ಯುಗಾದಿ ಎಂದರೇನೆ ಹಿಂದೂಗಳ ಪ್ರಮುಖ ಹಬ್ಬಗಳಲ್ಲಿ ಒಂದು. ಇದನ್ನು ವರ್ಷದ ಪ್ರಥಮ ಹಬ್ಬವೆಂದೇ ಹೇಳಬಹುದು. ಇಂಥ ಶುಭ ದಿನದಂದು ಮನೆಯಲ್ಲಿ ಭರ್ಜರಿ ಅಡುಗೆಯಂತು ತಯಾರಾಗೇ ಆಗತ್ತೆ. ಹಾಗಾಗಿ ನಾವಿಂದು ಶ್ರೀಖಂಡವನ್ನ ತಯಾರಿಸೋದು ಹೇಗೆ ಅಂತಾ ಹೇಳಲಿದ್ದೇವೆ.
ಬೇಕಾಗುವ ಸಾಮಗ್ರಿ: 1 ಲೀಟರ್ ಗಟ್ಟಿ ಮೊಸರು, 1 ಟೇಬಲ್ ಸ್ಪೂನ್ ಫ್ರೆಶ್ ಕ್ರೀಮ್, 2 ಸ್ಪೂನ್ ಕೇಸರಿ ಹಾಲು, ಅರ್ಧ ಕಪ್ ಸಕ್ಕರೆ ಪುಡಿ, ಕೊಂಚ ಏಲಕ್ಕಿ ಪುಡಿ, ಅಗತ್ಯವಿದ್ದಷ್ಟು ಡ್ರೈಫ್ರೂಟ್ಸ್.
ಮಾಡುವ ವಿಧಾನ: ಮೊದಲು ಮೊಸರನ್ನ ಒಂದು ಕಾಟನ್ ಬಟ್ಟೆಗೆ ಹಾಕಿ, ಅದರಿಂದ ನೀರನ್ನು ಬೇರ್ಪಡಿಸಬೇಕು. ಈಗ ಮೊಸರು ಇನ್ನೂ ಗಟ್ಟಿಯಾಗುತ್ತದೆ. ಆ ಗಟ್ಟಿ ಮೊಸರನ್ನು ಅದೇ ಕಾಟನ್ ಬಟ್ಟೆಯಲ್ಲಿಟ್ಟು, ಅದರ ಮೇಲೆ ಭಾರವಾದ ವಸ್ತುವನ್ನಿಡಿ. ಆ ಮೊಸರು ಪನೀರ್‌ನಂತೆ ಗಟ್ಟಿಯಾಗಬೇಕು. ಹೀಗೆ 4ರಿಂದ 5 ಗಂಟೆ ಬಳಿಕ ಈ ಮಿಶ್ರಣಕ್ಕೆ ಒಂದು ಟೇಬಲ್ ಸ್ಪೂನ್ ಫ್ರೆಶ್ ಕ್ರೀಮ್ ಮಿಕ್ಸ್ ಮಾಡಿ.
ಜೊತೆಗೆ ಕೇಸರಿ ಹಾಲನ್ನ ಸಹ ಮಿಕ್ಸ್ ಮಾಡಿ. ಶ್ರೀಖಂಡ ಮಾಡುವಾಗ ಮೊಸರನ್ನ ಸರಿಯಾಗಿ ಮಿಕ್ಸ್ ಮಾಡುವುದು ಇಂಪಾರ್ಟೆಂಟ್ ಆಗಿರುತ್ತದೆ. ಈಗ ಇದಕ್ಕೆ ಸಕ್ಕರೆ ಪುಡಿ ಮತ್ತು ಏಲಕ್ಕಿ ಪುಡಿ ಸೇರಿಸಿ. ಅಗತ್ಯವಿದ್ದಲ್ಲಿ ಡ್ರೈ ಫ್ರೂಟ್ಸ್ ಸೇರಿಸಿ, ಫ್ರಿಜ್‌ನಲ್ಲಿಟ್ಟು ಚಿಲ್ ಮಾಡಿ, ಸೇವಿಸಿ.
Ugadi Special: ಈರುಳ್ಳಿ, ಬೆಳ್ಳುಳ್ಳಿ ಬಳಸದೇ ಮಾಡಹುದು ಪಾಲಕ್ ರೈಸ್..
Ugadi Special: ಈ ಬಾರಿ ಯುಗಾದಿಗೆ ಈ ರೀತಿ ಕ್ಯಾರೆಟ್ ಹೋಳಿಗೆ ತಯಾರಿಸಿ..