Wednesday, June 7, 2023

Latest Posts

ಎಫ್ಐಆರ್ ದಾಖಲಿಸಿದ ಸೆಹ್ವಾಗ್ ಪತ್ನಿ..!!

- Advertisement -

ಟೀಮ್ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಪತ್ನಿ ಆರತಿ ಸೆಹ್ವಾಗ್ ತಮ್ಮ ಬುಸಿನೆಸ್ ಪಾಲುದಾರರ ಮೇಲೆ ದೂರು ದಾಖಲಿಸಿದ್ದು, ಇದೀಗ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ತಮ್ಮ ಸಹಿಯನ್ನು ನಕಲು ಮಾಡಿ 4.5 ಕೋಟಿ ಸಾಲವನ್ನು ಪಡೆದಿರೋದಾಗಿ ತಮ್ಮ ಉದ್ಯಮ ಪಾಲುದಾರರ ಮೇಲೆ ಸೆಹ್ವಾಗ್ ಪತ್ನಿ ಕಳೆದ ತಿಂಗಳು ದೂರು ದಾಖಲಿಸಿದ್ರು. ಈ ಆಧಾರದ ಮೇಲೆ ಪೊಲೀಸರು ಇದೀಗ ಇಬ್ಬರು ಆರೋಪಿಗಳ ಮೇಲೆ ಎಫ್ಐಆರ್ ದಾಖಲು ಮಾಡಿದ್ದಾರೆ.

ಆರತಿ ಸೆಹ್ವಾಗ್ ಉದ್ಯಮ ಪಾಲುದಾರರು ಆಕೆಗೆ ತಿಳಿಯದಂತೆ ಸಾಲಗಾರರಿಂದ ಕೋಟಿ ಕೋಟಿ ಹಣ ಸಾಲ ಪಡೆದಿದ್ದಾರೆ. ಅಲ್ಲದೆ ಸಾಲ ಪಡೆಯೋ ವೇಳೆ ತಮ್ಮ ಪತಿ, ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹೆಸರನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಸಾಲ ಪಡೆಯುವ ವೇಳೆ ಆರೋಪಿಗಳು 2 ಪೋಸ್ಟ್ ಡೇಟೆಡ್ ಚೆಕ್ ಗಳನ್ನು ನೀಡಿದ್ದು, ಸಾಲ ಮರುಪಾವತಿ ಮಾಡದ ಹಿನ್ನೆಲೆಯಲ್ಲಿ ಸಾಲ ನೀಡಿದವರು ಕೋರ್ಟ್ ಮೊರೆ ಹೋದಾಗ ವಂಚನೆ ಬಯಲಾಗಿದೆ. ಇನ್ನು ದೂರಿನ ಪ್ರಕಾರ ಪೊಲೀಸರು ಆರತಿ ಸೆಹ್ವಾಗ್ ಉದ್ಯಮ ಪಾಲುದಾರರಾದ ಆರೋಪಿಗಳ ಮೇಲೆ ವಂಚನೆ ಮತ್ತು ವಿಶ್ವಾಸ ದ್ರೋಹ, ಫೋರ್ಜರಿ ಸೆಕ್ಷನ್ ಅಡಿ ಎಫ್ಐಆರ್ ದಾಖಲಿಸಿದ್ದಾರೆ.

ವಿಶ್ವಕಪ್ ನಿಂದ ಹೊರಬಿದ್ದ ಮೇಲೆ ಟೀಂ ಇಂಡಿಯಾದಲ್ಲಿ ಬಿರುಗಾಳಿ.!ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=d83tIbWd5dM
- Advertisement -

Latest Posts

Don't Miss