Tuesday, May 21, 2024

Latest Posts

ಧ್ರುವ ನಕ್ಷತ್ರದ ಹಿಂದಿರುವ ರಹಸ್ಯವೇನು ಗೊತ್ತಾ..? ಓರ್ವ ಬಾಲಕ ಧ್ರುವ ನಕ್ಷತ್ರವಾಗಿದ್ದು ಹೇಗೆ..?

- Advertisement -

ನಕ್ಷತ್ರಗಳಲ್ಲಿ ಕೆಲ ನಕ್ಷತ್ರಗಳು ತುಂಬಾ ಪ್ರಸಿದ್ಧವಾದ ನಕ್ಷತ್ರಗಳಾಗಿದೆ. ಯಾಕಂದ್ರೆ ಆ ನಕ್ಷತ್ರಗಳ ಹಿಂದೆ ಅಂಥದ್ದೊಂದು ಕಥೆ ಇದೆ. ಉದಾಹರಣೆಗೆ ಮದುವೆಯಾದಾಗ, ಪತಿ ಪತ್ನಿಗೆ ಅರುಂಧತಿ ನಕ್ಷತ್ರವನ್ನ ತೋರಿಸುತ್ತಾನೆ. ಯಾಕಂದ್ರೆ ಪತಿವೃತೆಯಾದ ಅರುಂಧತಿ, ನಕ್ಷತ್ರವಾಗಿರುತ್ತಾಳೆ. ಆಕೆಯ ನಕ್ಷತ್ರವನ್ನ ನೋಡಿದ್ರೆ, ತಮ್ಮ ದಾಂಪತ್ಯ ಜೀವನ ಕೂಡ ಸುಖಕರವಾಗಿರುತ್ತದೆ ಅನ್ನೋ ನಂಬಿಕೆ ಇದೆ. ಅದೇ ರೀತಿ ಧ್ರುವ ನಕ್ಷತ್ರದ ಹಿಂದೆಯೂ ಒಂದು ಕಥೆ ಇದೆ. ಓರ್ವ ಬಾಲಕ ಧ್ರುವ ನಕ್ಷತ್ರವಾದ ಕಥೆ ಇದು. ಈ ಕಥೆಯ ಬಗ್ಗೆ ತಿಳಿಯೋಣ ಬನ್ನಿ..

ಸ್ವಯಂಉದ್ಭವವಾದ ಮನು ಮತ್ತು ಶತರೂಪಾ ದಂಪತಿಗೆ ಇಬ್ಬರು ಪುತ್ರರಿದ್ದರು. ಪ್ರಿಯವತ ಮತ್ತು ಉತ್ತಾನಪಾದ. ಉತ್ತಾನಪಾದನಿಗೆ ಇಬ್ಬರು ಪತ್ನಿಯರಿದ್ದರು. ಸುನಿತಿ ಮತ್ತು ಸುರುಚಿ. ಸುನಿತಿಯ ಮಗ ಧ್ರುವ ಮತ್ತು ಸುರುಚಿಯ ಪುತ್ರ ಉತ್ತಮನಾಮ. ಉತ್ತಾನಪಾದನಿಗೆ ಎರಡನೇಯ ಪತ್ನಿ ಸುರುಚಿಯ ಮೇಲೆ ಅಪಾರ ಪ್ರೀತಿ ಇತ್ತು. ಹಾಗಾಗಿ ಅವನು ಉತ್ತಮನಾಮನನ್ನು ಹೆಚ್ಚು ಪ್ರೀತಿಸುತ್ತಿದ್ದ.

ಭೀಮನು ಹೇಗೆ ಇಷ್ಟು ಬಲಶಾಲಿಯಾದ..?

ಒಮ್ಮೆ ಧ್ರುವ ತನ್ನ ಅಪ್ಪ ಉತ್ತಾನಪಾದನನ್ನು ಅಪ್ಪಿಕೊಂಡು ಕುಳಿತಿದ್ದ. ಆಗ ಬಂದ ಸರುಚಿ, ಧ್ರುವನನ್ನು ತನ್ನ ಪತಿಯ ಹತ್ತಿರದಿಂದ ಎಳೆದು ದೂರ ನಿಲ್ಲಿಸಿದಳು. ಮತ್ತು ಬೈದಳು. ನನ್ನ ಪತಿಯ ಮಡಿಲಲ್ಲಿ ನನ್ನ ಮಗನಷ್ಟೇ ಕುಳಿತುಕೊಳ್ಳಬೇಕು, ನೀನಲ್ಲವೆಂದು ಗದರಿದಳು. ಅಲ್ಲೇ ಇದ್ದ ಉತ್ತಾನಪಾದ ಏನೂ ಹೇಳದೇ ಸುಮ್ಮನಿದ್ದ. ಇದನ್ನು ಕಂಡು ಧ್ರುವನಿಗೆ ಬೇಸರವಾಯಿತು.

