Tuesday, October 22, 2024

Latest Posts

ವಯಸ್ಸು 35 ದಾಟಿದ ಬಳಿಕ ಗರ್ಭಿಣಿಯಾಗುವವರಿಗೆ ಕಿವಿ ಮಾತು..

- Advertisement -

ಹೆಣ್ಣು ಮಕ್ಕಳಿಗೆ ವಯಸ್ಸು 30 ದಾಟುವುದರೊಳಗೆ ಮಕ್ಕಳಾಗಿಬಿಡಬೇಕು ಅಂತಾ ಹಿರಿಯರು ಕಿವಿ ಮಾತು ಹೇಳುತ್ತಾರೆ. ಯಾಕಂದ್ರೆ 30 ದಾಟಿದ ಬಳಿಕ, ದೇಹದಲ್ಲಿ ಹೆಚ್ಚು ಶಕ್ತಿ ಇರುವುದಿಲ್ಲ. ಆ ವೇಳೆಯಲ್ಲಿ ಹೆರುವ ಮಕ್ಕಳು, ಅಷ್ಟು ಶಕ್ತಿವಂತರು, ಬುದ್ಧಿವಂತರು ಆಗಿರುವುದಿಲ್ಲ. ಹಾಗಾಗಿ 30 ದಾಟುವುದರೊಳಗೆ ಮದುವೆಯಾಗಿ, ಮಕ್ಕಳು ಮಾಡಿಕೊಳ್ಳಬೇಕು ಅಂತಾ ಹೇಳೋದು. ಆದ್ರೆ 30 ಅಥವಾ 35 ವರ್ಷದ ಬಳಿಕ ನೀವು ಗರ್ಭ ಧರಿಸಬೇಕು ಎಂದಲ್ಲಿ, ಕೆಲವು ಟಿಪ್ಸ್ ಫಾಲೋ ಮಾಡಬೇಕು. ಹಾಗಾದ್ರೆ ಆ ಟಿಪ್ಸ್ ಏನು ಅಂತಾ ತಿಳಿಯೋಣ ಬನ್ನಿ..

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ವಯಸ್ಸು 35 ದಾಟಿದ ಮೇಲೆ ಹಲವಾರು ಜವಾಬ್ದಾರಿಗಳು ಇರುತ್ತದೆ. ಅವೆಲ್ಲವನ್ನೂ ಸುಧಾರಿಸಿಕೊಂಡು ಹೋಗುವಾಗ, ನಿಮಗೆ ಸರಿಯಾಗಿ ನಿದ್ದೆ ಇರುವುದಿಲ್ಲ. ಆಹಾರ ತೆಗೆದುಕೊಳ್ಳಲು ಸಮಯವಿರುವುದಿಲ್ಲ. ಹಾಗಾಗಿ ಈ ಸಮಯದಲ್ಲಿ ನೀವು ಗರ್ಭಾವಸ್ಥೆಯಲ್ಲಿದ್ದರೆ, ರಾತ್ರಿ 8 ಗಂಟೆಗಳ ಕಾಲ ಚೆನ್ನಾಗಿ ನಿದ್ರಿಸಿ. ಮಧ್ಯಾಹ್ನ 2 ಗಂಟೆ ನಿದ್ರಿಸಿ. ಕೆಲವು ವಿಜ್ಞಾನಿಗಳ ಪ್ರಕಾರ, ಗರ್ಭಿಣಿಯರು ನಿದ್ದೆಗೆಡುವುದರಿಂದ ಮಗುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ.

ಆರೋಗ್ಯಕರವಾದ ಆಹಾರವನ್ನೇ ತಿನ್ನಬೇಕು. ಗರ್ಭಿಣಿ, ಬಯಕೆ ಇರುತ್ತದೆ ಅನ್ನೋ ಕಾರಣಕ್ಕೆ ಸಿಕ್ಕ ಸಿಕ್ಕ ಆಹಾರಗಳನ್ನ ತಿಂದ್ರೆ, ಅದರ ಪರಿಣಾಮ ನಿಮ್ಮ ಮಗುವಿನ ಮೇಲೆ ಬೀಳುತ್ತದೆ. ಹಾಗಾಗಿ ಉತ್ತಮ, ಆರೋಗ್ಯಕರವಾದ ಆಹಾರವನ್ನೇ ತಿನ್ನಬೇಕು. ಡ್ರೈಫ್ರೂಟ್ಸ್, ತರಕಾರಿ, ಹಣ್ಣು, ಹಾಲು, ಮೊಸರು, ಮೊಳಕೆ ಕಾಳು, ಸೊಪ್ಪು ಇವೆಲ್ಲವೂ ನಿಮ್ಮ ಆಹಾರದಲ್ಲಿರಬೇಕು. ಜೊತೆಗೆ ಎಳನೀರು, ಮಜ್ಜಿಗೆ, ಹಣ್ಣಿನ ರಸ ಸೇವಿಸುವುದನ್ನ ಮರಿಯಬೇಡಿ.

ಮೇಥಿ ಮಟರ್ ಮಲಾಯ್ ರೆಸಿಪಿ..

ಇದರ ಜೊತೆಗೆ ಸರಿಯಾದ ರೀತಿಯಲ್ಲಿ ಯೋಗಾ ಮಾಡಬೇಕು. ಬೇಕಾದ್ದಲ್ಲಿ ನೀವು ಯೋಗಾ ಟೀಚರ್‌ ಬಳಿಯೇ ಯೋಗಾ ಕಲಿತುಕೊಳ್ಳಿ. ಕೆಲವರು ಯೂಟ್ಯೂಬ್ ನೋಡಿ ಯೋಗ ಮಾಡುತ್ತಾರೆ. ಎಷ್ಟೋ ಸಂದರ್ಭದಲ್ಲಿ ಸರಿಯಾದ ರೀತಿಯಲ್ಲಿ ಯೋಗ ಮಾಡದೇ, ಆರೋಗ್ಯಕ್ಕೆ ಹಾನಿ ಮಾಡಿಕೊಂಡವರಿದ್ದಾರೆ. ಹಾಗಾಗಿ ಯೋಗ ಮಾಡುವಾಗ, ಸರಿಯಾದ ರೀತಿಯಲ್ಲೇ ಮಾಡಿ. ಜೊತೆಗೆ ವಾಕಿಂಗ್ ಮಾಡುವುದನ್ನ ಮರಿಯಬೇಡಿ.

- Advertisement -

Latest Posts

Don't Miss