Friday, July 25, 2025

Latest Posts

ಥೈರಾಯ್ಡ್ ಸಮಸ್ಯೆ ಬರಬಾರದು ಅಂದ್ರೆ, ಈ ಟಿಪ್ಸ್ ಫಾಲೋ ಮಾಡಿ..

- Advertisement -

ಥೈರಾಯ್ಡ್ ಬಂದರೆ, ಬರೀ ಆರೋಗ್ಯವಷ್ಟೇ ಹಾಳಲ್ಲ. ಜೊತೆಗೆ ಸೌಂದರ್ಯ ಕೂಡ ಹಾಳಾಗತ್ತೆ. ಹಾಗಾಗಿ ಥೈರಾಯ್ಡ್ ಬರದ ರೀತಿ ನೀವು ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನೀಡಲಿದ್ದೇವೆ.

ಮೊದಲನೇಯ ಟಿಪ್ಸ್, ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯುವುದನ್ನ ಬಿಟ್ಟುಬಿಡಿ. ಕೆಲವರಿಗೆ ಬೆಳಿಗ್ಗೆ ಎದ್ದ ತಕ್ಷಣ, ಟೀ ಅಥವಾ ಕಾಫಿ ಕುಡಿಯಲೇಬೇಕು. ಇಲ್ಲದಿದ್ದಲ್ಲಿ, ಅವರಿಗೆ ಸಮಾಧಾನವಾಗುವುದಿಲ್ಲ. ಕೆಲವರಿಗೆ ಮಲ ವಿಸರ್ಜನೆಯಾಗಬೇಕು ಅಂದ್ರೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ ಕುಡಿಯಲೇಬೇಕು. ಅದು ಅವರ ಭ್ರಮೆ. ನಿಮಗೆ ಮಲ ವಿಸರ್ಜನೆ ಸರಿಯಾಗಿ ಆಗಬೇಕು ಅಂದ್ರೆ, ಒಂದು ಗ್ಲಾಸ್ ಬೆಚ್ಚಗಿನ ನೀರು ಕುಡಿದರೆ ಸಾಕು. ಅದಕ್ಕಾಗಿ ಟೀ, ಕಾಫೀನೇ ಕುಡಿಯಬೇಕು ಅಂತೆನಿಲ್ಲ. ಈ ಚಟ, ಹಲವು ರೋಗ ಬರಲು ದಾರಿ ಮಾಡಿ ಕೊಟ್ಟ ಹಾಗೆ. ಇದರಿಂದಲೂ ಥೈರಾಯ್ಡ್ ಬರತ್ತೆ. ಹಾಗಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟೀ, ಕಾಫಿ, ಕುಡಿಯಬೇಡಿ.

ಎರಡನೇಯ ಟಿಪ್ಸ್, ಯಾವುದೇ ಕಾರಣಕ್ಕೂ ಐಸ್ ವಾಟರ್, ಅಥವಾ ಫ್ರಿಜ್‌ನಲ್ಲಿ ಇರಿಸಿದ ನೀರನ್ನ ಕುಡಿಯಬೇಡಿ. ಬೇಸಿಗೆಯಲ್ಲಿ ಹೆಚ್ಚಿನವರಿಗೆ ಐಸ್ ವಾಟರ್ ಕುಡಿಯಬೇಕು ಅನ್ನಿಸುತ್ತೆ. ಹಾಗಾಗಿ ಅವರು ಫ್ರಿಜ್‌ನಲ್ಲಿ ಯಾವಾಗಲೂ ನೀರಿನ ಬಾಟಲಿ ಇಟ್ಟಿರುತ್ತಾರೆ. ಆದ್ರೆ ಬೇಸಿಗೆ ಗಾಲವಾಗಲಿ, ಅಥವಾ ಯಾವುದೇ ಕಾಲವಾಗಲಿ, ಯಾವುದೇ ಕಾರಣಕ್ಕೂ ರೆಫ್ರಿಜರೇಟರ್‌ನಲ್ಲಿಟ್ಟ ನೀರು ಕುಡಿಯಬೇಡಿ. ಇದರಿಂದ ನಿಮ್ಮ ರಕ್ತ ಸಂಚಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಹಲವು ರೋಗಗಳು ಬರುತ್ತದೆ. ಬರೀ ಐಸ್ ವಾಟರ್ ಅಷ್ಟೇ ಅಲ್ಲ. ಕೂಲ್ ಡ್ರಿಂಕ್ಸ್ ಕೂಡ ಆರೋಗ್ಯಕ್ಕೆ ತುಂಬಾ ಡೇಂಜರ್‌.

