ಇಚ್ಛಾ ಮರಣಿಯಾಗಿದ್ದ ಭೀಷ್ಮ, ಹಲವು ಜೀವನ ಪಾಠಗಳನ್ನು ಕಲಿತಿದ್ದರು. ಹಾಗಾಗಿಯೇ ಅವರು ಕೌರವರು ಮತ್ತು ಪಾಂಡವರಿಗೆ ತಮ್ಮ ಜೀವನಾನುಭವಗಳನ್ನು ಹೇಳುತ್ತಿದ್ದರು. ಅಲ್ಲದೇ ಮಹಾಭಾರತ ಯುದ್ಧ ಕಾಲದಲ್ಲಿ ಶರಶಯ್ಯದ ಮೇಲೆ ಮಲಗಿದ್ದಾಗಲೂ, ಭೀಷ್ಮರು ಕರ್ಣನಿಗೂ ಕೆಲ ವಿಷಯಗಳನ್ನು ಹೇಳಿದ್ದರು. ಹಾಗಾದ್ರೆ ಭೀಷ್ಮ ಪಿತಾಮಹ, ಕರ್ಣನಿಗೆ ಹೇಳಿದ ಸತ್ಯ ಎಂಥದ್ದು ಅಂತಾ ತಿಳಿಯೋಣ ಬನ್ನಿ..
ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 2
ಭೀಷ್ಮ ಶರಶಯ್ಯದ ಮೇಲೆ ಮಲಗಿದ್ದಾಗ, ಕರ್ಣ ಭೀಷ್ಮರ ಬಳಿ ಬಂದು ಮಾತನಾಡಲು ಶುರು ಮಾಡಿದ. ಪಿತಾಮಹ ನೀವು ನನ್ನನ್ನು ಅದೆಷ್ಟು ದ್ವೇಷಿಸುತ್ತಿದ್ದಿರಿ. ಪ್ರತೀ ಸಲವೂ ನನ್ನನ್ನು ಅವಮಾನಿಸುವುದಕ್ಕೆ ಕಾಯುತ್ತಿರುತ್ತಿದ್ದಿರಿ. ಯಾಕೆ ನಾನೇನು ಅಂಥ ಪಾಪ ಮಾಡಿದ್ದೆ..? ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು, ನಾನೆಂದೂ ನಿನ್ನನ್ನು ದ್ವೇಷಿಸಲಿಲ್ಲ. ನಿನ್ನ ಕೆಲ ನಡುವಳಿಕೆಯಿಂದ ನನ್ನ ಮನಸ್ಸಿಗೆ ನೋವಾಗಿರುವುದು ನಿಜ. ಆ ವೇಳೆ ನಿನ್ನನ್ನು ಬೈದಿದ್ದೂ ನಿಜ. ಆದರೆ ನಾನೆಂದೂ ನಿನ್ನನ್ನು ದ್ವೇಷಿಸಲಿಲ್ಲ.
ನೀನು ಕೆಲ ಸತ್ಯಗಳನ್ನು ತಿಳಿಯಬೇಕಿದೆ. ನೀನು ರಾಧೆ ನಂದನನಲ್ಲ ಬದಲಾಗಿ, ಕುಂತಿ ಪುತ್ರ. ಮತ್ತು ನಿನ್ನ ತಂದೆ ಮೀನು ಮಾರುವವ ಸೂತನಲ್ಲ. ಬದಲಾಗಿ ಸೂರ್ಯದೇವ ನಿನ್ನ ತಂದೆ. ಹಾಗಾಗಿ ನಿನ್ನ ಮೇಲೆ ಸೂರ್ಯನ ಕೃಪೆ ಇದೆ. ಕುಂತಿ ಕನ್ಯೆ ಇದ್ದಾಗ, ತನಗೆ ಸಿಕ್ಕ ವರವನ್ನು ಪರೀಕ್ಷಿಸಲು ತನ್ನ ಕಿವಿಯಿಂದ ಮಗುವೊಂದನ್ನ ಪಡೆದಿದ್ದಳು. ಅದೇ ಮಗು ನೀನು. ಹಾಗಾಗಿ ನಿನ್ನನ್ನು ಕರ್ಣನೆಂದು ನಾಮಕರಣ ಮಾಡಲಾಯಿತು ಎನ್ನುತ್ತಾನೆ.
ಲಂಕಾಪತಿ ರಾವಣನ ಪೂರ್ಣವಾಗದ ಆಸೆಗಳಿದು.. ಭಾಗ 1
ಆದರೆ ಕರ್ಣ, ಹೌದು ಪಿತಾಮಹ. ನನ್ನನ್ನು ಹೆತ್ತಿದ್ದು ಕುಂತಿಯೇ ಆದರೂ, ಆಕೆ ನನ್ನನ್ನು ನೀರಿನಲ್ಲಿ ತೇಲಿ ಬಿಟ್ಟಳು. ಆದರೆ ನನ್ನನ್ನು ಸಾಕಿ ಸಲುಹಿದ್ದು, ರಾಧೆ ಅಮ್ಮ. ಹಾಗಾಗಿ ನನಗೆ ರಾಧೆ ಅಮ್ಮನ ಮೇಲೆಯೇ ಹೆಚ್ಚು ಪ್ರೀತಿ ಎನ್ನುತ್ತಾನೆ. ಜೊತೆಗೆ ಅರ್ಜುನನೊಂದಿಗೆ ಯುದ್ಧ ಮಾಡಿ, ಪಾಂಡವರನ್ನು ಸೋಲಿಸಬೇಕು ಎಂದು ಕರ್ಣ ಪಣ ತೊಡುತ್ತಾನೆ. ಆದ್ರೆ ಕುಂತಿ ಕರ್ಣನ ಬಳಿ ಬಂದು, ತನ್ನ ಮಕ್ಕಳಿಗೆ ಜೀವ ಭಿಕ್ಷೆ ಕೊಡು ಎಂದು ಬೇಡಿದಾಗ, ಕರ್ಣ ಯುದ್ಧದಲ್ಲಿ ಸೋಲಬೇಕಾಯಿತು.