Hubli News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಮಾಧ್ಯಮದ ಜೊತೆ ಮಾತನಾಡಿದ್ದು, ಗ್ಯಾರಂಟಿ ಯೋಜನೆ ಅಂತ ಫ್ರೀ ಕೊಡುತ್ತಾರೆ. ಮತ್ತೊಂದು ಕಡೆ ಸಾಲ ತೆಗೆದುಕೊಳ್ಳತ್ತಾರೆ. ಈ ಸಾಲ ಮತ್ತು ಬಡ್ಡಿಯಲ್ಲಿ ಸಾರಿಗೆ ಸಂಸ್ಥಗಳು ನಡೆಯುತ್ತಿವೆ. ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ. ಸರ್ಕಾರದ ನಿರ್ಲಕ್ಷ್ಯ ಮತ್ತು ದುರಾಡಳಿತ ಇದಕ್ಕೆ ಕಾರಣ. ಪ್ರಯಾಣಿಕರಿಗೆ ಪೆಟ್ಟು ನೀಡುವ ಕಾರ್ಯವಾಗುತ್ತಿದೆ.
ರಾಜ್ಯದಲ್ಲಿ ಅರಾಜ್ಯಕತೆ ಸೃಷ್ಟಿಯಾಗಿದೆ ಎಂದು ಶೆಟ್ಟರ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಆಡಳಿತ ಬಿಗಿ ಕಳೆದುಕೊಂಡಿದ್ದಾರೆ. ಇದರಿಂದಾಗಿ ಈ ರೀತಿಯ ಘಟನೆ ನಡೆಯುತ್ತಿದೆ.
ಇದಕ್ಕೆ ನನ್ನ ವಿರೋಧ ಇದೆ. ರಾಜ್ಯದಲ್ಲಿ ಭ್ರಷ್ಟಾಚಾರ ಮೀತಿ ಮೀರಿದೆ. ಸಿದ್ದರಾಮಯ್ಯ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೆವೆ ಎಂದಿದ್ದರು. ಆದರೆ ಇವತ್ತು ಸಚಿವ ಮತ್ತು ಅಧಿಕಾರಿಗಳ ಭ್ರಷ್ಟಾಚಾರದ ಮಿತಿಯಲ್ಲಿ ಕೆಲಸ ಮಾಡಿ ಅಂತಾರೆ. ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನಸ್ಥಿತಿ ಸಿದ್ದರಾಮಯ್ಯ ಇಲ್ಲ. ಭ್ರಷ್ಟಾಚಾರದಿಂದ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಬೆಳಗಾವಿ ತಹಶೀಲ್ದಾರ್ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಎಒನ್ ಆರೋಪಿ ಮತ್ತೆ ಕೆಲಸಕ್ಕೆ ಹಾಜರು ಆಗಿದ್ದಾನೆ. ಇದು ದಪ್ಪ ಚರ್ಮದ ಸರ್ಕಾರ. ಪ್ರಿಯಾಂಕ ಖರ್ಗೆ ರಾಜಿನಾಮೆ ಕೊಟ್ಟು ತನಿಖೆ ಎದುರಿಸಲಿ.. ಸಿಬಿಐ ತನಿಖೆ ಆಗಬೇಕು ಎಂದು ಶೆಟ್ಟರ್ ಆಗ್ರಹಿಸಿದ್ದಾರೆ.
ಬಸ್ ಟಿಕೆಟ್ ದರ ಏರಿಕೆಗೆ ಶೆಟ್ಟರ್ ಕಿಡಿಕಾರಿದ್ದು, ಸಿದ್ದರಾಮಯ್ಯ ಅವರಿಗೆ ಯಾಕೆ ಈ ಆಸೆ ಹುಟ್ಟಿದಿಯೋ ಗೊತ್ತಿಲ್ಲ. ಪ್ರೀತಿ, ವಿಶ್ವಾಸದಿಂದ ರಸ್ತೆಗೆ ಹೆಸರು ಇಡಬೇಕು. ಒಬ್ಬ ಸಿಎಂ ಹೆಸರನ್ನು ರಸ್ತೆಗಿಡಬೇಕು ಅಂದಾಗ ವಿರೋಧ ಬರಲೇ ಬಾರದು. ಈ ರೀತಿ ವಿವಾದ ಹುಟ್ಟಿದಾಗ ಸಿಎಂ ಸಿದ್ದರಾಮಯ್ಯ ಬೇಡ ಅನ್ನಬೇಕಿತ್ತು.
ಮೈಸೂರು ಅಭಿವೃದ್ಧಿ ಪಡಿಸಿದ್ದು ಮಹಾರಾಜರು. ಅವರ ಹೆಸರಿನ ರಸ್ತೆ ಬದಲಾವಣೆ ಮಾಡೋದು ಸರಿಯಲ್ಲ.
ಸಿದ್ದರಾಮಯ್ಯನ ಮೊಂಡುತನ ನಡೆಯುತ್ತಿದೆ. ಇದರಿಂದಾಗಿ ಇಂತಹ ವಿವಾದಗಳು ಹುಟ್ಟಿಕೊಂಡಿವೆ.
ಬಿಜೆಪಿಯಲ್ಲಿ ಬಣ ವಿಚಾರಕ್ಕೆ ರಾಜ್ಯದಲ್ಲಿ ಎಲ್ಲಾ ಬೆಳವಣಿಗೆ ಹೈಕಮಾಂಡ್ ಗೆ ಗೊತ್ತಿದೆ ಅದನ್ನು ವರಿಷ್ಠ ಚಿಂತನೆ ಮಾಡತ್ತಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಮ್ಮ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರರ ಅವರು ಎಲ್ಲಾ ನಿಭಾಯಿಸುತ್ತಾರೆ. ಸಮಸ್ಯೆ ಇಲ್ಲದ ಪಾರ್ಟಿಗಳು ಇಲ್ಲ. ಎಲ್ಲಾ ಪಕ್ಷದಲ್ಲಿ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರ್ತವೆ. ಬೇರೆ ಬೇರೆ ಪಕ್ಷದವರು ಸಹ ಬಂದಿದ್ದಾರೆ, ಬಿಜೆಪಿ ಬೃಹತ್ ಪ್ರಮಾಣದಲ್ಲಿ ಬೆಳೆದಿದೆ. ದೊಡ್ಡ ಪಕ್ಷವಾಗಿ ಬಿಜೆಪಿ ಬೆಳೆದಿದೆ ಹೀಗಾಗಿ ಸಣ್ಣಪುಟ್ಟ ಸಮಸ್ಯೆ ಇರ್ತವೆ. ಧಾರವಾಡ ಮತ್ತು ಹುಬ್ಬಳ್ಳಿ ಮಹಾನಗರ ಪಾಲಿಕೆ ವಿಭಜನೆಗೆ ನನ್ನ ಸ್ವಾಗತ ಇದೆ. ನಾನು ಕೂಡ ಪಾಲಿಕೆ ವಿಭಜನೆಗೆ ಧ್ವನಿ ಎತ್ತಿ, ಪತ್ರ ಬರೆದಿದ್ದೆ. ಅಲ್ಲಿನ ಜನರ ಬಹಳದಿನ ಬೇಡಿಕೆ ಇತ್ತು. ವಿಭಜನೆಯಿಂದ ಎರಡು ನಗರಗಳು ಅಭಿವೃದ್ಧಿಯಾಗುವ ಭರವಸೆಯಿದೆ ಎಂದು ಶೆಟ್ಟರ್ ಹೇಳಿದ್ದಾರೆ.