ಬೆಂಗಳೂರು: ನಿನ್ನೆ ರಾತ್ರಿ ವರೆಗೂ ಆರೋಗ್ಯವಾಗಿದ್ದ ಕಾಗವಾಡದ ಕಾಂಗ್ರೆಸ್ ಶಾಸಕ ಆರೋಗ್ಯದ ನೆಪವೊಡ್ಡಿ ಮುಂಬೈನಲ್ಲಿ ಪ್ರತ್ಯಕ್ಷವಾದ ಘಟನೆ ಇದೀಗ ಮತ್ತೊಂದು ತಿರುವು ಪಡೆದಿದೆ. ಇದರ ಹಿಂದೆ ಬಿಜೆಪಿ ಕೈವಾಡ ನಡೆಸಿ ಶಾಸಕರನ್ನು ಬಲವಂತದಿಂದ ಕರೆದೊಯ್ದಿದೆ ಅಂತ ದೋಸ್ತಿ ಆರೋಪಿಸಿದ್ದಾರೆ.
ಇಂದಿನ ವಿಶ್ವಾಸಮತ ಯಾಚನೆಯಲ್ಲಿ ಸರ್ಕಾರಕ್ಕೆ ಹಿನ್ನಡೆಯುಂಟು ಮಾಡುವ ಉದ್ದೇಶದಿಂದ ಕಾಗವಾಡದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲರನ್ನು...
ಬೆಂಗಳೂರು: ಸರ್ಕಾರದ ಅಳಿವು ಉಳಿವು ನಿರ್ಧಾರ ಮಾಡುವ ಇಂದಿನ ವಿಶ್ವಾಸಮತ ಯಾಚನೆಯಿಂದ ತಪ್ಪಿಸಿಕೊಳ್ಳಲು ದೋಸ್ತಿ ಇನ್ನಿಲ್ಲದ ಕಸರತ್ತು ನಡೆಸಿದೆ. ಬೆಳಗ್ಗೆಯಿಂದ ವಿಶ್ವಾಸಮತ ಯಾಚನೆ ಪ್ರಕ್ರಿಯೆಗೆ ಕಾದು ಕುಳಿತ ಬಿಜೆಪಿಗೆ ಇದೀಗ ದೋಸ್ತಿ ಶಾಕ್ ನೀಡಲು ತಂತ್ರ ಹೆಣೆದಿದೆ.
ಸುಪ್ರೀಂಕೋರ್ಟ್ ಮಧ್ಯಂತರ ಆದೇಶದ ಕುರಿತ ಕ್ರಿಯಾ ಲೋಪದ ಬಗ್ಗೆ ಇಂದು ಸದನದಲ್ಲಿ ಕುತೂಹಲಕಾರಿ ಚರ್ಚೆ ನಡೆಯುತ್ತಿದೆ....
ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತ ಸುಪ್ರೀಂಕೋರ್ಟ್ ಆದೇಶದ ಕ್ರಿಯಾಲೋಪದ ಬಗ್ಗೆ ಸದನದಲ್ಲಿ ಚರ್ಚೆ ಜೋರಾಗಿ ನಡೆದಿದೆ. ಕ್ರಿಯಾಲೋಪ ವಿಚಾರವಾಗಿ ಕಾಂಗ್ರೆಸ್ ಶಾಸಕರು ಮಾತನಾಡುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಯಡಿಯೂರಪ್ಪ ಶಾಸಕರಿಗೆ ಜಾರಿಮಾಡಲಾಗಿರುವ ವಿಪ್ ಕುರಿತು ಗೊಂದಲದ ಹೇಳಿಕೆ ನೀಡಿ ಬೆಸ್ತು ಬಿದ್ದ ಪ್ರಸಂಗ ನಡೆಯಿತು.
ಸದನದಲ್ಲಿ ವಿಶ್ವಾಸಮತಯಾಚನೆ ಕುರಿತಾಗಿ ಮೈತ್ರಿ ಪಕ್ಷ...
ಬೆಂಗಳೂರು: ನಿನ್ನೆ ರಾತ್ರಿವರೆಗೂ ಕಾಂಗ್ರೆಸ್ ನಾಯಕರಿಗೆ ಸಾಥ್ ನೀಡಿದ್ದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇದೀಗ ದಿಢೀರನೆ ಮುಂಬೈ ಸೇರಿದ್ದಾರೆ. ಶ್ರೀಮಂತ್ ಪಾಟೀಲ್ ರವರಿಗೆ ಎದೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮುಂಬೈನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದಿನ ವಿಶ್ವಾಸಮತಕ್ಕೆ ಹಾಜರಾಗಲಿದ್ದ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ಶ್ರೀಮಂತ್ ಪಾಟೀಲ್ ಇಂದು ಮುಂಬೈನಲ್ಲಿ...
ಬೆಂಗಳೂರು: ಇಂದಿನ ವಿಶ್ವಾಸಮತ ಯಾಚನೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಶಾಸಕರು ಗೈರಾಗಿದ್ದಾರೆ. ಈ ಮೂಲಕ ತಾವು ಯಾವುದೇ ಕಾರಣಕ್ಕೂ ತಮ್ಮ ನಿರ್ಧಾರ ಬದಲಿಸಲ್ಲ ಅನ್ನೋ ಮಾತಿಗೆ ಬದ್ಧರಾಗಿದ್ದಾರೆ. ಆದ್ರೆ ಕೊನೆ ಕ್ಷಣದಲ್ಲಿ ಅತೃಪ್ತರು ಮನಸ್ಸು ಬದಲಿಸಿ ಬರುತ್ತಾರೇನೋ ಎಂಬ ವಿಶ್ವಾಸದಲ್ಲಿದ್ದ ದೋಸ್ತಿಗಳಿಗೆ ನಿರಾಶೆಯಾಗಿದೆ.