ಮೂರನೇಯ ಟಿಪ್ಸ್, ನೀವು ಥೈರಾಯ್ಡ್ ಪೇಶಂಟ್ ಆಗಿದ್ರೆ, ಸೋಯಾ ಪ್ರಾಡಕ್ಟ್ ಬಳಸುವುದನ್ನ ನಿಲ್ಲಿಸಿಬಿಡಿ. ಆರೋಗ್ಯವಂತರಿಗೆ ಸೋಯಾ ಪ್ರಾಡಕ್ಟ್ ಉತ್ತಮ. ಆದ್ರೆ ಥೈರಾಯ್ಡ್ ಇದ್ದವರಿಗಲ್ಲ. ಇವರು ಟೋಫು, ಸೋಯಾ ಬಿನ್, ಸೋಯಾ ಸಾಸ್, ಸೋಯಾ ಬಾಲ್ಸ್, ಇತ್ಯಾದಿ ಸೇವಿಸಬಾರದು.  ಅಲ್ಲದೇ ಕ್ಯಾಬೇಜ್, ಹೂಕೋಸು, ಬ್ರೋಕೋಲಿಯನ್ನ ಕೂಡ ಸೇವಿಸುವಂತಿಲ್ಲ. ಇದರಿಂದ ಆಯೋಡಿನ್ ಕೊರತೆ ಉಂಟಾಗುತ್ತದೆ. ಹೀಗಾದಾಗಲೇ ಥೈರಾಯ್ಡ್ ಬರುತ್ತದೆ.

ನಾಲ್ಕನೇಯ ಟಿಪ್ಸ್, ಟೆನ್ಶನ್ ತೆಗೆದುಕೊಳ್ಳಬೇಡಿ. ಎಲ್ಲರಿಗೂ ಒಂದಲ್ಲ ಒಂದು ವಿಷಯಕ್ಕೆ ಸಂಬಂಧಪಟ್ಟಂತೆ ಟೆನ್ಶನ್ ಇರತ್ತೆ. ಆದ್ರೆ ಟೆನ್ಶನ್ ಅನ್ನೋದು ಸ್ಲೋ ಪಾಯ್ಸನ್ ಇದ್ದ ಹಾಗೆ. ಇದು ಮನುಷ್ಯನ ಆರೋಗ್ಯವನ್ನ ಹಾಳು ಮಾಡತ್ತೆ. ಹಾಗಾಗಿ ಟೆನ್ಶನ್ ತೆಗೆದುಕೊಳ್ಳುವುದನ್ನ ಕಡಿಮೆ ಮಾಡಿ. ಇದು ಥೈರಾಯ್ಡ್ ಸಮಸ್ಯೆ ಮೇಲೆಯೂ ಪರಿಣಾಮ ಬೀರತ್ತೆ.

ಐದನೇಯ ಟಿಪ್ಸ್, ಬೇಗ ಮಲಗಿ ಬೇಗ ಏಳಿ. ಇಂದಿನ ಕಾಲದಲ್ಲಿ ಹಲವರು ಮೊಬೈಲ್ ನೋಡುತ್ತ ಮಲಗುತ್ತಾರೆ. ಇದರಿಂದ ನಿದ್ದೆ ಮುಂದೆ ಮುಂದೆ ಹೋಗತ್ತೆ. ಹಾಗಾಗಿ ನಿದ್ದೆ ಮಾಡುವ ಒಂದು ಗಂಟೆ ಮುನ್ನ ಮೊಬೈಲ್ ಮತ್ತು ಲ್ಯಾಪ್‌ಟಾಪನ್ನ ನಿಮ್ಮಿಂದ ದೂರವಿಡಿ. ಇದರಿಂದ ಬೇಗ ನಿದ್ದೆ ಬರತ್ತೆ. ರಾತ್ರಿ ಲೇಟ್ ಆಗಿ ಮಲಗಿ, ಲೇಟ್ ಆಗಿ ಏಳುವುದು ಕೂಡ ಥೈರಾಯ್ಡ್ ಸಮಸ್ಯೆ ಮೇಲೆ ಕೆಟ್ಟ ಪರಿಣಾಮ ಬೀರತ್ತೆ. ಹಾಗಾಗಿ ಬೇಗ ಮಲಗಿ, ಬೇಗ ಏಳಿ.

ಬುದ್ಧಿಮಾಂದ್ಯ ಮತ್ತು ವಿಕಲಾಂಗ ಮಕ್ಕಳು ಹುಟ್ಟೋದಕ್ಕೆ ಕಾರಣವೇನು..?

ಜಿಮ್ ಹೋಗುವುದರಿಂದ ಆಗುವ ನಷ್ಟವೇನು ಗೊತ್ತಾ..?

ನಿಮ್ಮ ಕಿಡ್ನಿ ಕಿತ್ತುಕೊಳ್ಳುತ್ತೆ ಇಂಥ ಕೂಲ್ ಡ್ರಿಂಕ್ಸ್..!

- Advertisement -

Latest Posts

Don't Miss