Thursday, November 21, 2024

Latest Posts

ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆ..

- Advertisement -

Spiritual: ಹಿಂದೂಗಳು ಪ್ರತೀ ವರ್ಷ ದೀಪಾವಳಿ ಮುಗಿದ ಬಳಿಕ, ತುಳಸಿ ಪೂಜೆ ಮಾಡುತ್ತಾರೆ. ಈ ದಿನ ತುಳಸಿಯೊಂದಿಗೆ ಸಾಲಿಗ್ರಾಮ ವಿವಾಹ ಮಾಡಲಾಗುತ್ತದೆ. ಹಾಗಾದ್ರೆ ತುಳಸಿ ಮತ್ತು ಸಾಲಿಗ್ರಾಮ ವಿವಾಹದ ಕಥೆಯನ್ನು ತಿಳಿಯೋಣ ಬನ್ನಿ..

ಶ್ರೀವಿಷ್ಣುವಿನ ಪರಮ ಭಕ್ತೆಯಾಗಿದ್ದ ವೃಂದಾಳ ಪತಿಯಾಗಿದ್ದ ಜಲಂಧರ ರಾಕ್ಷಸನಾಗಿದ್ದ. ಅವನು ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅವನಿಂದ ಬೇಸತ್ತ ಋಷಿಮುನಿಗಳು, ವಿಷ್ಣುವಿನ ಬಳಿ ಜಲಂಧನನ ಸಂಹಾರಕ್ಕಾಗಿ ಬೇಡಿಕೆ ಇಟ್ಟರು. ಆದರೆ ವಿಷ್ಣುವಿಗೆ ಜಲಂಧರನನ್ನು ಕೊಲ್ಲುವುದು ಅಷ್ಟು ಸುಲಭವಾಗಿರಲಿಲ್ಲ. ಏಕೆಂದರೆ, ವೃಂದಾ ಪತಿವೃತೆಯಾಗಿದ್ದಳು. ಅವಳ ಪಾತಿವೃತ್ಯ ಹಾಳಾಗದೇ, ಜಲಂಧರನ ಸಂಹಾರ ಮಾಡುವುದು ಕಷ್ಟವಾಗಿತ್ತು.

ಹಾಗಾಗಿ ಶ್ರೀವಿಷ್ಣು, ಜಲಂಧರನ ವೇಷ ಧರಿಸಿ, ವೃಂದಾಳ ಬಳಿ ಹೋಗಿ, ಸರಸದಾಟ ನಡೆಸಿದ. ಅಲ್ಲಿಗೆ ವೃಂದಾಳ ಪಾತಿವೃತ್ಯ ಹಾಳಾಯಿತು. ನಂತರ ಜಲಂಧರನ  ವಧೆ ಮಾಡಲಾಯಿತು. ತಾನು ಆರಾಧಿಸುತ್ತಿದ್ದ ಶ್ರೀವಿಷ್ಣುವೇ, ತನ್ನ ಬಳಿ ಕಪಟದಿಂದ ಬಂದು, ತನ್ನ ಪಾತಿವೃತ್ಯ ಹಾಳು ಮಾಡಿ, ತನ್ನ ಪತಿಯ ಸಾವಿಗೆ ಕಾರಣನಾದ. ಎಂಬ ವಿಷಯ ವೃಂದಾಳಿಗೆ ಗೊತ್ತಾಗುತ್ತಿದ್ದಂತೆ, ಆಕೆ ಅಲ್ಲೇ ಬೂದಿಯಾದಳು.

ಆಗ ಶ್ರೀವಿಷ್ಣು, ತನ್ನ ಭಕ್ತೆಯಾಗಿದ್ದ ವೃಂದಾ ಮುಂದಿನ ಜನ್ಮದಲ್ಲಿ ತುಳಸಿಯಾಗಿ ಹುಟ್ಟಿ, ಎಲ್ಲರಿಂದ ಪೂಜಿಸಲ್ಪಡಲಿ. ವರ್ಷಕ್ಕೆ ಒಮ್ಮೆ ತುಳಸಿ ಪೂಜೆಯ ದಿನ, ತನ್ನ ಸಾಲಿಗ್ರಾಮದೊಂದಿಗೆ ಯಾರು ತುಳಸಿಯ ವಿವಾಹ ಮಾಡುತ್ತಾರೋ, ಅವರ ಸಕಲ ಮನೋಕಾಮನೆಗಳು ಪೂರ್ಣಗೊಳ್ಳಿ ಎಂದು ವರ ನೀಡುತ್ತಾನೆ. ಅತ್ತ ಬೂದಿಯಾಗಿ ಬಿದ್ದ ವೃಂದಾ ತುಳಸಿ ಗಿಡವಾಗುತ್ತಾಳೆ.

ಆದ್ದರಿಂದಲೇ, ಹಿಂದೂಗಳಲ್ಲಿ ತುಳಸಿಗೆ ಉನ್ನತ ಸ್ಥಾನವನ್ನು ನೀಡಲಾಗುತ್ತದೆ. ಪ್ರತಿದಿನ ಯಾವ ಹೆಣ್ಣು ತುಳಸಿಗೆ ದೀಪ ಹಚ್ಚುತ್ತಾಳೋ, ಅವಳಿಗೆ ಉತ್ತಮ ಗುಣವುಳ್ಳ ಪತಿ ಸಿಗುತ್ತಾನೆ. ವಿವಾಹಿತೆಯರ ಜೀವನ ಉತ್ತಮವಾಗಿರುತ್ತದೆ. ಯಾವ ಮನೆಯಲ್ಲಿ ತುಳಸಿ ಸುಂದರವಾಗಿ ಬೆಳೆಯುತ್ತದೆಯೋ, ಆ ಮನೆ ಸದಾ ಅಭಿವೃದ್ಧಿಯಿಂದ ಕೂಡಿರುತ್ತದೆ. ಮತ್ತು ಯಾವ ಮನೆಯಲ್ಲಿ ತುಳಸಿ ಗಿಡ ಬಾಡಿ ಹೋಗುತ್ತದೆಯೋ, ಆ ಮನೆಯಲ್ಲಿ ಸದಾ ಜಗಳವಾಗುತ್ತದೆ. ನಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.

ಪತ್ನಿ ಇಂಥ ಕೆಲಸಗಳನ್ನು ಮಾಡಿದ್ರೆ, ಪತಿ ಜೀವನದಲ್ಲಿ ಸಫಲನಾಗುತ್ತಾನೆ..

ದೇವರ ದಯೆ ಇಲ್ಲದಿದ್ದರೆ, ಹುಲ್ಲುಕಡ್ಡಿಯೂ ಅಲ್ಲಾಡುವುದಿಲ್ಲ ಅಂತಾ ಹೇಳುವುದ್ಯಾಕೆ..?

ಈ 6 ಸ್ಥಳದಲ್ಲಿ ರುದ್ರಾಕ್ಷಿ ಧರಿಸಿ, ಓಡಾಡಬಾರದು..

- Advertisement -

Latest Posts

Don't Miss