ಇದೀಗ ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆಯಾಗುತ್ತಿದ್ದು, ಇನ್ನೇನು ಕೆಲವೇ...
ಬೆಂಗಳೂರು: ಇಂದು ಸರ್ಕಾರದ ಅಳಿವು ಉಳಿವಿಗಾಗಿ ನಡೆಯುವ ವಿಶ್ವಾಸಮತಯಾಚನೆಗೆ ದೇಶವೇ ಕಾತುರದಿಂದ ಕಾಯುತ್ತಿದೆ. ಒಂದು ವರ್ಷಗಳ ಕಾಲ ಸರಾಗವಾಗಿ ಆಡಳಿತ ನಡೆಸಿದ್ದ ಮೈತ್ರಿ ಸರ್ಕಾರಕ್ಕೆ ಇಂದು ಪತನಗೊಳ್ಳುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿದ್ದು, ಬಿಜೆಪಿ ಗೆಲುವು ನಮ್ಮದೇ ಅನ್ನೋ ವಿಶ್ವಾಸದಲ್ಲಿದೆ.
ವಿಧಾನಸಭೆಯಲ್ಲಿ ಇವತ್ತು ಸಿಎಂ ಎಚ್.ಡಿ ಕುಮಾರಸ್ವಾಮಿ ವಿಶ್ವಾಸ ಮತ ಯಾಚನೆ ಮಾಡಲಿದ್ದು, ಕಾಂಗ್ರೆಸ್ -ಜೆಡಿಎಸ್...
ಬೆಂಗಳೂರು: ಮೈತ್ರಿ ಸರ್ಕಾರದ ಮೇಲೆ ಮುನಿಸಿಕೊಂಡು ರಾಜೀನಾಮೆ ನೀಡಿ ಅತೃಪ್ತರ ಪಟ್ಟಿ ಸೇರಿದ್ದ ಕಾಂಗ್ರೆಸ್ ನ ಹಿರಿಯ ಶಾಸಕ ರಾಮಲಿಂಗಾ ರೆಡ್ಡಿ ಕೊನೆಗೂ ರಾಜೀನಾಮೆ ಹಿಂಪಡೆಯಲು ನಿರ್ಧರಿಸಿದ್ದಾರೆ.
ರಾಜೀನಾಮೆ ಹಿಂಪಡೆಯೋ ಕುರಿತಾಗಿ ಪರೋಕ್ಷವಾಗಿ ಸುಳಿವು ನೀಡಿದ್ದ ಬೆಂಗಳೂರಿನ ಬಿಟಿಎಂ ಲೇಔಟ್ ನ ಕಾಂಗ್ರೆಸ್ ಶಾಸಕ ರಾಮಲಿಂಗಾರೆಡ್ಡಿ ಇದೀಗ ನಿರ್ಧಾರಕ್ಕೆ ಬಂದಿದ್ದಾರೆ. ರಾಜೀನಾಮೆಯನ್ನು ವಾಪಸ್ ಪಡೆಯೋದಾಗಿ...
ಬೆಂಗಳೂರು: ಮುಂಬೈನಲ್ಲಿ ಬಿಜೆಪಿ ಮುಖಂಡರ ಸಂಪರ್ಕದಲ್ಲಿರೋ ಪಕ್ಷೇತರ ಶಾಸಕರಿಗೆ ಕೇಸರಿ ನಾಯಕರು ರಕ್ಷಣೆ ನೀಡುತ್ತಿದ್ದು, ಕಾಂಗ್ರೆಸ್, ಜೆಡಿಎಸ್ ಮುಖಂಡರ ಸಂಪರ್ಕಕ್ಕೆ ಸಿಗದಂತೆ ನೋಡಿಕೊಳ್ಳುತ್ತಿದ್ದಾರೆ. ಆದರೆ ನಾಳೆ ವಿಶ್ವಾಸಮತಕ್ಕೆ ಹಾಜರಾಗಬೇಕಿರುವ ಈ ಇಬ್ಬರೂ ಪಕ್ಷೇತರರನ್ನು ಬೆಂಗಳೂರಿಗೆ ಕರೆತರಲು ಡಿಕೆಶಿ ಮತ್ತು ಸಿದ್ದರಾಮಯ್ಯ ಭೀತಿ ಬಿಜೆಪಿ ನಾಯಕರನ್ನು ಕಾಡುತ್ತಿದೆ.
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈ ಹೊಕ್ಕಿರುವ...
ಬೆಂಗಳೂರು: ಅತೃಪ್ತ ಶಾಸಕರ ಅರ್ಜಿ ಕುರಿತು ಇಂದು ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ತೀರ್ಪಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಕುರಿತು ಟ್ವೀಟ್ ಮಾಡಿರುವ ಕೆಪಿಪಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಅತೃಪ್ತ ಶಾಸಕರು ವಿಪ್ ಉಲ್ಲಂಘನೆ ಮಾಡಲು ಸಹಕಾರಿಯಾಗಲೆಂದೇ ಸುಪ್ರೀಂ ಕೋರ್ಟ್ ಆದೇಶ ನೀಡಿದಂತಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ.
ಬಳಿಕ ಮತ್ತೊಂದು ಟ್ವೀಟ್...