Saturday, May 10, 2025

Latest Posts

ಭೀಷ್ಮ ಪಿತಾಮಹರ ಈ 5 ತಪ್ಪಿನಿಂದಾಗಿಯೇ ಮಹಾಭಾರತ ಯುದ್ಧವಾಗಿತ್ತು..

- Advertisement -

ದ್ರೌಪದಿಯ ಸಿಟ್ಟಿನಿಂದಲೇ ಮಹಾಭಾರತ ಯುದ್ಧ ನಡೆದಿದ್ದು ನಿಜವಾದರೂ ಕೂಡ, ಆ ಸಿಟ್ಟಿಗೆ ಭೀಷ್ಮ ಪಿತಾಮಹರ ತಪ್ಪು ಕೂಡ ಕಾರಣವಾಗಿತ್ತು. ಹಾಗಾದ್ರೆ ಭೀಷ್ಮ ಮಾಡಿದ ತಪ್ಪಾದರೂ ಏನು ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ತಪ್ಪು, ಧೃತರಾಷ್ಟ್ರ ಮಾಡುತ್ತಿರುವುದು ತಪ್ಪು ಎಂದು ತಿಳಿದ ಮೇಲೂ ಕೂಡ, ಭೀಷ್ಮ ಪಿತಾಮಹ ಸುಮ್ಮನಿದ್ದಿದ್ದು ಮೊದಲ ತಪ್ಪು. ಪುತ್ರ ವ್ಯಾಮೋಹದಿಂದ ಧೃತರಾಷ್ಟ್ರ ಪಾಂಡವರಿಗೆ ಅನ್ಯಾಯ ಮಾಡುತ್ತಿದ್ದಾನೆಂದು ಭೀಷ್ಮರಿಗೂ ಗೊತ್ತಿತ್ತು. ಆದ್ರೆ ಅವರು ಅದಕ್ಕೆ ವಿರೋಧಿಸದೇ, ರಾಜನ ಪರವಾಗಿ ಇದ್ದರು.

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 1

ಎರಡನೇಯ ತಪ್ಪು, ರಾಜಭವನದಲ್ಲಿ ಪಗಡೆಯಾಡಲು ಅವಕಾಶ ಕೊಟ್ಟಿದ್ದು ಎರಡನೇಯ ತಪ್ಪು. ರಾಜಭವನವೆಂದರೆ ಪವಿತ್ರ ಸ್ಥಳ. ಅಲ್ಲಿ ರಾಜ ನ್ಯಾಯದ ಪರ ನಿಲ್ಲಬೇಕು. ಆದರೆ, ಅಲ್ಲಿ ದುರ್ಯೋಧನ ಮತ್ತು ಶಕುನಿ ಪಗಡೆಯಾಡಿ, ಮೋಸ ಮಾಡಿ ಅನ್ಯಾಯ ಮಾಡುತ್ತಿದ್ದರೂ ಕೂಡ, ಅದನ್ನು ನೋಡಿದ ಭೀಷ್ಮರು, ಪಗಡೆಯಾಡಲು ಅವಕಾಶ ಕೊಟ್ಟಿದ್ದು ತಪ್ಪು. ಪಗಡೆಯಾಡದಿದ್ದಲ್ಲಿ, ದ್ರೌಪದಿಯ ಅಪಮಾನವಾಗುತ್ತಿರಲಿಲ್ಲ. ಮಹಾಭಾರತ ಯುದ್ಧವೂ ಆಗುತ್ತಿರಲಿಲ್ಲ.

ಮೂರನೇಯ ತಪ್ಪು, ದ್ರೌಪದಿಯ ವಸ್ತ್ರಾಪಹರಣವಾಗುವ ಸಮಯದಲ್ಲಿ ಸುಮ್ಮನಿದ್ದದ್ದು ಭೀಷ್ಮರ ತಪ್ಪು. ರಾಜಭವನದಲ್ಲಿ ಓರ್ವ ಸ್ತ್ರೀ ಅಪಮಾನಿತಳಾಗುತ್ತಿದ್ದರೂ ಕೂಡ ಹಿರಿಯರಾದ ಭೀಷ್ಮರು, ಅದು ತಪ್ಪು ಎಂದು ಹೇಳದೇ, ಸುಮ್ಮನಿದ್ದಿದ್ದು ತಪ್ಪು,.

ಉತ್ತಮ ಸಂತಾನ ಬೇಕು ಅಂತಾದಲ್ಲಿ ಗರ್ಭಿಣಿ ಏನು ಮಾಡಬೇಕು..? ಭಾಗ 2

ನಾಲ್ಕನೇಯ ತಪ್ಪು, ಕರ್ಣ ಪಾಂಡವರ ಸಹೋದರನೆಂಬ ಸತ್ಯ ಗೊತ್ತಿದ್ದರೂ, ಅದನ್ನು ಬಚ್ಚಿಟ್ಟಿದ್ದು ಭೀಷ್ಮರ ತಪ್ಪು. ಕರ್ಣ ಕೌರವ ವಂಶದವನು ಎಂದು ಗೊತ್ತಿದ್ದರೂ, ಭೀಷ್ಮರು ಈ ಸತ್ಯವನ್ನು ಯಾರಲ್ಲಿಯೂ ಹೇಳಲಿಲ್ಲ. ಯಾಕಂದ್ರೆ ಕರ್ಣನಿಗೆ ರಾಜನ ಪಟ್ಟ ಸಿಗುವುದು ಭೀಷ್ಮರಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಸುಮ್ಮನಿದ್ದರು.

ಐದನೇಯ ತಪ್ಪು, ಪಾಂಡವರು ಮತ್ತು ಕೌರವರ ನಡುವೆ ರಾಜ್ಯ ಇಬ್ಭಾಗವಾಗುವಾಗ ಭೀಷ್ಮರು ಸುಮ್ಮನಿದ್ದದ್ದು. ರಾಜ್ಯ ಇಬ್ಭಾಗವಾಗುವುದನ್ನು ತಡೆದು, ಕೌರವರು ಮತ್ತು ಪಾಂಡವರನ್ನ ಒಂದು ಮಾಡುವ ಬದಲು ಭೀಷ್ಮರು ಸುಮ್ಮನಿದ್ದರು. ಈ ಸಮಯದಲ್ಲಿ ಅವರು ಮಾತನಾಡಿ, ರಾಜಿ ಮಾಡಿದ್ದರೆ, ಮಹಾಭಾರತ ಯುದ್ಧವಾಗುತ್ತಿರಲಿಲ್ಲ.

- Advertisement -

Latest Posts

Don't Miss