Health Tips: ನಾವು ಹುಟ್ಟುವಾಗ ಯಾವ ಬಣ್ಣವಾಗಿರುತ್ತೇವೋ, ಅದೇ ನಮಗೆ ಪರಮ್ನೆಂಟ್ ಬಣ್ಣ. ಯಾವ ಕ್ರೀಮ್ ಹಚ್ಚಿದ್ರೂ, ನಮ್ಮ ಬಣ್ಣ ಬದಲಾಗೋಕ್ಕೆ ಸಾಧ್ಯವಿಲ್ಲ. ಹಾಗಾಗಿ ಹುಟ್ಟಿದ ದಿನ ಮಗು ನೀರು ತುಂಬಿಕೊಂಡು ಗುಂಡ ಗುಂಡಗೆ ಇರುತ್ತದೆ. ಮರುದಿನ ಮಗುವಿನ ದೇಹದ ನೀರು ಹೋಗಿ, ಬಣ್ಣವೂ ಗಾಢವಾಗುತ್ತದೆ. ಆದರೆ ಮಗು ಬೆಳೆಯುತ್ತ, ಮತ್ತೆ ಮೊದಲ ದಿನದ ಬಣ್ಣಕ್ಕೆ ಬರುತ್ತದೆ. ಹಾಗಾಗಿ ಮಗು ಹೊಟ್ಟೆಯಲ್ಲಿದ್ದಾಗಲೇ, ಅಮ್ಮ ಕೆಲವು ಆಹಾರಗಳ ಸೇವನೆ ಮಾಡಿದರೆ, ಮಗು ಬೆಳ್ಳ ಬೆಳ್ಳಗಿರುತ್ತದೆ. ಹಾಗಾದರೆ ಗರ್ಭಿಣಿ ಇದಕ್ಕಾಗಿ ಯಾವ ಆಹಾರವನ್ನು ಸೇವಿಸಬೇಕು ಅಂತಾ ತಿಳಿಯೋಣ ಬನ್ನಿ..
ಮೊದಲನೇಯ ಆಹಾರ ಕೇಸರಿ ಹಾಲು. ಮಗು ಬೆಳ್ಳಗೆ ಆಗಬೇಕು ಅಂದ್ರೆ ಕೇಸರಿ ಹಾಲು ಕುಡಿಯಬೇಕು ಎಂದು ಹಲವರು ನಿಮಗೆ ಸಲಹೆ ಕೊಟ್ಟಿರುತ್ತಾರೆ. ನಿಜ, ಕೇಸರಿ ಹಾಲು ಕುಡಿಯಬೇಕು. ಆದರೆ ಹಾಲಿಗೆ ನೀವು ಬಳಸುವ ಕೇಸರಿ ಮಿತವಾಗಿರಬೇಕು. ಅದು ಹೆಚ್ಚಾಗಿದ್ದಲ್ಲಿ, ದೇಹದಲ್ಲಿ ಉಷ್ಣತೆ ಹೆಚ್ಚುತ್ತದೆ. ಆಗ ತಾಯಿ ಮಗು ಇಬ್ಬರ ಆರೋಗ್ಯಕ್ಕೂ ಸಮಸ್ಯೆ ಬರುತ್ತದೆ. ಹಾಗಾಗಿ ಕೇಸರಿ ಮಿತವಾಗಿ ಬಳಸಿ, ಹಾಲು ತಯಾರಿಸಿ ಕುಡಿಯಿರಿ.
ಎರಡನೇಯ ಆಹಾರ ಎಳನೀರು. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಎಳನೀರಿನ ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿರುವ ಕೊಳೆಗಳು ಮೂತ್ರದ ಮೂಲಕ ಹೊರಹೋಗುತ್ತದೆ. ಆಗ ನಿಮ್ಮ ಮತ್ತು ನಿಮ್ಮ ಮಗುವಿನ ಬಣ್ಣ ತಿಳಿಯಾಗುತ್ತದೆ. ಮುಖದಲ್ಲಿ ಕಳೆ ಬರುತ್ತದೆ. ಅಲ್ಲದೇ, ಎಳನೀರಿನ ಸೇವನೆಯಿಂದ ಹಲವು ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.
ಮೂರನೇಯ ಆಹಾರ ಕಿತ್ತಳೆ ಹಣ್ಣು. ಕಿತ್ತಳೆಯಲ್ಲಿ ವಿಟಾಮಿನ್ ಸಿ ಇರುವ ಕಾರಣಕ್ಕೆ, ಇದು ಗರ್ಭಿಣಿಗೆ ಅತ್ಯುತ್ತಮ ಆಹಾರವಾಗಿದೆ. ಪ್ರತಿದಿನ ಒಂದು ಕಿತ್ತಳೆ ಸೇವನೆ ಮಾಡಿದರೂ ಉತ್ತಮ. ಇದರಿಂದ ಮಗುವಿನ ಬಣ್ಣ ತಿಳಿಯಾಗುತ್ತದೆ.
ನಾಲ್ಕನೇಯ ಆಹಾರ ನೆನೆಸಿಟ್ಟ ಬಾದಾಮಿ. ನೆನೆಸಿ ಸಿಪ್ಪೆ ತೆಗೆದ ನಾಲ್ಕೈದು ಬಾದಾಮಿಯನ್ನು ಗರ್ಭಿಣಿ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದರಿಂದ ಮಗುವಿನ ಬಣ್ಣ ಬಿಳಿ ಬಣ್ಣವಾಗುವುದಲ್ಲದೇ, ಅದರ ಮೆದುಳಿನ ಬೆಳವಣಿಗೆ ಉತ್ತಮವಾಗುತ್ತದೆ. ದೇಹದ ತೂಕ ಕೂಡ ಸರಿಯಾಗಿ ಆಗುತ್ತದೆ. ಕಣ್ಣಿನ ಆರೋಗ್ಯಕ್ಕೂ ನೆನೆಸಿದ ಬಾದಾಮಿ ಉತ್ತಮವಾಗಿದೆ.
ಐದನೇಯ ಆಹಾರ ತುಪ್ಪ. ಗರ್ಭಿಣಿಯರು ಮಾಡಲೇಬೇಕಾದ ಪದಾರ್ಥ ಅಂದ್ರೆ, ತುಪ್ಪ. ಬೆಳಿಗ್ಗೆ ಮಧ್ಯಾಹ್ನ ಮೊಸರಿನ ಸೇವನೆ ಮಾಡಿದ್ರೆ, ದಿನದ ಮೂರು ಹೊತ್ತು ನೀವು ತುಪ್ಪದ ಸೇವನೆ ಮಾಡಬಹುದು. ಆದರೆ ಅದು ಕೂಡ ಮಿತವಾಗಿರಲಿ. ತುಪ್ಪದ ಸೇವನೆಯಿಂದ ತಾಯಿ ಮಗು ಇಬ್ಬರ ಆರೋಗ್ಯವೂ ಉತ್ತಮವಾಗಿರುತ್ತದೆ. ಬೆಳವಣಿಗೆ, ಬಣ್ಣ, ಚುರುಕುತನ, ಶಕ್ತಿ ಎಲ್ಲವನ್ನೂ ನೀಡುವ ಗುಣ ತುಪ್ಪದಲ್ಲಿದೆ.