ಅವನು ಅಮ್ಮನ ಬಳಿ ಹೋಗಿ, ನಡೆದ ಘಟನೆ ವಿವರಿಸಿದ. ಅದಕ್ಕೆ ಸುನಿತಿ, ಅಪ್ಪನಿಗೆ ನಮಗಿಂತ ಹೆಚ್ಚು ಅವರ ಮೇಲೆಯೇ ಪ್ರೀತಿ ಇದೆ. ಹಾಗಾಗಿ ಚಿಕ್ಕಮ್ಮ ನಿನ್ನನ್ನು ಬೈದರೂ ಕೂಡ, ಅವರೇನೂ ಹೇಳಲಿಲ್ಲ ಎನ್ನುತ್ತಾಳೆ. ಅದಕ್ಕೆ ಧ್ರುವ ಹಾಗಾದರೆ ನಾವು ನಮ್ಮ ಮನಶಾಂತಿಗಾಗಿ, ಖುಷಿಗಾಗಿ ಏನು ಮಾಡಬೇಕು ಎಂದು ಕೇಳುತ್ತಾನೆ.. ಅದಕ್ಕೆ ಸುನಿತಿ, ನಾವು ದೇವರ ಧ್ಯಾನ ಮಾಡಬೇಕು. ಇದರಿಂದಲೇ ನಮ್ಮ ಮನಸ್ಸಿಗೆ ಸುಖ ಶಾಂತಿ ನೆಮ್ಮದಿ ಸಿಗುತ್ತದೆ ಎನ್ನುತ್ತಾಳೆ.

ಹೆಣ್ಣಿನಲ್ಲಿ ಈ 4 ಗುಣಗಳಿದ್ದರೆ, ಆಕೆಯ ಜೀವನ ಅತ್ಯುತ್ತಮವಾಗಿರತ್ತೆ..

ಅವನು ನೆಮ್ಮದಿಯನ್ನ ಅರಸಿ, ಧ್ಯಾನ ಮಾಡಲು ಕಾಡಿಗೆ ಹೋಗುತ್ತಾನೆ. ಮತ್ತು ಒಂಟಿಗಾಲಿನಲ್ಲಿ ನಿಂತು ವಿಷ್ಣುವಿನ ಧ್ಯಾನ ಮಾಡುತ್ತಾನೆ. ಧ್ರುವನ ಭಕ್ತಿಗೆ ಮೆಚ್ಚಿನ ವಿಷ್ಣು, ಪ್ರತ್ಯಕ್ಷನಾಗಿ ವರ ನೀಡುತ್ತಾನೆ. ನಿನ್ನ ಭಕ್ತಿಗೆ ನಾನು ಮೆಚ್ಚಿದ್ದೇನೆ. ಹಾಗಾಗಿ ನಿನಗೆ ವಿಶಿಷ್ಟವಾದ ಲೋಕವನ್ನ ಕೊಡುತ್ತೇನೆ. ಈ ಲೋಕವೆಂದೂ ಕೊನೆಗೊಳ್ಳುವುದಿಲ್ಲ.

ಇಂದಿನಿಂದ ನೀನು ನಕ್ಷತ್ರವಾಗಿ ಕಂಗೊಳಿಸು. ಇಂದಿನಿಂದ ಕೊನೆಯವರೆಗೂ ನೀವು ಧ್ರುವ ನಕ್ಷತ್ರವೆಂದು ಪ್ರಸಿದ್ಧನಾಗು ಎಂದು ಹೇಳಿ ವಿಷ್ಣು ಧ್ರುವನಿಗೆ ವರ ನೀಡುತ್ತಾನೆ. ಹೀಗೆ ಧ್ರುವ ನಕ್ಷತ್ರವಾಗಿ ಕಂಗೊಳಿಸುತ್ತಾನೆ. ಸೌರ ಮಂಡಲದಲ್ಲಿ ಹೆಚ್ಚು ಹೊಳೆಯುವ ನಕ್ಷತ್ರವನ್ನು ಧ್ರುವ ನಕ್ಷತ್ರವೆಂದು ಹೇಳಲಾಗುತ್ತದೆ.

- Advertisement -

Latest Posts

Don't Miss