Friday, October 17, 2025

Latest Posts

ದೆವ್ವ ಬಿಡಿಸಲು ಫೇಮಸ್ ಅಂತೆ ಈ ಬೇತಾಳ ದೇವಸ್ಥಾನ..

- Advertisement -

Spiritual: ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿದೆ. ಕೆಲವು ವಾಸ್ತುಶಿಲ್ಪಕ್ಕೆ ಪ್ರಸಿದ್ಧವಾಗಿದ್ದರೆ, ಕೆಲವು ತನ್ನ ಚಮತ್ಕಾರಗಳಿಗೆ ಫೇಮಸ್ ಆಗಿದೆ. ಇಂದು ನಾವು ದೆವ್ವ ಬಿಡಿಸಲು ಫೇಮಸ್ ಆಗಿರುವ ಬೇತಾಳ ದೇವಸ್ಥಾನದ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಓರಿಸ್ಸಾದ ಭುವನೇಶ್ವರದಲ್ಲಿರುವ ಬೇತಾಳ ದೇವಸ್ಥಾನ ದೆವ್ವ ಬಿಡಿಸಲು ಫೇಮಸ್. ಇಲ್ಲಿ ಚಾಮುಂಡಾ ದೇವಿಯನ್ನು ಪೂಜಿಸುತ್ತಿದ್ದು, ಈಕೆಯ ಕೃಪೆಯಿಂದಲೇ ಇಲ್ಲಿ ದೆವ್ವ ಬಿಡಿಸಲಾಗುತ್ತದೆ. ಇಲ್ಲಿ ಮಂತ್ರವಾದಿಗಳು, ತಾಂತ್ರಿಕ ಪ್ರಕ್ರಿಯೆ ಮಾಡುವವರು ಇರುತ್ತಾರೆ. ಇವರು ಈ ರೀತಿ ತಾಂತ್ರಿಕ ಪ್ರಕ್ರಿಯೆ ಮಾಡಿಯೇ, ದೆವ್ವಗಳನ್ನು ಬಿಡಿಸೋದು. ಈ ದೇವಾಲಯದ ಒಳಭಾಗದ ವಾತಾವರಣ ಭಯಭೀತವಾಗಿರುತ್ತದೆ. ಹಾಗಾಗಿ ಸಾಮಾನ್ಯ ಜನ ಇಲ್ಲಿ ಬರುವುದಿಲ್ಲ. ಭೂತ-ಪ್ರೇತದ ಭಯವಿದ್ದವರು, ಕಾಟವಿದ್ದವರಷ್ಟೇ ಬರುತ್ತಾರೆ.

ಚಾಮುಂಡಾ ದೇವಿಯು ದುರ್ಗಾದೇವಿಯ ತಾಂತ್ರಿಕ ಅವತಾರವಾಗಿ ಇಲ್ಲಿ ಪೂಜಿಸಲ್ಪಡುತ್ತಾಳೆ. ವೈತಾಲ್ ದೆಲ್, ಬೈತಾಲಾ ದೇವುಲಾ ಎಂದು ಕೂಡ ಈ ದೇವಸ್ಥಾನವನ್ನು ಕರೆಯಲಾಗುತ್ತದೆ. ರಾಣಿ ತ್ರಿಭುವನಾ ಮಹಾದೇವಿ ಈ ದೇವಸ್ಥಾನವನ್ನು ನಿರ್ಮಿಸಿದರು. ಇವರು ತಮ್ಮ ಪತಿ ರಾಜ ಶಾಂತಿಕರ ಮರಣದ ಬಳಿಕ, ಮೊದಲ ಮಹಿಳಾ ಆಡಳಿಗಾರ್ತಿಯಾದವರು.

ಇಲ್ಲಿ ಮೂರು ಗೋಪುರಗಳಿದ್ದು, ಇವು ಮಹಾಲಕ್ಷ್ಮೀ, ಮಹಾಸರಸ್ವತಿ, ಮಹಾಕಾಳಿಯನ್ನು ಪ್ರತಿನಿಧಿಸುತ್ತದೆ. ಇನ್ನು ಇಲ್ಲಿರುವ ಚಾಮುಡೇದೇವಿ ವಿಗ್ರಹವಂತೂ ಭಯಂಕರವಾಗಿದೆ. ದೇವಿಯ ಕುತ್ತಿಗೆಗೆ ರುಂಡಗಳ ಸರಮಾಲೆ ಮಾಡಿ ಹಾಕಲಾಗಿದೆ. ಈಕೆ ಶವದ ಮೇಲೆ ಕತ್ತಿ, ಗುರಾಣಿ, ತ್ರಿಶೂಲ, ಬಿಲ್ಲು, ಬಾಣ, ಹಾವುಗಳನ್ನು ಹಿಡಿದು ನಿಂತಿದ್ದಾಳೆ. ಅಕ್ಕ ಪಕ್ಕ ಗೂಬೆ ಮತ್ತು ನರಿಯ ಮೂರ್ತಿಗಳಿದೆ.

ಹಿಂದೂಗಳು ಚಾರ್ ಧಾಮ್ ಯಾತ್ರೆ ಮಾಡಲೇಬೇಕು ಅಂತಾ ಹೇಳೋದು ಯಾಕೆ..?

ಮನೆಯಲ್ಲಿ ನಕಾರಾತ್ಮಕತೆ ಇದ್ದರೆ ಸಿಗುತ್ತದೆ ಈ ಸೂಚನೆ..

ಈ ಪಾಪ ಮಾಡಿದ್ರೆ, ಪ್ರಾಣಿಗಳ ಯೋನಿಯಲ್ಲಿ ಜನ್ಮ ಸಿಗುತ್ತಂತೆ..

- Advertisement -

Latest Posts

Don't Miss