು ರೂಲ್ಸ್ ಜಾರಿ ಮಾಡಲೇಬೇಕೆಂದು ಉತ್ತರಪ್ರದೇಶ ಸರ್ಕಾರ ನಿರ್ಧರಿಸಿದೆ.
ಆ ರೂಲ್ಸ್ ಏನಂದ್ರೆ, ಯಾರು ಹೆಲ್ಮೆಟ್ ಧರಿಸಿರುವುದಿಲ್ಲವೋ,...
Bengaluru News: ಬೆಂಗಳೂರು: ಕೃಷಿ ಸಚಿವರಾದ ಎನ್.ಚಲುವರಾಯಸ್ವಾಮಿರವರ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಗೆ ರಾಜ್ಯದಿಂದ 50000 ಮೆಟ್ರಿಕ್ ಟನ್ ಹೆಚ್ಚುವರಿ ಅಕ್ಕಿ ಖರೀದಿಗೆ ಸಮ್ಮತಿಸಿದ್ದು ಸೂಕ್ತ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆಯಲ್ಲಿ ನೀಡಲಾಗುತ್ತಿರುವ ಪ್ರಮುಖ ಆಹಾರ ಪದಾರ್ಥಗಳಲ್ಲಿ ಅಕ್ಕಿಯೂ ಸೇರಿದೆ. ಕರ್ನಾಟಕ ಅಧಿಕ...
Bigg Boss: ಮಾತಿನ ಮಲ್ಲಿ ಚೈತ್ರಾ ಕುಂದಾಪುರ ಕನ್ನಡ ರಿಯಾಲಿಟಿ ಶೋ, ಬಿಗ್‌ಬಾಸ್ ಸೀಸನ್ 11ನಿಂದ ಹೊರಬಿದ್ದಿದ್ದಾರೆ. ಎಲ್ಲರಿಗೂ ಭಾವುಕ ವಿದಾಯ ಹೇಳಿರುವ ಚೈತ್ರಾಳನ್ನು ಕಿಚ್ಚ ಸುದೀಪ ಕಣ್ಣೊರಿಸಿ ಸಮಾಧಾನ ಮಾಡಿದ್ದಾರೆ.
ಈ ಬಾರಿ ಎಲಿಮಿನೇಷನ್ ಪ್ರಕ್ರಿಯೆ ಮಾಡುವಾಗ, ಕೊನೆಯಲ್ಲಿ ಧನರಾಜ್ ಮತ್ತು ಚೈತ್ರಾ ಉಳಿದುಕೊಂಡಿದ್ದರು. ಹೀಗಾಗಿ ಕಿಚ್ಚ ಒಂದು ಟಾಸ್ಕ್ ಕೊಟ್ಟಿದ್ದು, ಲಕೋಟೆ ಹುಡುಕಿ,...
Movie News: ತೆಲುಗು ನಟರಾದ ರಾಣಾ ದಗ್ಗುಬಾಟಿ ಮತ್ತು ನಟ ವೆಂಕಟೇಶ್ ವಿರುದ್ಧ ಕೇಸ್ ದಾಖಲಾಗಿದೆ. ಕೋರ್ಟ್ ತಡೆಯಾಜ್ಞೆ ಇದ್ದರೂ ಕೂಡ, ಆದೇಶ ಮೀರಿ ಡೆಕ್ಕನ್ ಕಿಚನ್ ಹೊಟೇಲ್ ನೆಲಸಮ ಮಾಡಿದ ಕಾರಣ, ನಟರ ಮೇಲೆ ದೂರು ದಾಖಲಾಗಿದೆ.
ಆಸ್ತಿ ವಿವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈದರಾಬಾದ್‌ನ ಫಿಲ್ಮ್‌ಸಿಟಿಯಲ್‌ಲಿನ ಡೆಕ್ಕನ್ ಕಿಚನ್ ಹೊಟೇಲ್ ಕೋರ್ಟ್‌ನಿಂದ ತಡೆಯಾಜ್ಞೆ ನೀಡಲಾಗಿತ್ತು....
