ದೇಹದಲ್ಲಿ ಸಣ್ಣ ಬದಲಾವಣೆಗಳಾದಾಗಲೇ ಎಚ್ಚೆತ್ತುಕೊಳ್ಳಿ..

Health Tips: ಈಗಾಗಲೇ ಕ್ಯಾನ್ಸರ್ ಬಗ್ಗೆ ಕರ್ನಾಟಕ ಟಿವಿ ಹೆಲ್ತ್ ಟಿಪ್ಸ್‌ನಲ್ಲಿ ಹಲವು ವೈದ್ಯರು ವಿವರಣೆ ನೀಡಿದ್ದಾರೆ. ನಾವು ಯಾವ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳಬೇಕು..? ಯಾವ ರೀತಿ ಕ್ಯಾನ್ಸರ್ ದೇಹದಲ್ಲಿ ಹರಡುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ವೈದ್ಯರು ವಿವರಿಸಿದ್ದಾರೆ. ಅದೇ ರೀತಿ ಇಂದು ವೈದ್ಯರಾದ ಡಾ.ಅರ್ಜುನ್ ಅವರು ಬ್ರೀಸ್ಟ್ ಕ್ಯಾನ್ಸರ್ ಬಗ್ಗೆ ವಿವರಣೆ ನೀಡಿದ್ದಾರೆ.

ಹೆಣ್ಣು ಮಕ್ಕಳು ಪ್ರತಿದಿನ ತಮ್ಮ ಸ್ತನವನ್ನ ಮುಟ್ಟಿ ನೋಡಿಕೊಂಡು, ಆ ಸ್ಥಳದಲ್ಲಿ ಗಂಟಾಗಿದೆಯಾ ಅಂತಾ ನೋಡಿಕೊಳ್ಳಬೇಕು. ಏಕೆಂದರೆ, ಹೀಗೆ ಸಣ್ಣದಾಗಿ ಹುಟ್ಟಿಕೊಳ್ಳುವ ಗಂಟೇ, ಮುಂದೆ ಕ್ಯಾನ್ಸರ್‌ನಂಥ ಮಾರಣಾಂತಿಕ ಖಾಯಿಲೆಯಾಗಿ ಬದಲಾಗುತ್ತದೆ. ಬರೀ ಸ್ತನವಷ್ಟೇ ಅಲ್ಲ, ಕಂಕುಳ ಭಾಗದಲ್ಲಿಯೂ ಕ್ಯಾನ್ಸರ್ ಗಂಟುಗಳಾಗುತ್ತದೆ. ಈ ರೀತಿ ಗಂಟಾಗಿದೆ, ಅಲ್ಲಿ ನೋವು ಶುರುವಾಗಿದೆ ಅಂತಾ ನಿಮಗೆ ಅನ್ನಿಸಿದರೆ, ನೀವು ವೈದ್ಯರಲ್ಲಿ ಹೋಗಿ, ಅದನ್ನು ಪರೀಕ್ಷಿಸಿಕೊಳ್ಳಬೇಕು.

ವೈದ್ಯರು ಹೇಳುವುದೇನೆಂದರೆ, ಇಂಥ ವಿಷಯದಲ್ಲಿ ಮುಜುಗರ ಪಟ್ಟಿಕೊಂಡು, ನೋವನ್ನು ನಿರ್ಲಕ್ಷಿಸಬಾರದು. ಒಮ್ಮೆ ಆ ಗಂಟು ಕ್ಯಾನ್ಸರ್ ಆಗಿ ಬದಲಾದರೆ, ಮತ್ತೆ ಜೀವನ ನಡೆಸುವುದು ಕಷ್ಟವಾಗುತ್ತದೆ. ಇನ್ನೂ ಮುನ್ನೂರು ಖರ್ಚಾಗುತ್ತದೆ ಎಂದು ನೀವು ಉದಾಸೀನ ಮಾಡಿದರೆ, ಲಕ್ಷ ಲಕ್ಷ ದುಡ್ಡು ಖರ್ಚು ಮಾಡುವ ಪರಿಸ್ಥಿತಿ ಬರಬಹುದು. ಹಾಗಾಗಿ ಇಂಥ ವಿಷಯವನ್ನು ಎಂದಿಗೂ ನಿರ್ಲಕ್ಷಿಸಬೇಡಿ ಅಂತಾರೆ ವೈದ್ಯರು.

ಇನ್ನು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬರುವ ವೀಡಿಯೋ ನೋಡಿ, ಜನ ಮನೆ ಮದ್ದು ಮಾಡಲು ಹೋಗುತ್ತಾರೆ. ಆದರೆ ನೀವು ವೈದ್ಯರ ಬಳಿ ಹೋಗಿಯೇ ಈ ಬಗ್ಗೆ ಪರೀಕ್ಷಿಸಿ, ಸರಿಯಾದ ಚಿಕಿತ್ಸೆ ಪಡೆಯಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..

About The Author