Health Tips: ಇಂದಿನ ಕಾಲದವರ ಆರೋಗ್ಯ ಸಮಸ್ಯೆಗಳಲ್ಲಿ ಬೊಜ್ಜು ಅನ್ನೋದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಇದಕ್ಕಾಗಿ, ಜಿಮ್, ಡಯಟ್ ಎಲ್ಲವನ್ನೂ ಮಾಡಲಾಗುತ್ತದೆ. ಆದರೂ ಕೆಲವರ ಬೊಜ್ಜು ಕರಗುವುದಿಲ್ಲ. ಇದಕ್ಕಾಗಿ ಡಾಕ್ಟರ್ ಸಂದೀಪ್ ಶರ್ಮಾ ಸರಳ ಉಪಾಯ ನೀಡಿದ್ದಾರೆ.
ದೇಹದಲ್ಲಿ ಕೆಟ್ಟ ಕಾಲೆಸ್ಟ್ರಾಲ್ ಇರುವ ಕಾರಣಕ್ಕೆ, ಬೊಜ್ಜು ಬೆಳೆಯುತ್ತದೆ. ಜಂಕ್ ಫುಡ್, ಎಣ್ಣೆಯ ಆಹಾರಗಳನ್ನು ಹೆಚ್ಚು ತಿನ್ನುವುದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಇತ್ತೀಚೆಗೆ ಮಕ್ಕಳಲ್ಲೂ ಕೂಡ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿದೆ. ಏಕೆಂದರೆ, ಜನ ಸಾಂಪ್ರದಾಯಿಕ ಅಡುಗೆಗಳಿಗಿಂತ ಹೆಚ್ಚಾಗಿ, ಫಾಸ್ಟ್ ಫುಡ್ ಮೊರೆ ಹೋಗುತ್ತಿದ್ದಾರೆ. ಫ್ರಿಜ್‌ನಲ್ಲಿಟ್ಟು ಮೂರ್ನಾಲ್ಕು ದಿನ ಅದೇ ಆಹಾರವನ್ನು ಬಿಸಿ ಮಾಡಿ ಮಾಡಿ ತಿನ್ನುವುದರಿಂದ ಅಂಥ ಆಹಾರಗಳು ಜೀರ್ಣವಾಗಲು ಕಷ್ಟವಾಗುತ್ತದೆ. ಇಂಥ ಆಹಾರಗಳನ್ನು ತಿಂದು, ಬೊಜ್ಜು ಬೆಳೆಯುತ್ತಿದೆ.
ಫೈಬರ್ ಇಲ್ಲದ, ಬರೀ ಕಾರ್ಬೋಹೈಡ್ರೇಟ್ಸ್ ಇರುವ ಆಹಾರಗಳ ಸೇವನೆಯಿಂದ ಬೊಜ್ಜು ಬೆಳೆಯುತ್ತದೆ ಎನ್ನುತ್ತಾರೆ ಡಾಕ್ಟರ್ ಶರ್ಮಾ. ಇಂಥ ಆಹಾರಗಳು ದೇಹಕ್ಕೆ ಸೇರಿ, ದೇಹದಲ್ಲಿ ಫ್ಯಾಟ್ ಸ್ಟೋರೇಜ್ ಮಾಡುತ್ತದೆ. ಇದರಿಂದ ಅನಾರೋಗ್ಯಕರವಾಗಿ ದೇಹದ ತೂಕ ಹೆಚ್ಚುತ್ತದೆ. ಅಲ್ಲದೇ, ಕೂಲ್ ಡ್ರಿಂಕ್ಸ್‌ಗಳನ್ನು, ಸೋಡಾ ಬೆರೆಸಿದ ಪಾನೀಯಗಳನ್ನು ಸೇವಿಸುವುದರಿಂದಲೂ ಬೊಜ್ಜು ಬೆಳೆಯುತ್ತದೆ. ಏಕೆಂದರೆ, ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಕ್ಕರೆ ಇರುತ್ತದೆ.
ಬ್ಯಾಲೆನ್ಸ್ ಡಯಟ್, ವ್ಯಾಯಾಮದಿಂದ ಬೊಜ್ಜು ಕರಗಿಸಲು ಸಾಧ್ಯ. ಸರಿಯಾದ ರೀತಿಯಲ್ಲಿ ವ್ಯಾಯಾಮ ಮಾಡಿದರೆ ನಿಮ್ಮ ದೇಹದ ತೂಕ ಕಡಿಮೆಯಾಗುತ್ತದೆ. ಅಲ್ಲದೇ, ಜಂಕ್ ಫುಡ್, ಕೂಲ್ ಡ್ರಿಂಕ್ಸ್ ಸೇವನೆ ನಿಲ್ಲಿಸಿಬಿಡಿ. ಫ್ರೆಶ್ ಹಣ್ಣು, ತರಕಾರಿ, ಜ್ಯೂಸ್, ಎಳನೀರು ಇವುಗಳ ಸೇವನೆ ಮಾಡಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿನ ಸೇವನೆ ಮಾಡಿ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ವೀಕ್ಷಿಸಿ.
ಹಾರ್ಟ್ ಅಟ್ಯಾಕ್ ಬರುವ ಮುನ್ನ ಏನು ಸೂಚನೆ ಸಿಗುತ್ತದೆ..? ಯಾವ ಕೆಲಸ ಮಾಡಬೇಕು..?