Political news: ಸಿಲಿಕಾನ್ ಸಿಟಿ, ಉದ್ಯಾನನಗರಿ, ಐಟಿಸಿಟಿ ಅಂತೆಲ್ಲಾ ಖ್ಯಾತಿಯಾಗಿದ್ದ ಬೆಂಗಳೂರಿಗೆ ಇತ್ತೀಚಿನ ದಿನಗಳಲ್ಲಿ ಟ್ರಾಫಿಕ್ ನಗರಿ ಅನ್ನೋ ಪಟ್ಟ ಸಿಕ್ಕಿದೆ. ಈ ವಾಹನ ಸಂಚಾರಗಳಿಂದ ದೇಸದ 3ನೇ ವಾಹನ ದಟ್ಟಣೆಯ ನಗರ ಎಂಬ ಪಟ್ಟವೂ ಸಿಕ್ಕಿದೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು ಅತ್ಯಂತ ಯೋಜಿತ ನಗರ ಎಂಬ ಹೆಗ್ಗಳಿಕೆ...
Political news: ಸಿಎಂ ಸಿದ್ದರಾಮಯ್ಯ ಪ್ರೆಸ್ ಕ್ಲಬ್ ಆಫ್ ಬೆಂಗಳೂರಿನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿದ್ದರು.
ಎಲ್ಲಾ ಆರೋಗ್ಯಕರ ಟೀಕೆಗಳನ್ನು ಸ್ವಾಗತಿಸುತ್ತೇನೆ, ತಿದ್ದಿಕೊಳ್ಳುತ್ತೇನೆ. ಆದರೆ ರಾಜಕೀಯ ಕಾರಣಕ್ಕೆ ಸುಳ್ಳು ಸುಳ್ಳೇ ಟೀಕಿಸಿದರೆ ಐ ಡೋಂಟ್ ಕೇರ್. ನಮ್ಮ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ಬಿಜೆಪಿಯವರೇ ನಮ್ಮ ಗ್ಯಾರಂಟಿಗಳನ್ನು ಕಾಪಿ ಮಾಡಿದ್ದಾರೆ. ನಮ್ಮ ಗ್ಯಾರಂಟಿಗಳನ್ನು ಬೇರೆ ಹೆಸರಲ್ಲಿ ಅವರು...
Mandya News: ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್- 2024ರ ಕಿರೀಟವನ್ನು ಕನ್ನಡತಿ, ಮದ್ದೂರಿನ ಸೊಸೆ ಡಾ.ಪ್ರಿಯಾ ಗೋಸ್ವಾಮಿ ತಮ್ಮದಾಗಿಸಿಕೊಂಡಿದ್ದಾರೆ.
ಪ್ರಿಯಾ ಮಂಡ್ಯ ಜಿಲ್ಲೆಯ ಮದ್ದೂರಿನ ಸೊಸೆ. ಭಾರತೀಯ ಸೇನೆಯಲ್ಲಿರುವ ಮದ್ದೂರಿನವರಾಗಿರುವ ಕರ್ನಲ್ ಸಂಜೀತ್ ಪ್ರಿಯಾ ಅವರ ಪತಿಯಾಗಿದ್ದಾರೆ. ಪಶು ವೈದ್ಯೆಯಾಗಿರುವ ಪ್ರಿಯಾ, ಮಿಸೆಸ್ ಇಂಡಿಯಾ ಪ್ರೈಡ್ ಆಫ್ ನೇಷನ್- 2024 ಸ್ಪರ್ಧೆಯಲ್ಲಿ ಭಾಗವಹಿಸಿ, ಕಿರೀಟವನ್ನು...
Bengaluru News: ಬೆಂಗಳೂರು: ಸಂಕ್ರಾಂತಿ ಹಬ್ಬದ ಪ್ರಯುಕ್ತ ಜೆಡಿಎಸ್ ಪಕ್ಷದ ಸಾಮಾಜಿಕ ಜಾಲತಾಣ ವಿಭಾಗ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ರಾಜ್ಯ ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಹಾಸನದ ಟಿ.ಎಂ.ಧನುಷ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಹುಬ್ಬಳ್ಳಿಯ ಸಾನ್ವಿ ಎರಗೊಪ್ಪಾ ಹಾಗೂ ಶಿರಸಿಯ ಗೋಕುಲ್ ಬಾಲಚಂದ್ರ ಇಬ್ಬರೂ ದ್ವಿತೀಯ ಸ್ಥಾನ ಪಡೆದಿದ್ದಾರೆ. 20 ಮಕ್ಕಳು ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.
ಕೇಂದ್ರದ ಭಾರೀ ಕೈಗಾರಿಕೆ...
Political News: ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು, ಪ್ರಧಾನಿ ಮೋದಿ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಬಗ್ಗೆ...