Saturday, July 27, 2024

Latest Posts

ಸಾಲ ಬೇಕೆಂದು ಚಿಕ್ಕಪ್ಪನ ಡೆ*ಡ್ ಬಾಡಿಯನ್ನೇ ಬ್ಯಾಂಕ್‌ಗೆ ತಂದ ಪುಣ್ಯಾತ್‌ಗಿತ್ತಿ: ವೀಡಿಯೋ ವೈರಲ್

- Advertisement -

international News: ಬ್ರೆಜಿಲ್ ದೇಶದ ರಿಯೋ ಡಿ ಜನೈರೋ ಎಂಬಲ್ಲಿ ವಿಚಿತ್ರ ಘಟನೆಯೊಂದು ನಡೆದಿದ್ದು, ಯುವತಿಯೊಬ್ಬಳು ಸಾಲ ಪಡೆಯಲು ಸತ್ತ ಚಿಕ್ಕಪ್ಪನ ಹೆಣವನ್ನೇ ಬ್ಯಾಂಕ್‌ಗೆ ತೆಗೆದುಕೊಂಡು ಬಂದಿದ್ದಾಳೆ.

ಆದರೆ ಅದು ಡೆಡ್ ಬಾಡಿ ಎಂದು ಗೊತ್ತಾಗದಂತೆ, ವ್ಹೀಲ್ ಚೇರ್ ಮೇಲೆ ಕೂರಿಸಿಕೊಂಡು, ಬ್ಯಾಂಕ್‌ಗೆ ಬಂದಿದ್ದಾಳೆ. ಬ್ಯಾಂಕ್ ಸಿಬ್ಬಂದಿಗಳ ಬಳಿ, ನನ್ನ ಚಿಕ್ಕಪ್ಪಂಗೆ ಅನಾರೋಗ್ಯವಿರುವ ಕಾರಣ, ಮಾತನಾಡಲು ಆಗುವುದಿಲ್ಲ ಎಂದಿದ್ದಾಳೆ. ಆದರೆ ಲೋನ್ ಸಿಗಲು ಚಿಕ್ಕಪ್ಪನ ಸಹಿ ಬೇಕಾಗಿದೆ. ಈ ವೇಳೆ ಆಕೆ ಚಿಕ್ಕಪ್ಪನ ಕೈಗೆ ಪೆನ್ ಕೊಟ್ಟಿದ್ದಾಳೆ.

ಚಿಕ್ಕಪ್ಪ ಏನೂ ಸ್ಪಂದಿಸದೇ ಇದ್ದಾಗ, ಬ್ಯಾಂಕ್ ಸಿಬ್ಬಂದಿಗೆ ಡೌಟ್ ಬಂದಿದೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ವಿಚಾರಣೆ ನಡೆಸಿದಾಗ, ಸಾಲ ಪಡೆದುಕೊಳ್ಳುವ ಸಲುವಾಗಿ, ಸತ್ತ ಚಿಕ್ಕಪ್ಪನ ಮೃತದೇಹವನ್ನು ತಂದಿರುವುದಾಗಿ ಮಹಿಳೆ ಒಪ್ಪಿಕೊಂಡಿದ್ದಾಳೆ. ಪೊಲೀಸರು ಮಹಿಳೆಯನ್ನು ಬಂಧಿಸಿ, ಠಾಣೆಗೆ ಕರೆದೊಯ್ದಿದ್ದು, ಚಿಕ್ಕಪ್ಪನ ಮೃತದೇಹವನ್ನು ಚಿತಾಗಾರಕ್ಕೆ ಕರೆದೊಯ್ದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನೇಹಾ-ಫಯಾಜ್ ಫೋಟೋ, ರೀಲ್ಸ್ ವೈರಲ್

ನಟಿ ಹರ್ಷಿಕಾ ಮತ್ತು ಭುವನ್ ಮೇಲೆ ಹಲ್ಲೆ ಯತ್ನ: ನಾವೇನು ಪಾಕಿಸ್ತಾನದಲ್ಲಿದ್ದೇವಾ..? ಎಂದು ಬೇಸರ..

ಇಂಥ ಕೆಲಸಕ್ಕೆ ಎನ್‌ಕೌಂಟರ್ ಕಾನೂನು ಬರಲೇಬೇಕು: ಸಚಿವ ಸಂತೋಷ್ ಲಾಡ್ ಆಗ್ರಹ

- Advertisement -

Latest Posts

Don't Miss